Breaking News


ಕಲಬುರಗಿ - ಬೆಂಗಳೂರ ನಡುವೆ ವಿಶೇಷ ರೈಲು | ಜಿಲ್ಲೆ | Vijay Times News

ಕಲಬುರಗಿ - ಬೆಂಗಳೂರ ನಡುವೆ ವಿಶೇಷ ರೈಲು

ಕಲಬುರಗಿ - ಬೆಂಗಳೂರ ನಡುವೆ ವಿಶೇಷ ರೈಲು 
ವಿಜಯ ಟೈಮ್ಸ್ ನ್ಯೂಸ್ ಬೆಂಗಳೂರು
ದೀಪಾವಳಿ ಹಬ್ಬಕ್ಕಾಗಿ ಕಲಬುರಗಿಗೆ ಬರುವರಿಗೆ ಸಂತೋಷದ ಸುದ್ದಿ, ಬೆಂಗಳೂರು-ಕಲಬುರಗಿ ವಿಶೇಷ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ೨ ಟ್ರೀಪ್ ರೈಲನ್ನು ಓಡಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. 
ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಯಿಂದ ಕಲಬುರಗೆ ನಡುವೆ ವಿಶೇಷ ರೈಲು ಓಡಿಸುತ್ತಿದೆ ಇದರಿಂದ ಹಬ್ಬಕ್ಕೆ ಬರುವರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ. 
ರೈಲು ಸಂಖ್ಯೆ 06533 ಅಕ್ಟೋಬರ ೩೦ ಹಾಗೂ ನವೆಂಬರ ೨ ರಂದು ಬೆಂಗಳೂರಿನಿAದ ಪ್ರಯಾಣ ಪ್ರಾರಂಭವಾಗುತ್ತದೆ. ಎಸ್‌ಎಂ ವಿಶ್ವೇಶ್ವರಯ್ಯ ಬೆಂಗಳೂರು ರೈಲು ನಿಲ್ದಾಣದಿಂದ ಅಕ್ಟೋಬರ ೩೦ ಮತ್ತು ನವೆಂಬರ ೨ ರಂದು ರಾತ್ರಿ ೯:೧೫ ಕ್ಕೆ ಹೊರಡಲಿದೆ.
ಕಲಬುರಗಿ- ಬೆಂಗಳೂರು: 
ಕಲಬುರಗಿಯಿಂದ ಇದೇ ರೈಲು 06534 ಅಕ್ಟೋಬರ್ ೩೧ ಮತ್ತು ನವೆಂಬರ ೩ ರಂದು ಬೆಳಗ್ಗೆ ೯:೩೦ಕ್ಕೆ ಹೊರಡಲಿರುವ ರೈಲು ಬೆಂಗಳೂರು ರಾತ್ರಿ ೮ ಗಂಟೆಗೆ ತಲುಪಲಿದೆ. 
ಎಲ್ಲೆಲ್ಲಿ ನಿಲ್ಲುತ್ತಿದೆ ಈ ರೈಲು: 
ಯಲಹಂಕ ಮಾರ್ಗವಾಗಿ, ಧಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರ, ಕೃಷ್ಣಾ, ಯಾದಗಿರಿ, ಶಹಾಬಾದ್ ನಿಲ್ದಾಣಗಳಲ್ಲಿ ಈ ರೈಲು ನಿಲ್ಲುತ್ತದೆ. 
ಬೋಗಿಗಳ ಸಂಖ್ಯೆ : 
ಹಬ್ಬದ ಈ ವಿಶೇಷ ರೈಲುನಲ್ಲಿ ಒಟ್ಟು 19 ಬೋಗಿಗಳನ್ನು ಅಳವಡಿಸಲಾಗಿದೆ. ೧೨ ಜನರಲ್(ಸಾಮಾನ್ಯ) ೩ ಸ್ಲೀಪರ್ ಕ್ಲಾಸ್, ೨ ಎಸಿ, ೧ ಲಗೇಜ್ /ಬ್ರೇಕ್ ಎಸ್‌ಎಲ್‌ಆರ್‌ಡಿ ಸೇರಿಸಿ. ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡಿಯಬಹುದು. 

Copyright © 2026 Vijay Times News. All Rights Reserved. Website by Samanth