ಸಕಲ ಸಿದ್ಧತೆಯೊಂದಿಗೆ ದೇವಿ ಜಾತ್ರೆ
ಅಲ್ದಿಹಾಳ ಮರಿಯಮ್ಮ ದೇವಿ ಜಾತ್ರೆ – ಕುಂಭ ಮೆರವಣಿಗೆ - ಸಂಗೀತ ಕಾರ್ಯಕ್ರಮ – ಧರ್ಮಸಭೆ
ತಾಲೂಕಿನ ಸುಕ್ಷೇತ್ರ ಅಲ್ದಿಹಾಳ ಗ್ರಾಮದಲ್ಲಿ ಶಕ್ತಿ ದೇವತೆ ಶ್ರೀಮರಿಯಮ್ಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಂಗಳವಾರ ದಿ.೨೭ ರಿಂದ ಪ್ರಾರಂಭವಾಗುತ್ತಿದೆ. ೩ ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪೀಠಾಧಿಪತಿ ಪೂಜ್ಯ ರಾಜು ಪೂಜಾರಿ ಅವರು ತಿಳಿಸಿದರು.
ದಿ.೨೭ ರಂದು ಬೆಳಗ್ಗೆ ೬ ಗಂಟೆಗೆ ಮರಿಯಮ್ಮ ದೇವಿಯ ಮೂರ್ತಿಗೆ ಮಹಾರುದ್ರಾಭಿಷೇಕ ವಿವಿಧ ಪೂಜೆಗಳನ್ನು ನೇರವೇರಿಸಿದ ನಂತರ ಮಧ್ಯಾಹ್ನ ೧೧ ರಿಂದ ಮಹಾಪ್ರಸಾದ ನಡೆಯುತ್ತದೆ.
ಸಂಜೆ ೬ ಗಂಟೆಗೆ ಕಟ್ಟಿಮನಿ ಹಿರೇಮಠ ಸಂಸ್ಥಾನ ಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರರ ಸಾನಿಧ್ಯದಲ್ಲಿ ಧರ್ಮಸಭೆ ಜರುಗುತ್ತದೆ. ಶ್ರೀನಿವಾಸ ಸರಡಗಿಯ ಪೂಜ್ಯರಾದ ಅಪ್ಪಾರಾವ ದೇವಿ ಮುತ್ಯಾ ಅವರು ನೇತೃತ್ವ ವಹಿಸಲಿದ್ದಾರೆ. ಕಟ್ಟಿಸಂಗಾವಿಯ ವೇದಿ ಮೂರ್ತಿ ಬಸವಯ್ಯ ಸ್ವಾಮಿ ತಾತಾ ಮಹಾನಗರದ ಯಲ್ಲಾಲಿಂಗ ಪುಣ್ಯಾಶ್ರಮದ ಪೀಠಾಧಿಪತಿ ಜೇಮಸಿಂಗ ಮಹಾರಾಜರು ಅಧ್ಯಕ್ಷತೆ ವಹಿಸಲಿದ್ದು. ದೇವಸ್ಥಾನದ ಪೀಠಾಧಿಪತಿ ಪೂಜ್ಯ ರಾಜು ಪೂಜಾರಿ ಹಾಗೂ ರಾಜಕೀಯ ಮುಖಂಡರು ಸಮಾಜ ಸೇವಕರು ಧರ್ಮಸಭೆಯಲ್ಲಿ ಪಾಲ್ಗೊಳ್ಳವರು. ಧರ್ಮಸಭೆಯ ನಂತರ ವಾಸು ಚವ್ಹಾಣ್ ಅವರ ವಿಜಯ ಮೆಲೋಡಿಸ್ ಸಂಗೀತ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ಬುಧವಾರ ದಿ.೨೮ ರಂದು ಮಾಣಿಕ ಗುತ್ತೇದಾರ ಅವರ ಮನೆಯಿಂದ ಘಟವನ್ನು ಗ್ರಾಮದ ಮುಖ್ಯ ರಸ್ತೆಯ ಮೂಲಕ ವಿವಿಧ ವಾದ್ಯಗಳೊಂದಿಗೆ ಭವ್ಯವಾಗಿ ಮೆರವಣಿಗೆ ದೇವಸ್ಥಾನಕ್ಕೆ ತಲುಪಲಿದ್ದು, ಮಧ್ಯಾಹ್ನ ರಫಿಕ್ ಮಾಲಿ ಪಟೇಲ್ ಅವರ ಮನೆಯಿಂದ ದೇವಿಗೆ ಛಾಜಾ ತಲುಪುವುದು ನಂತರ ಕಾಶಪ್ಪ ದೊಡ್ಡಮನಿ ಅವರು ಮನೆಯಿಂದ ಕುಂಭ, ಕಳಸ ದೇವಸ್ಥಾನಕ್ಕೆ ತರಲಾಗುತ್ತದೆ. ರಾತ್ರಿ ೯ ಗಂಟೆಗೆ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದ್ದು.
ಗುರುವಾರ ದಿ.೨೯ ರಂದು ಬೆಳಗ್ಗೆ ೮ ಕ್ಕೆ ಜಂಗಿ ಪೈಲವಾನರ ಕುಸ್ತಿ ಪಂದ್ಯ ನಡೆಯಲಿದ್ದು. ಶಕ್ತಿ ದೇವತೆ ಶ್ರೀ ಮರಿಯಮ್ಮ ದೇವಿಯ ಜಾತ್ರೆ ವಿವಿಧ ರಾಜ್ಯದಿಂದ ಭಕ್ತರು ಆಗಮಿಸಿ ದೇವಿಗೆ ಭಕ್ತಿಯನ್ನು ಸಮರ್ಪಿಸಲಾಗುತ್ತದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು.
ಮುಂಬೈಯ ರಾಜು ಪವಾರ, ರಫೀಕ ಪಟೇಲ್ ಮಾಲಿಗೌಡ, ದೇವಸ್ಥಾನ ಸಮಿತಿಯವರು ಮಾಹಿತಿಯನ್ನು ನೀಡಿದ್ದಾರೆ.
“ ಅಲ್ದಿಹಾಳ ಮರಿಯಮ್ಮ ದೇವಿಯ ದೇವಸ್ಥಾನದಲ್ಲಿ ಸರ್ವ ಸಮಾಜದವರು ಸೇವೆ ಮಾಡಿ ಆರಾಧನೆ ಮಾಡುವ ವಾಡಿಕೆ ಇದೆ, ಭಕ್ತರಿಗೆ ಜೀವನದಲ್ಲಿ ಒಳಿತು ಮಾಡುವ ದೇವಿಯ ಭಕ್ತರು ದೇಶದ ವಿವಿಧ ಕಡೆ ವಾಸವಾಗಿದ್ದು, ಜಾತ್ರೆಯಲ್ಲಿ ಬಂದು ದೇವಿಯ ಸೇವೆಯನ್ನು ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ. - ಪೂಜ್ಯ ರಾಜು ಪೂಜಾರಿ, ಪೀಠಾಧಿಪತಿ ಮರಿಯಮ್ಮ ದೇವಿ ದೇವಸ್ಥಾನ.
Copyright © 2025 Vijay Times News. All Rights Reserved.
Website by Samanth