Breaking News


ಶಹಾಬಾದ ತಾಲೂಕಿನ ಭಂಕೂರ ವಾಡಾ ತಾಂಡದಲ್ಲಿ ನಡೆದ ಗಣರಾಜ್ಯೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಸಮಾಜ ಸೇವಕರಾದ ರಾಜು ಪವಾರ ಅವರು ನೀಡಿದರು. | ಜಿಲ್ಲೆ | Vijay Times News

ಶಹಾಬಾದ ತಾಲೂಕಿನ ಭಂಕೂರ ವಾಡಾ ತಾಂಡದಲ್ಲಿ ನಡೆದ ಗಣರಾಜ್ಯೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಸಮಾಜ ಸೇವಕರಾದ ರಾಜು ಪವಾರ ಅವರು ನೀಡಿದರು.

ಶಹಾಬಾದ ತಾಲೂಕಿನ ಭಂಕೂರ ವಾಡಾ ತಾಂಡದಲ್ಲಿ ನಡೆದ ಗಣರಾಜ್ಯೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಸಮಾಜ ಸೇವಕರಾದ ರಾಜು ಪವಾರ ಅವರು ನೀಡಿದರು.

ಭಂಕೂರ ವಾಡಾ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ 
 ಶಹಾಬಾದ್ 
ತಾಲೂಕಿನ ಭಂಕೂರ ವಾಡಾ ತಾಂಡದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೭ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕ ರಾಜು ಪವಾರ್ ಅವರು, "ಭಾರತದ ಸಂವಿಧಾನವು ನಮಗೆ ಹಕ್ಕು ಮತ್ತು ಜವಾಬ್ದಾರಿಗಳನ್ನು ನೀಡಿದೆ. ಇಂದಿನ ವಿದ್ಯಾರ್ಥಿಗಳು ಶಿಸ್ತು ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಂಡು ಬೆಳೆಯಬೇಕು. ಶಿಕ್ಷಣದ ಜೊತೆಗೆ ಸಮಾಜದ ಏಳಿಗೆಗಾಗಿ ಶ್ರಮಿಸುವ ಗುಣವನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು," ಎಂದು ಕಿವಿಮಾತು ಹೇಳಿದರು. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಅವರು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಗೋವರ್ಧನ ರಾಠೋಡ ಅವರು ವಹಿಸಿದ್ದರು. ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಮಹಂತ ಜಾಧವ, ನಾರಾಯಣ ರಾಠೋಡ ಉಮಜಿ, ಗ್ರಾಮ ಪಂಚಾಯತ್ ಸದಸ್ಯರಾದ ಭರತ ಜಾಧವ ಅವರು ಉಪಸ್ಥಿತರಿದ್ದರು. ಶಿಕ್ಷಕರಾದ ಸಾವಿತ್ರಿ ಡಿ.ಕೆ. ನಿರೂಪಿಸಿದರು, ಜಗದೇವಪ್ಪ ಎಸ್.ಕೆ. ಸ್ವಾಗತಿಸಿದರು.   ಕಾರ್ಯಕ್ರಮದಲ್ಲಿ  ಗ್ರಾಮದ ಹಿರಿಯರು, ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದರು.

Copyright © 2026 Vijay Times News. All Rights Reserved. Website by Samanth