ವೀರಶೈವ ವಿದ್ಯಾರ್ಥಿ ಘಟಕಕ್ಕೆ ಅರುಣ ಸಾತಿಹಾಳ ನೇಮಕ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಶಹಾಬಾದ ನಗರದ ಯುವಕ ಅರುಣ ಬಸವರಾಜ ಸಾತಿಹಾಳ ಅವರು ಅಖಂಡ ಕರ್ನಾಟಕ ವೀರಶೈ ಲಿಂಗಾಯತ ಸಮಾಜದ ವಿದ್ಯಾರ್ಥಿ ಘಟಕದ ತಾಲೂಕ ಅಧ್ಯಕ್ಷರಾಗಿ ನೇಮಮಾಡಲಾಗಿದೆ ಎಂದು ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಚೇತನ ಪ್ರಭುಲಿಂಗಪ್ಪ ಅವರು ತಿಳಿಸಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಸಂಘಟನೆಯ ತತ್ವಸಿದ್ಧಾಂತ, ಶಿಸ್ತು ಮತ್ತು ನಾವೆಲ್ಲರೂ ಒಂದೇ ಎಂದು ಕಾರ್ಯನಿರ್ವಹಿಸುವುದು. ವಿದ್ಯಾರ್ಥಿ ಘಟಕದ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿ, ಸಂಘಟಿಸಿ, ಸದಸ್ಯರನ್ನಾಗಿ ಮಾಡಿ ಸಂಘಟನೆಯ ಕಲ್ಯಾಣಕ್ಕಾಗಿ ಶ್ರಮಿಸಬೇಕೆಂದು ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಚೇತನ ಪ್ರಭುಲಿಂಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎಸ್‌ಬಿಐ ಬ್ಯಾಂಕ ವತಿಯಿಂದ ಪತ್ರಕರ್ತರಿಗೆ ಸನ್ಮಾನ
ವಿಜಯ ಟೈಮ್ಸ್ ನ್ಯೂಸ್
ಶಹಾಬಾದ ತಾಲೂಕಿನ ಭಂಕೂರ ಎಸ್‌ಬಿಐ ಬ್ಯಾಂಕ ವತಿಯಿಂದ ತಾಲೂಕಿನ ಪತ್ರಕರ್ತರಾದ ವಾಸುದೇವ ಚವ್ಹಾಣ, ಕೆ.ರಮೇಶ ಭಟ್ಟ, ನಿಂಗಣ್ಣ ಜಂಬಗಿ, ಲೋಹಿತ ಕಟ್ಟಿ, ಶಿವುಕುಮಾರ ಕುಸಾಳೆ, ಖಾಜಾ ಪಟೇಲ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ ವ್ಯವಸ್ಥಾಪಕ ದೀಪಕ ಕುಮಾರ, ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ ಸುರೇಶ ಮೆಂಗನ್, ಭರತ ಧನ್ನಾ, ಶಂಕರ ಜಾನಾ, ಶಕೀಲ ಪಟೇಲ, ಜಾಕೀರ ಸೇಠ, ಶಿವಯೋಗಿ ಬಣಕಾರ ಇತರರು ಇದ್ದರು.
ಶಹಾಬಾದ ತಾಲೂಕಿನ ಭಂಕೂರನ ಎಸ್‌ಬಿಐ ಬ್ಯಾಂಕ್‌ನಿAದ ಡಾ.ಅಂಬೇಡ್ಕರ ಜಯಂತೋತ್ಸವ ನಿಮಿತ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ವ್ಯವಸ್ಥಾಪಕ ದೀಪಕ ಕುಮಾರ, ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ, ಮುಖಂಡರಾದ ಸುರೇಶ ಮೆಂಗನ್, ಭರತ ಧನ್ನಾ, ಮೌಲಾನಾ ಇತರರು ಇದ್ದರು.
ಡಾ.ಅಂಬೇಡ್ಕರ ಜಯಂತಿ ಪ್ರಯುಕ್ತ
ಎಸ್‌ಬಿಐನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ತಾಲೂಕಿನ ಭಂಕೂರನ ಎಸ್‌ಬಿಐ ಬ್ಯಾಂಕ್ ವತಿಯಿಂದ ಡಾ.ಅಂಬೇಡ್ಕರ ಅವರು ೧೩೪ನೇ ಜಯಂತೋತ್ಸವ ನಿಮಿತ್ತ ಬ್ಯಾಂಕ್ ವ್ಯಾಪ್ತಿಗೆ ಬರುವ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಹಾಗೂ ಪತ್ರಕರ್ತರಿಗೆ, ಸತ್ಕರಿಸುವ ಮೂಲಕ ಆಚರಿಸಲಾಯಿತು.
ಬ್ಯಾಂಕ್ ವ್ಯವಸ್ಥಾಪಕ ದಿಲೀಪ ಕುಮಾರ ಅವರು ಡಾ.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಂಬೇಡ್ಕರ ೧೩೪ನೇ ಜಯಂತೋತ್ಸವ ಸಮಿತಿ ಗೌರವ ಅಧ್ಯಕ್ಷ ಸುರೇಶ ಮೆಂಗನ್ ಮಾತನಾಡಿ ಬ್ಯಾಂಕ್‌ನಲ್ಲಿ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ, ಅವರನ್ನು ಉತ್ತೇಜಿಸುವ ಕಾರ್ಯ ಶ್ಲಾಘನೀಯವಾಗಿದೆ. ಅಂಬೇಡ್ಕರ ಬದುಕು, ಸಾಧನೆ ಮಕ್ಕಳಿಗೆ ಹೊಸ ಸ್ಫೂರ್ತಿ ತರಲಿದೆ ಎಂದು ಹೇಳಿದರು. ಪತ್ರಕರ್ತ ಲೋಹಿತ ಕಟ್ಟಿ, ಮೌಲಾನಾ ಮಾತನಾಡಿದರು.
ಕಳೆದ ಬಾರಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಕರಿಷ್ಮಾ, ಪೂಜಾ, ಮಲ್ಲಿಕಾರ್ಜುನ, ಪ್ರೇಮಾ, ಭಾವನಾ, ತರುಣ ವಿಜಯಶ್ರೀ ಅವರನ್ನು ಹಾಗೂ ಪತ್ರಕರ್ತರನ್ನು ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ, ಶಿವಯೋಗಿ ಬಣಕಾರ, ಅನೀಲ ಮೈನಾಳಕರ್, ಸುರೇಶ ಕುಲಕರ್ಣಿ ಮರಲಿಂಗ ಯಾದಗಿರಿ, ಶಕೀಲ ಪಟೇಲ, ಜಾಕೀರ ಸೇಠ, ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ವಿಜಯಕುಮಾರ ಸೇರಿದಂತೆ ಇತರರು ಇದ್ದರು.
ಭರತ ಧನ್ನಾ ನಿರೂಪಿಸಿದರು. ಶಂಕರ ಜಾನಾ ಕ್ರಾಂತಿ ಗೀತೆ ಹಾಡಿದರು. ಮೌಲಾನ ವಂದಿಸಿದರು.
ಶಹಾಬಾದ ನಗರ ಸಭೆ ಕಚೇರಿಯ ಮುಂದೆ ಇರುವ ಡಾ.ಅಂಬೇಡ್ಕರ ಪುತ್ಥಳಿಗೆ ನಗರ ಸಭೆ ಅಧ್ಯಕ್ಷೆ ಚಂಪಾಬಾಯಿ ಮೇಸ್ತಿç ಮಾಲಾರ್ಪಣೆ ಮಾಡಿದರು. ಡಾ.ಎಂ.ಎ.ರಶೀದ, ಜಗದೀಶ ಚೌರ, ಮಲ್ಲಿನಾಥ ರಾವೂರ, ಡಾ.ಕೆ.ಗುರುಲಿಂಗಪ್ಪ, ಮರೆಪ್ಪ ಹಳ್ಳಿ ಇತರರು ಇದ್ದರು.
ಶಹಾಬಾದ ವಿಜೃಂಭಣೆಯ ಡಾ.ಅಂಬೇಡ್ಕರ ಜಯಂತಿ.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜಯಂತೋತ್ಸವ ವಿಜೃಂಭಣೆಯಿAದ ನಡೆಯಿತು. ಸರಕಾರಿ ಕಚೇರಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ, ವೃತ್ತಗಳಲ್ಲಿ ಡಾ.ಅಂಬೇಡ್ಕರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಯಿತು. ಯುವಕರಿಂದ ಬೈಕ್ ರ‍್ಯಾಲಿ ನಡೆಯಿತು. ನಗರ ಸಭೆ ಕಚೇರಿಯಲ್ಲಿ ಅಧ್ಯಕ್ಷೆ ಚಂಪಾಬಾಯಿ ಮೇಸ್ತಿç ಡಾ.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಜಗದೀಶ ಚೌರ, ಜಿಲ್ಲಾ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ, ತಾಪಂ.ಇಒ ಮಲ್ಲಿನಾಥ ರಾವೂರ, ಗ್ರೇಡ್ -೨ ತಹಶೀಲ್ದಾರ ಗುರುರಾಜ ಸಂಗಾವಿ, ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಎಇಇ ಶರಣು ಪೂಜಾರಿ, ನಗರ ಸಭೆ ಉಪಾಧ್ಯಕ್ಷೆ ಫಾತೀಮಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷೆ ಪೀರಮ್ಮಾ ಪಗಲಾಪುರ, ದಸಂಸ ರಾಜ್ಯ ಸಂ.ಸAಚಾಲಕ ಮರೆಪ್ಪ ಹಳ್ಳಿ, ಕರಾದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ, ನಿಂಗಣ್ಣ ಪೂಜಾರಿ, ಸುರೇಶ ಮೆಂಗನ್, ಶಿವರಾಜ ಕೋರೆ, ಶಂಕರ ಅಳ್ಳೊಳ್ಳಿ, ವಿಜಯಕುಮಾರ ಹಳ್ಳಿ, ನಾಗರಾಜ ಸಿಂಘೆ, ಸಾಹೇಬಗೌಡ ಬೊಗುಂಡಿ, ಕಿರಣ ಕೋರೆ, ಶರಣು ಪಗಾಲಾಪುರ, ಬಾಕ್ರೋದ್ದಿನ್ ಸೇಠ್,ಡಾ.ಅಹ್ಮದ ಪಟೇಲ, ಸಾಬೇರಾ ಬೇಗಂ, ನಾಗೇಂದ್ರ ಕರಣಿಕ, ಸೇರಿದಂತೆ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು. ಜಯಂತೋತ್ಸವ ನಿಮಿತ್ತ ತಾಪಂ. ಪಂಚಾಯತ ಕಚೇರಿಯಲ್ಲಿ ಹಾಗೂ ಬಸವೇಶ್ವರ ವೃತ್ತದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಡಿವೈಎಸ್‌ಪಿ ಕಚೇರಿಯಲ್ಲಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪೊಲೀಸ್ ಠಾಣೆಯಲ್ಲಿ ಪಿಐ ನಟರಾಜ ಲಾಡೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿಬ್ಬಂದಿ ವರ್ಗದವರು ಇದ್ದರು.
ಶಹಾಬಾದ ಮಂಡಲ ಬಿಜೆಪಿ ವತಿಯಿಂದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಅವರ ಪುತ್ಥಳಿಗೆ ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾಲಾರ್ಪಣೆ ಮಾಡಿದರು.
ಬಿಜೆಪಿಯಿಂದ ಡಾ.ಅಂಬೇಡ್ಕರ ಜಯಂತಿ
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ಮಂಡಲ ಬಿಜೆಪಿ ವತಿಯಿಂದ ಪಕ್ಷದ ಕಚೇರಿಯಲ್ಲಿ ಡಾ.ಅಂಬೇಡ್ಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತೋತ್ಸವ ಆಚರಿಸಿದರು. ಪಕ್ಷದ ಮುಖಂಡರಾದ ಚಂದ್ರಕಾAತ ಗೊಬ್ಬುರಕರ ಮಾತನಡಿದರು. ಮಾಜಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ, ಸಿದ್ರಾಮ ಕುಸಾಳೆ, ಮಹಾದೇವ, ಸದಾನಂದ ಕುಂಬಾರ, ಶಶಿಕಲಾ ಸಜ್ಜನ್ ನಾರಾಯಣ ಕಂದಕೂರ, ರಾಜು ಕುಂಬಾರ, ಅನೀಲ ಬೊರಗಾಂವಕರ್, ಯಲ್ಲಪ್ಪ ದಂಡಗುಲಕರ್, ಭೀಮಯ್ಯ ಗುತ್ತೇದಾರ ಬಸವರಾಜ ಬಿರಾದಾ, ಶಾಂತಕುಮಾರ ಮಾಣಿಕ, ಕನಕಪ್ಪ ದಂಡಗುಲಕರ್, ಕಾಶಢಣ್ಣ ಚನ್ನೂರ, ಸಾಬಣ್ಣ ಬೆಳಗುಂಪಿ ಸೇರಿದಂತೆ ಕಾರ್ಯಕರ್ತರು ಇದ್ದರು. ದೇವದಾಸ ಜಾಧವ ನಿರೂಪಿಸಿದರು. ದಿನೇಶ ಗೌಳಿ ವಂದಿಸಿದರು. ಡಾ.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು.
ಶಹಾಬಾದ ನಗರದಲ್ಲಿ ಸ್ಕೂಪ್ಸ್ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜನ್ಮದಿನೋತ್ಸವ ಅಂಗವಾಗಿ "ಅಂಬೇಡಕರ ಅವರ ಪ್ರಬುದ್ದ ಭಾರತ ಮತ್ತು ಮಹಿಳೆ" ಹಾಗೂ ಆದರ್ಶ ಭೀಮ ಪ್ರಶಸ್ತಿ" ಪ್ರಧಾನ ಕಾರ್ಯಕ್ರಮವನ್ನ ಮರೆಪ್ಪ ಹಳ್ಳಿ, ಪುಷ್ಪ ನಮನ ಸಲ್ಲಿಸಿ, ಉದ್ಘಾಟಿಸಿದರು. ಜಗದೀಶ ಚೌರ, ಡಾ.ಕರಿಗೂಳೇಶ್ವರ, ವಿಜಯಲಕ್ಷಿö್ಮÃ ಪಾಟೀಲ, ಶಂಕರ ಅಳ್ಳೊಳ್ಳಿ ಇತರರು ಇದ್ದರು.
ಹೆಣ್ಣು ಮಕ್ಕಳಲ್ಲಿ ಪ್ರಭುದ್ದತೆ ಬರಬೇಕು.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಹೆಣ್ಣು ಮಕ್ಕಳು ಇಂದು ಗ್ರಾಪಂ. ಅಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಳ್ಳುವದಕ್ಕೆ ಡಾ.ಅಂಬೇಡ್ಕರ ಅವರ ಸಂವಿಧಾನವೇ ಕಾರಣವಾಗಿದೆ. ಈ ಕುರಿತು ಮಹಿಳೆಯರು ಆತ್ಮಾವಲೋಕನ ಮಾಡಿಕೊಳ್ಳಬೇಕು, ಅದಕ್ಕಾಗಿ ಹೆಣ್ಣು ಮಕ್ಕಳಲ್ಲಿಯೇ ಪ್ರಬುದ್ದತೆ ಬರಬೇಕು ಎಂದು ಮಹಾಗಾಂವ ಕ್ರಾಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ, ಸಂಶೋಧಕ ಮಾರ್ಗದರ್ಶಕರಾದ ಡಾ.ಕರಿಗೂಳೇಶ್ವರ ಹೇಳಿದರು.
ಅವರು ನಗರದ ಎಸ್.ಎಸ್.ಮರಗೋಳ ಮಹಾವಿದ್ಯಾಲಯದಲ್ಲಿ ಸಮಗ್ರ ಕರ್ನಾಟಕ ಉಪಾಧ್ಯಾಯರ ಪ್ರಗತಿಪರ ಸಂಘ ವತಿಯಿಂದ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜನ್ಮದಿನೋತ್ಸವ ಅಂಗವಾಗಿ "ಅಂಬೇಡಕರ ರವರ ಪ್ರಬುದ್ದ ಭಾರತ ಮತ್ತು ಮಹಿಳೆ" ಹಾಗೂ ಆದರ್ಶ ಭೀಮ ಪ್ರಶಸ್ತಿ" ಪ್ರಧಾನ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡುತ್ತ, ಅಂಬೇಡ್ಕರ ಅವರು ದೇಶದಲ್ಲಿ ಅತಿ ಹೆಚ್ಚು ಶೋಷಣೆಗೆ ಒಳಗಾದವಳು ಮಹಿಳೆ ಎಂದು ತಿಳಿದು ಅದಕ್ಕಾಗಿಯೇ ಸಂವಿಧಾನದಲ್ಲಿ ಶೇ. ೫೦ ರಷ್ಟು ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದರು, ಒಬಿಸಿ ಮಹಿಳಾ ಮೀಸಲಾತಿ ಹಿಂದೂ ಕೋಡ್ ಬಿಲ್ ಸಂಸತ್‌ನಲ್ಲಿ ಬಿದ್ದು ಹೋಗುತ್ತದೆ ಎಂದು ಗೊತ್ತಾದಾಗ ಅವರು ತಮ್ಮ ಸ್ಥಾನಕ್ಕೆ ರಾಜೇನಾಮೆ ನೀಡಿದ್ದರು. ಮಹಿಳೆಯರು ಬುದ್ದ ಬಸವ, ಅಂಬೇಡ್ಕರ ಅವರನ್ನು ಅರ್ಥ ಮಾಡಿಕೊಂಡು ಬದಲಾವಣೆ ಮಾಡಿಕೊಳ್ಳಬೇಕು, ಪ್ರಬುದ್ದತೆ ಕೇವಲ ಮಹಿಳೆಯರಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಉದ್ಘಾಟನೆ ನೇರವೇರಿಸಿದ ದಸಂಸ ರಾಜ್ಯ ಸಂ.ಸAಚಾಲಕ ಮರೆಪ್ಪ ಹಳ್ಳಿ ಮಾತನಾಡಿ ಮಹಿಳೆಯರಿಗಾಗಿ ಬುದ್ದ, ಬಸವ ಅವರು ಕೊಟ್ಟ ಸಂದೇಶವನ್ನು ಡಾ.ಅಂಬೇಡ್ಕರ ಅವರು ಸಂವಿಧಾನದ ಮೂಲಕ ಕೊಟ್ಟಿದ್ದಾರೆ, ಸ್ವಾತಂತ್ರö್ಯ ಬಂದು ೭೫ ವರ್ಷದ ನಂತರ ಇಂದು ಜಿಪಂ.ತಾಪA.ಗ್ರಾಪA.ಗಳಲ್ಲಿ ಮಹಿಳೆಯರಿಗೆ ಸಮಾನತೆ ದೊರಕುತ್ತಿದೆ, ಸಮ ಸಮಾಜ ನಿರ್ಮಾಣವಾಗಬೇಕಾದರೆ, ಬುದ್ದ, ಬಸವ ತತ್ವಗಳು, ಅಂಬೇಡ್ಕರ ಅವರ ಸಂವಿದಾನದ ಆಶಯಗಳ ಪ್ರಚಾರ ಆಗಬೇಕು ಎಂದು ಹೇಳಿದರು.
೧೩೪ನೇ ಜಯಂತೋತ್ಸವ ಗೌರವ ಅಧ್ಯಕ್ಷ ಸುರೇಶ ಮೆಂಗನ್, ಸ್ಕೂಪ್ಸ್ನ ಜಿಲ್ಲಾ ಅಧ್ಯಕ್ಷ ಗುರುಪಾದ ಕೋಗನೂರ, ಶಿವಶರಣಪ್ಪ ಮಂಠಾಳೆ ಮಾತನಾಡಿದರು. ವೇದಿಕೆ ಮೇಲೆ ತಹಶೀಲ್ದಾರ ಜಗದೀಶ ಚೌರ, ೧೩೪ನೇ ಜಯಂತೋತ್ಸವ ಸಮಿತಿ ಅಧ್ಯಕ್ಷ ಶಂಕರ ಅಳ್ಳೊಳ್ಳಿ, ಡಾ.ಚಿದಾನಂದ ಕುಡ್ಡನ್, ಪ್ರವೀನ ಹೇರೂರ, ಕೃಷ್ಣಪ್ಪ ಕರಣಿಕ, ಶರಣಬಸಪ್ಪ ಕೋಬಾಳ, ಪ್ರೊ.ಕೆ.ಬಿ.ಬಿಲ್ಲವ್, ನರೇಂದ್ರ ವರ್ಮಾ, ರವಿಕುಮಾರ ಹಾದಿಮನಿ,ವಿಶಾಲ್ ಕುಮಾರ ಜಿಡಗೆ, ಸೇರಿದಂತೆ ರಾಜ್ಯ,ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದು. ವಿಜಯಲಕ್ಷಿö್ಮÃ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಶರಣಕುಮಾರ ಪ್ರಾರ್ಥಿಸಿದರು, ಸುರೇಕಾ ಪ್ರಾಸ್ತಾವಿಕ ಮಾತನಾಡಿದರು. ಸಾಮೂಹಿಕ ಸಂವಿಧಾನ ಪೀಠಿಕೆ ಓದಲಾಯಿತು. ಸುಮಂಗಲಾ ನಿರೂಪಿಸಿದರು. ಶಂಕರ ಜಾನಾ ಸಂಗಡಿಗರಿAದ ಭೀಮ ಗೀತೆ, ಕು.ಜಮುನಾ ಅವರಿಂದ ಭರತ ನಾಟ್ಯ, ಡಿ.ಸ್ಪೀರಿಟ್ ಡಾನ್ಸ್ ಅಕೆಡೆಮಿ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
..................
ಪ್ರಶಸ್ತಿ ಪುರಸ್ಕೃತರು
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮರೆಪ್ಪ ಹಳ್ಳಿ, ಕೃಷ್ಣಪ್ಪ ಕರಣಿಕ, ಬಸವರಾಜ ಮಯೂರ, ಶಂಕರ ಅಳ್ಳೊಳ್ಳಿ, ಸುರೇಶ ಮೆಂಗನ್, ಪತ್ರಕರ್ತ ಲೋಹಿತ ಕಟ್ಟಿ, ಸತೀಶ ಕೋಬಾಳಕರ್, ಮಹಾದೇವ ನಾಲವಾರ, ಶಂಕರ ಜಾನಾ, ನಾಗೇಂದ್ರ ಹುಗ್ಗಿ, ರಾಜೇಶ ಯನಗುಂಟಿಕರ್, ಮಲ್ಲಿಕಾರ್ಜುನ ಕಟ್ಟಿಮನಿ, ಶರಣಬಸಪ್ಪ ಕೋಬಾಳ, ಡಾ.ಅಹ್ಮದ ಪಟೇಲ, ಇಮಾನ್ ವೆಲ್ ಜಾನ್ ಪಾಲ್, ಶಿವುಕುಮಾರ ತಳವಾರ, ನಿಂಗಣ್ಣ ಪೂಜಾರಿ, ಕಿರಣ ಚವ್ಹಾಣ, ಸುನೀಲ ಭಗತ್, ವಿಕ್ರಮ ಮಾಲಗತ್ತಿ, ಬಲಭೀಮ ಕೊಳ್ಳೊಳ್ಳಿ, ಮಲ್ಲಿಕಾರ್ಜುನ ಜಲಂಧರ, ರಾಣಪ್ಪ ಸಂಗನ್, ದತ್ತಪ್ಪ ಕೊಟ್ನೂರ ಗಿರಿಮಲ್ಲ÷್ಪ ವಳಸಂಗ, ಗಂಗಾಧರಪ್ಪ, ಸುನೀತಾ ಕೋರೆ, ಲಕ್ಷಿö್ಮÃ ಪುನೀತ್, ಪ್ರಮೋದ ನಾಟೀಕಾರ, ಮಹಾದೇವ ಮೇತ್ರಿ, ಸಿದ್ದಲಿಂಗಮ್ಮ, ಅಂಬಿಕಾ, ಪ್ರವೀನ ರಾಜನ್, ಡಾ. ಹಣಮಂತಪ್ಪ ಸೇಡಂಕರ್, ಅನೀಲ ಮೈನಾಳಕರ್, ಶಿವಯೋಗಿ ಹೊನ್ನಾನೂರ್, ಝಾಕಿರ ಹುಸೇನ ಕಪನೂರ, ವಿಜಯಕುಮಾರ ಜಡಗೆ, ಸಿದ್ದಲಿಂಗ ಡೆಂಗಿ, ಗುರಣ್ಣ ಅವಂಟಿ ಅವರನ್ನು "ಆದರ್ಶ ಭೀಮ ಪ್ರಶಸ್ತಿ" ನೀಡಿ ಗೌರವಿಸಲಾಯಿತು.
ಚವ್ಹಾಣ್ ಶಿಕ್ಷಣ ಸಂಸ್ಥೆಯಲ್ಲಿ ಭಗವಾನ ಮಹಾವೀರ ಜಯಂತಿ ಆಚರಣೆ
ಸತ್ಯ- ಶಾಂತಿ ಮಾರ್ಗದಲ್ಲಿ ನಡೆದ ಚೇತನ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಸಮಾಜದಲ್ಲಿ ಸತ್ಯ ಮತ್ತು ಶಾಂತಿಯ ಕಡೆಗೆ ಕೊಂಡೊಯ್ದು, ತಾವು ಅದೇ ಮಾರ್ಗದಲ್ಲಿ ನಡೆದ ಮಹಾನ್ ಚೇತನ ವರ್ಧಮಾನ ಮಹಾವೀರ ಎಂದು ಉಪನ್ಯಾಸಕಿ ರೇಷ್ಮಾ ದೋತ್ರೆ ಹೇಳಿದರು. ಅವರು ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರದ ಸಭಾಗೃಹದಲ್ಲಿ ನಡೆದ ಭಗವಾನ ಮಹಾವೀರರ ಜಯಂತಿ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಜಗತ್ತಿಗೆ ಆಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ ತೀರ್ಥಂಕರರಾದ ಮಹಾವೀರರು ನೀಡಿದ್ದಾರೆ. ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ ೫ ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿAದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು. ಶಿಕ್ಷಕಿಯರಾದ ಸಾನೀಯಾ, ದೇವಿಕಾ, ರೇಣುಕಾ, ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದರು.
ರಸ್ತೆ ಸುರಕ್ಷತಾ ಸಪ್ತಾಹ
ರಸ್ತೆ ಸುರಕ್ಷತೆಯ ಅರಿವು ಪ್ರತಿಯೊಬ್ಬರಿಗೂ ಅಗತ್ಯ
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ಪ್ರತಿಯೊಂದು ಜೀವವು ಅಮೂಲ್ಯವಾಗಿರುವುದರಿಂದ ರಸ್ತೆ ಸುರಕ್ಷತೆಯ ವ್ಯಾಪಕ ಅರಿವು, ಚಾಲನಾ ಜಾಗರೂಕತೆಯಿಂದ ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಅವಶ್ಯವಾಗಿದೆ ಎಂದು ಶಹಾಬಾದ ವಲಯ ಡಿವಾಯ್‌ಎಸ್ಪಿ ಶಂಕರಗೌಡ ಪಾಟೀಲ್ ಹೇಳಿದರು.
ಅವರು ನಗರದ ಮೌಂಟ್ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ದೈನಂದಿನ ಜೀವನದಲ್ಲಿ ಕೆಲವರನ್ನು ಹೊರತುಪಡಿಸಿ ಉಳಿದವರೆಲ್ಲರು ವಾಹನ ಚಾಲನೆಯಲ್ಲಿ ತೊಡಗಿರುವುದು ಇತ್ತೀಚಿಗೆ ಸರ್ವೇಸಾಮಾನ್ಯವಾಗಿದೆ. ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿಯುತ್ತಿರುವುದರಿಂದ ಅಪಘಾತಗಳು ಹೆಚ್ಚಾಗಿವೆ. ರಸ್ತೆ ಅಪಘಾತಗಳನ್ನು ವ್ಯಾಪಕವಾಗಿ ತಡೆಯುವ ನಿಟ್ಟಿನಲ್ಲಿ ಪ್ರತಿವರ್ಷ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮ ಹಮ್ಮಿಕೊಂಡು ಜನಸಾಮಾನ್ಯರಿಗೆ, ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ. ಮುಖ್ಯವಾಗಿ ರಸ್ತೆ ಸುರಕ್ಷತೆಯ ಅರಿವು ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಅತೀ ಅಗತ್ಯವಾಗಿದೆ ಎಂದು ಹೇಳಿದರು.
ನಗರಠಾಣೆಯ ಪಿಐ ನಟರಾಜ್ ಲಾಡೆ ಅವರು ಮಾತನಾಡಿ, ದೇಶದಲ್ಲಿ ಪ್ರತಿವರ್ಷ ರಸ್ತೆ ಅಪಘಾತಗಳಿಂದ ೧ ಲಕ್ಷದ ೮೪ ಸಾವಿರಕ್ಕೂ ಅಧಿಕ ಮಂದಿ ಮರಣ ಹೊಂದುತ್ತಿದ್ದಾರೆ. ವಾಹನ ಚಾಲನಾ ಸಮಯದಲ್ಲಿ ಅಜಾಗರೂಕತೆಯಿಂದ ಹೆಲ್ಮೆಟ್, ಸೀಟ್‌ಬೆಲ್ಟ್ ಹಾಕದಿರುವುದು, ಗಮನ ಬೇರೆಡೆ ಇರುವುದು ಹಾಗೂ ಮೋಬೈಲ್ ಬಳಕೆ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಈ ನಿಟ್ಟಿನಲ್ಲಿ ಪ್ರಜ್ಞಾವಂತ ನಾಗರಿಕರು ಎಚ್ಚರಿಕೆಯಿಂದ ರಸ್ತೆ ಸುರಕ್ಷತಾ ಸಂಚಾರಿ ನಿಯಮಗಳನ್ನು ಕಡ್ಡಾವಾಗಿ ಪಾಲಿಸಬೇಕು ಎಂದು ಹೇಳಿದರು.
ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ನಿಮಿತ್ತ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಡಿವಾಯ್‌ಎಸ್ಪಿ ಶಂಕರಗೌಡ ಪಾಟೀಲ್ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ನಗರಠಾಣೆಯ ಪಿಐ ನಟರಾಜ್ ಲಾಡೆ, ಪಿಎಸ್‌ಐ ಚಂದ್ರಕಾAತ ಮಕಾಲೆ, ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಲೋವಿಟ್, ಸಿಸ್ಟರ್ ಕ್ಯಾಂಡಿಡ, ಸಿಸ್ಟರ್ ಗ್ರೇಸ್ ಲೀಮಾ, ಸಿಸ್ಟರ್ ರಿಷಿಕಾ, ಮುಕ್ತಿ, ಮುಖ್ಯಗುರು ಸಾಹೇಬ್‌ಗೌಡ ಪಾಟೀಲ್, ಶಿಕ್ಷಕರು ಸಿಬ್ಬಂದಿ, ವಿದ್ಯಾರ್ಥಿಗಳು ಪಾಲ್ಗೊಂಡಿದರು.
ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆಯ ಪ್ರಶಸ್ತಿ ಪ್ರದಾನ (ಜ.೧೧) ರಂದು
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ನಗರದ ಶ್ರೀಜಗದಂಬಾ ದೇವಸ್ಥಾನದ ಸಭಾಗೃಹದಲ್ಲಿ ಗಿರಿಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಕವಿಗೋಷ್ಠಿ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಮರಲಿಂಗ ಯಾದಗಿರಿ ಸಂಚಾಲಕ ಅನಿಲ ಮೈನಾಳಕರ್ ಅವರು ಜಂಟಿಯಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಜ.೧೧ ರಂದು ಶನಿವಾರ ಬೆಳಗ್ಗೆ ೧೦:೩೦ ಜರುಗುವ ಕಾರ್ಯಕ್ರಮದಲ್ಲಿ ತೊನಸನಹಳ್ಳಿ(ಎಸ್) ಗ್ರಾಮದ ಶಿವಸಾಯಿ ಧ್ಯಾನ ಧಾಮದ ಪಜ್ಯೂರಾದ ಶರಣ ಕೋತಲಪ್ಪ ಮುತ್ಯಾ ಇವರ ಸಾನಿಧ್ಯದಲ್ಲಿ ಸಮಾರಂಭ ಜರುಗುವುದು. ಉದ್ಯಮಿ ನರೇಂದ್ರ ವರ್ಮಾ ಕಾರ್ಯಕ್ರಮ ಉದ್ಘಾಟಿಸುವರು. ಪ್ರಾಂಶುಪಾಲರಾದ ಕೆ.ಬಿ.ಬಿಲ್ಲವ, ಬಾಲರಾಜ ಮಾಚನೂರ ಪ್ರಶಸ್ತಿ ಪ್ರದಾನ ಮಾಡುವರು. ಡಾ.ಮಲ್ಲಿನಾಥ ತಳವಾರ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ದಸಂಸ ರಾಜ್ಯ ಸಂಘಟನಾ ಸಂಚಾಲಕರಾದ ಮರಿಯಪ್ಪ ಹಳ್ಳೀ, ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ. ರಾಮಕೃಷ್ಣ, ನಗರ ಪೊಲೀಸ್ ಠಾಣೆಯ ಸಿಪಿಐ ನಟರಾಜ ಲಾಡೆ, ಕದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ, ಬಿಜೆಪಿ ಮಂಡಲ ಅಧ್ಯಕ್ಷ ನಿಂಗಪ್ಪ ಹುಳಗೋಳಕರ್, ನಗರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಶರಣು ಪಗಲಾಪೂರ, ನಗರಸಭೆ ಸದಸ್ಯರಾದ ಸಾಬೇರಾ ಬೇಗಂ, ನಗರಸಭೆ ಸದಸ್ಯೆ ಸಾಬೇರಾ ಬೇಗಂ, ನಗರಸಭೆ ಮಾಜಿ ಸದಸ್ಯ ಡಾ.ಅಶೋಕ ಜಿಂಗಾಡೆ, ಆರ್ಯ ಈಡಿಗ ಸಮಾಜದ ಅಧ್ಯಕ್ಷ ಭೀಮಯ್ಯ ಗುತ್ತೇದಾರ, ಅಶೋಕ ಯಾದಗಿರಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಗೃಹ ಸಚಿವ ಅಮಿತ್ ಶಾ ದೇಶದ ಜನರಿಗೆ ಕ್ಷಮೇಯಾಚಿಸಬೇಕು
ಬಂಜಾರ ಸಮಾಜದಿಂದ ಶಾ ರಾಜೀನಾಮೆಗೆ ಒತ್ತಾಯ
೨೪ ಕಲಬುರಗಿ ಬಂದ್‌ಗೆ ಬಂಜಾರ ಸಮಾಜ ಬೆಂಬಲ್
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್‌ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಬಂಜಾರ ಸಮಾಜದ ವತಿಯಿಂದ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ಬಂಜಾರ ಸಮಾಜದ ಹಿರಿಯ ಮುಖಂಡ ಕಿಶನ ನಾಯಕ ಮಾತನಾಡಿ ಗೃಹ ಸಚಿವ ಅಮಿತ್ ಶಾ ದೇಶದ ಸಾರ್ವಜನಿಕರ ಮುಂದೆ ಕ್ಷಮೆ ಯಾಚಿಸಬೇಕು, ಕೇಂದ್ರ ಸಚಿವ ಸ್ಥಾನದಿಂದ ಅವರನ್ನು ಕೈ ಬಿಡಬೇಕು. ಪ್ರಪಂಚದಲ್ಲಿ ಸೂರ್ಯ, ಚಂದ್ರ ಎಷ್ಟು ಸತ್ಯವೋ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳು ಅಷ್ಟೇ ಸತ್ಯವಾಗಿದೆ. ವಿಶ್ವದಲ್ಲೇ ಭಾರತದ ಗೌರವ ಹೆಚ್ಚಿಸಿದ ಕೀರ್ತಿ ಬಾಬಾಸಾಹೇಬರಿಗೆ ಇದೆ ಎಂದು ಹೇಳಿದರು. ಅಮಿತ್ ಶಾ ನೀಡಿರುವ ಹೇಳಿಕೆಯಿಂದ ಇಡೀ ದಲಿತ ಸಮುದಾಯಕ್ಕೆ ನೋವುಂಟಾಗಿದ್ದು, ೨೪ ರಂದು ನಡೆಯುತ್ತಿರುವ ಕಲಬುರಗಿ ಬಂದ್‌ಗೆ ಬಂಜಾರ ಸಮಾಜದ ವತಿಯಿಂದ ಸಂಪೂರ್ಣವಾಗಿ ಬೆಂಬಲ ಇದೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಮುಖಂಡ ಚಂದು ಜಾಧವ ಅವರು ಮಾತನಾಡುತ್ತ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡುವ ಮೂಲಕ ಸರ್ವ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಇದೀಗ ಅಂಬೇಡ್ಕರ್ ಅವರ ವಿರುದ್ಧ ಅಗೌರವದ ಮಾತನಾಡಿದ ಅಮಿತ ಶಾಗೆ ತಕ್ಕ ಪಾಠ ಕಲಿಸಬೇಕು. ಅಂಬೇಡ್ಕರ್ ಅವರು ಸರ್ವರು ಸಮಾನತೆಯ ತತ್ವ ಹೇಳಿದವರು. ಅಮಿತ್ ಶಾ ಗೃಹ ಸಚಿವ ಸ್ಥಾನದಿಂದ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಬಂಜಾರ ಸಮಾಜದ ಮುಖಂಡರಾದ ಕುಮಾರ ಚವ್ಹಾಣ್, ದಿಲೀಪ ನಾಯಕ, ದೇವರಾಜ ರಾಠೋಡ, ಸುನೀಲ ಚವ್ಹಾಣ್, ಕಿರಣ ಚವ್ಹಾಣ್, ನರಸಿಂಗ ರಾಠೋಡ, ವಿಜಯ ರಾಠೋಡ, ಮಧನಲಾಲ ನಾಯಕ, ಇತರರು ಇದ್ದರು.
eɸÁÌA eÁUÀÈvÀ zÀ¼À¢AzÀ eÁUÀÈw PÁAiÀÄðPÀæªÀÄ
«dAiÀÄ mÉʪÀiïì £ÀÆå¸ï ±ÀºÁ¨Ázï
«zÀÄåvï CvÀåªÀÄÆ®ªÁzÀ ¸ÀA¥ÀvÀÄÛ. EzÀÄ ªÀÄÄVzÀÄ ºÉÆÃUÀĪÀ ¸ÀA¥À£ÀÆä®ªÁVgÀĪÀÅzÀjAzÀ UÁæºÀPÀgÀÄ eÁUÀgÀÆPÀvɬÄAzÀ §¼À¹ ¸ÀAgÀQë¸À¨ÉÃPÀÄ eɸÁÌA ¥Éưøï E£ïì¥ÉPÀÖgï zsÀÄæªÀvÁgÉ JAzÀÄ ºÉýzÀgÀÄ. vÁ®ÆQ£À ¨sÀAPÀÆgÀ ªÀ®AiÀÄzÀ°è PÀ®§ÄgÀV eÁUÀÈvÀ zÀ¼À ¥Éưøï oÁuÉ ºÁUÀÆ ¨sÀAPÀÆgÀ eɸÁÌA ±ÁSɬÄAzÀ eÁUÀÈw CjªÀÅ ¸À¥ÁÛºÀ PÁAiÀÄðPÀæªÀÄ ZÁ®£É ¤Ãr ªÀiÁvÀ£ÁrzÀgÀÄ. UÁæºÀPÀgÀÄ vÀÄA¨Á eÁUÀÈw¬ÄAzÀ «zÀÄåvï G¥ÀAiÉÆÃV¸À¨ÉÃPÀÄ, AiÀiÁªÀÅzÉà PÁgÀtPÀÆÌ «zÀÄåvï ¸ÉÆÃjPÉAiÀiÁUÀzÀAvÉ JZÀÑjPÉ ªÀ»¸À¨ÉÃPÀÄ. «zÀÄåvï PÀ¼ÀîvÀ£ÀPÉÌ 3 jAzÀ 6 ªÀµÀð PÁgÁUÀȺÀ ²PÉë¬ÄzÉ ºÁUÀÆ zÀAqÀ PÀÆqÀ «¢ü¸À¯ÁUÀÄvÀÛzÉ. eÁUÀÈvÀ zÀ¼ÀzÀ JEE ®vÁ CªÀgÀÄ ªÀiÁvÀ£Ár eɸÁÌA UÁæºÀPÀ ¸Éßû ¸ÉÃªÉ ¤ÃqÀĪÀ°è ¸ÀzÁ ¹zÀÞ«zÉ zÀÆgÀUÀ½zÀÝgÉ vÀPÀët £ÀªÀÄä PÀZÉÃjUÉ CxÀªÁ ¸ÀA§AzsÀ¥ÀlÖªÀjUÉ ªÀiÁ»w ¤ÃqÀĪÀ ªÀÄÆ®PÀ E¯ÁSÉUÉ ¸ÀºÀPÀj¹ GvÀÛªÀÄ ¸ÉÃªÉ ¤ÃqÀĪÀAvÉ ¥ÉÆæÃvÁ컸À®Ä PÀgÉ ¤ÃrzÀgÀÄ. UÁæºÀPÀgÀÄ «zÀÄåvï CªÀWÀqÀAiÀiÁUÀzÀAvÉ ªÀÄÄ£ÉßZÀÑjPÉ ªÀ»¸À¨ÉÃPÀÄ, «zÀÄåvï CªÀWÀqÀ ¸ÀAzÀ¨sÀðzÀ°è E¯ÁSÉUÉ ªÀiÁ»w ¤ÃqÀ¨ÉÃPÀÄ. ¸ÀÄvÀÛªÀÄÄvÀÛ AiÀiÁgÁzÀgÀÆ «zÀÄåvï PÀ¼ÀîvÀ£À ªÀiÁqÀÄwÛzÀÝgÉ eÁUÀÈvÀzÀ¼ÀzÀ C¢üPÁjUÀ½UÉ ªÀiÁ»w ¤ÃqÀ¨ÉÃPÀÄ, ªÀiÁ»w ¤ÃrzÀªÀgÀÄ ºÉ¸ÀgÀÄ UË¥ÀåªÁV EqÀ¯ÁUÀÄvÀÛzÉ JAzÀÄ ºÉýzÀgÀÄ. ¦J¸ïL UËvÀªÀÄ, ¸ÉÆÃªÀÄgÁAiÀÄ ¥Ánïï, ¨sÀAPÀÆgÀ ªÀ®AiÀÄ «¨sÁUÁ¢üPÁj ¹zÀÄÝ ºÀAa£Á¼À ºÁUÀÆ eɸÁÌA ¨sÀAPÀÆgÀ ±ÁSÉAiÀÄ C¢üPÁjUÀ¼ÀÄ, ¹§âA¢UÀ¼ÀÄ ¥Á¯ÉÆÎArzÀgÀÄ.
ಶಹಾಬಾದ ನಗರದ ಶ್ರೀರಾಮ ಚೌಕನಲ್ಲಿ ದಿ.ಸಂತೋಷಕುಮಾರ ಇಂಗಿನಶೆಟ್ಟಿ ಅವರ ಅಭಿಮಾನ ಬಳಗದವರಿಂದ ಅವರ ಜನ್ಮದಿನ ಆಚರಣೆ ಮಾಡಲಾಯಿತು.
ಉಚಿತ ನೋಟ್ ಬುಕ್ ವಿತರಣೆ
ದಿ.ಸಂತೋಷಕುಮಾರ ಇಂಗಿನಶೆಟ್ಟಿ ಸ್ಮರಣೆ – ಜನ್ಮದಿನದ ನಿಮಿತ್ತ ಅನ್ನಸಂತರ್ಪಣೆ
«dAiÀÄ mÉʪÀiïì£ÀÆå¸ï ±ÀºÁ¨Ázï
f¯ÉèAiÀİèAiÉÄà ¢.¸ÀAvÉÆÃµÀ EAV£À±ÉnÖ CªÀgÀÄ PÀ£ÀßqÀ ¸Á»vÀåzÀ ¥ÉæÃgÀPÀ, ¸Á»vÀå ¥ÉÆÃµÀPÀ, ¸ÁªÀiÁfPÀ ¸ÉÃªÉ eÉÆvÉUÉ PÉÆqÀÄUÉ`zÁ¤AiÀiÁVzÀÝgÀÄ JAzÀÄ PÀ¸Á¥À ¤PÀl ¥ÀƪÀð CzsÀåPÀë ªÀÄÈvÀÄåAdAiÀÄ »gÉêÀÄoÀ ºÉýzÀgÀÄ. CªÀgÀÄ £ÀUÀgÀzÀ gÉïÉé ¤¯ÁÝt §½ ¢.²æÃ¸ÀAvÉÆÃµÀPÀĪÀiÁgÀ EAV£À±ÉnÖ C©üªÀiÁ¤ §¼ÀUÀ¢AzÀ £ÀqÉzÀ ºÀÄlÄÖºÀ§â PÁAiÀÄðPÀæªÀÄzÀ°è ¥Á¯ÉÆÎAqÀÄ ªÀiÁvÀ£ÁrzÀgÀÄ.CªÀgÀ C©üªÀiÁ¤ §¼ÀUÀ ¸ÁªÀiÁfPÀ PÉ®¸À ªÀiÁqÀÄwÛgÀĪÀÅzÀÄ ªÀiÁzÀjAiÀiÁVzÉ JAzÀgÀÄ. ±ÀºÁ¨ÁzÀ ªÀ®AiÀÄ rªÁAiÀiïJ¹à ±ÀAPÀgÀUËqÀ ¥Ánïï, PÁqÁ CzsÀåPÀë qÁ.JªÀiï.J.gÀ²ÃzÀ, Ct«ÃgÀ EAV£À±ÉnÖ, UÉÆÃgÀR£ÁxÀ ±ÁSÁ¥ÀÆgÀ, «dAiÀÄPÀĪÀiÁgÀ ªÀÄÄvÀÛnÖ, ªÀÄÈvÀÄåAdAiÀÄ »gÉêÀÄoÀ, gÁdÄ ªÉÄùÛç, «±ÀégÁzsÀå ©gÁ¼À, ºÁ±ÀªÀÄ SÁ£À, ¢°Ã¥À £ÁAiÀÄPÀ, ¤AUÀtÚ ºÀļÀUÉÆÃ¼ÀPÀgï, ±ÀgÀt§¸À¥Àà PÉÆÃ¨Á¼À, ¥Àæ±ÁAvÀ ªÀÄgÀUÉÆÃ¼À, Q±À£À £ÁAiÀÄPÀ, ¸ÁºÉçUËqÀ ¨ÉÆÃUÀÄAr, ªÉÄîVj £ÁUÀgÁd, gÁeÉñÀ AiÀÄ£ÀUÀÄAn, gÁdÄ PÉÆÃ¨Á¼À, zÀvÁÛ ¥sÀAqÀ, £ÁUÀtÚ gÁA¥ÀÄgÉ, ±ÀgÀtUËqÀ ¥Éưøï¥Ánïï, ¨ÁPÀgÀ ¸ÉÃoÀ, qÁ.CºÀäzÀ ¥ÀmÉî, ¸ÀÆAiÀÄðPÁAvÀ PÉÆÃ¨Á¼À, gÁdÄ ¨É¼ÀUÀÄA¦, ¤AUÀtÚ ¥ÀÆeÁj, «PÀæªÀÄ ªÀiÁ®UÀwÛ, «ÄÃgÀ° £ÁUÉÆÃgÉ, ¨Á§ÄgÁªÀ ¥ÀAZÁ¼À, ªÀÄÄ£Áß ¥ÀmÉïï, ¸ÀAUÀtÚ FeÉÃj, ©üêÀÄAiÀÄå UÀÄvÉÛÃzÁgÀ, ±ÀgÀtÄ eÉÃlV zÉêÀgÁd gÁoÉÆÃqÀ, £ÀgÀ¹AUÀ gÁoÉÆÃqÀ, «dAiÀÄ gÁoÉÆÃqÀ, UÉÆÃ¥Á® ¥ÀªÁgÀ, ¥ÀæPÁ±À gÁoÉÆÃqÀ, ±ÀAPÀgÀ ZÀªÁíuï, ¨Á¨Á SÁ£À, DPÁ±À £ÁAiÀÄPÀ, ¸ÉÆÃ£ÀÄ. gÀ« gÁoÉÆÃqÀ, ²æÃPÁAvÀ gÁoÉÆÃqÀ, GªÉÄñÀ gÁoÉÆÃqÀ, ¸ÁUÀgÀ £ÁAiÀÄPÀ, ¸ÀĤî ZÀªÁíuï. ¨Á§Ä vÀ¼ÀªÁgÀ, £À«Ã£À ¹¦à, £ÀUÀgÀzÀ ªÀÄÄRAqÀgÀÄ, AiÀÄĪÀPÀgÀÄ ¥Á¯ÉÆÎArzÀgÀÄ.
“ ಸಂತೋಷಕುಮಾರ ಇಂಗಿನಶೆಟ್ಟಿ ಬಳಗದಿಂದ ಪ್ರತಿ ವರ್ಷ ಬಡ ರೋಗಿಗಳಿಗೆ ಹಣ್ಣು ವಿತರಣೆ, ಬಡ ಮಕ್ಕಳಿಗೆ ಸಹಾಯಧನ, ಉಚಿತ ನೋಟ್ ಬುಕ್, ಬ್ಯಾಗ್ ವಿತರಣೆ, ಅನ್ನ ಸಂತರ್ಪಣೆ ಮಾಡುಲಾಗುತ್ತಿದೆ. ನಿರಂತರವಾಗಿ ಸಾಹುಕಾರ ಅವರ ಸೇವೆ ಈ ರೀತಿಯಾಗಿ ಸ್ಮರಿಸಲಾಗುತ್ತಿದೆ.” - ದಿಲೀಪ ನಾಯಕ, ಅಭಿಮಾನಿ ಶಹಾಬಾದ
ಎನ್ ಸಿ ಇಂಗಿನಶೆಟ್ಟಿ ಶಾಲೆಯಲ್ಲಿ ಕನಕ ಜಯಂತಿ
ದಾಸ ಶ್ರೇಷ್ಠ ಕನಕದಾಸ ಜಯಂತಿ ಆಚರಣೆ
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ಜಾತಿ, ಮತ ಮತ್ತು ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ಹೇಳುತ್ತಾ, ಸಮಾಜ ಹಾಗೂ ದಾಸ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಸೇವೆ ಸಲ್ಲಿಸಿದವರು ಕನಕದಾಸರು ಎಂದು ಮುಖ್ಯಗುರು ಸಂಗೀತಾ ದೇವರಮನಿ ಹೇಳಿದರು. ಅವರು ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶ್ರೀಮತಿ ನಾಗಮ್ಮ ಚನ್ನಪ್ಪ ಇಂಗಿನಶೆಟ್ಟಿ ಶಾಲೆಯಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಕನಕದಾಸರು ನಾಡು ಕಂಡ ಅಪ್ರತಿಮ ದಾಸರಾಗಿದ್ದು ದಾಸ ಶ್ರೇಷ್ಠರಲ್ಲಿ ಶ್ರೇಷ್ಠರಾದವರು ಎಂದೆನಿಸಿಕೊAಡವರು. ಇಂತಹ ಕನಕದಾಸರು ಇಂದಿನ ವಿದ್ಯಮಾನಗಳನ್ನು ಐದು ಶತಮಾನಗಳ ಮುಂಚೆ ತಮ್ಮ ಕೃತಿಗಳಲ್ಲಿ ಪ್ರಸ್ತುತಪಡಿಸಿದ್ದು ಅವರ ಕಾಲಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳಾದ ಪ್ರಕೃತಿ, ಶಾಂತವೀರ, ಕಾಯಕ, ಪವಿತ್ರಾ ಕನಕದಾಸರ ಬಗ್ಗೆ ಅನಿಸಿಕೆ ಹೇಳಿದರು. ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಚವ್ಹಾಣ್, ಶಿಕ್ಷಕಿಯರಾದ ಸವಿತಾ ಬೆಳಗುಂಪಿ, ಸುಜಾತ ಕುಂಬಾರ, ಪಲ್ಲವಿ, ಪಾರ್ವತಿ ಚಟ್ಟಿ, ಆರತಿ ವೆಂಕಟೇಶ, ಅಂಬಿಕಾ ಶಿಕ್ಷಕರು ವಿದ್ಯಾರ್ಥಿಗಳು ಇತರರು ಪಾಲ್ಗೋಂಡಿದರು.
ತಾಲೂಕ ಆಸ್ಪತ್ರೆಯಾಗಿ, ಇಎಸ್‌ಐ
ಸೂಕ್ತ ಕ್ರಮ: ಡಾ.ಶರಣಪ್ರಕಾಶ ಪಾಟೀಲ ಅಶ್ವಾಸನೆ.
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ನಗರದ ಹೊರ ವಲಯದ ರಾಷ್ಟಿçÃಯ ಹೆದ್ದಾರಿ ೧೫೦ ರಲ್ಲಿ ಜೆಪಿ ಸಿಮೆಂಟ್ ಕಾರ್ಖಾನೆಯ ಬಳಿ ಇರುವ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯನ್ನು ಶಹಾಬಾದ್ ತಾಲೂಕ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಸೂಕ್ತ ಕ್ರಮ ಕೈಗೊಳ್ಳುವದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಶ್ವಾಸನೆ ನೀಡಿದ್ದಾರೆ ಎಂದು ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಕಚೇರಿಯಲ್ಲಿ ಬೇಟ್ಟಿ ಮಾಡಿದ ಡಾ.ರಶೀದ ಅವರು ಕೋವಿಡ್ ಮೂರನೇ ಹಂತದ ನಿರ್ವಾಹಣೆಗೆ ಸುಮಾರು ೧೨ ಕೋ.ರೂ. ವೆಚ್ಚದಲ್ಲಿ ಇಎಸ್‌ಐ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸಲಾಗಿದ್ದು, ಅದನ್ನು ನೂತನ ತಾಲೂಕವಾದ ಶಹಾಬಾದ್ ತಾಲೂಕ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದಾಗಿ, ಸ್ಪಂದಿಸಿದ ಸಚಿವರು, ಕೂಡಲೇ ರಾಜ್ಯ ವೈದ್ಯಕೀಯ ಇಲಾಖೆ ಕಾರ್ಯದರ್ಶಿ ಅವರಿಗೆ ಸಂಪರ್ಕಿಸಿ, ವಿಮಾ ಆಸ್ಪತ್ರೆಯನ್ನು ಕಾರ್ಮಿಕ ಇಲಾಖೆಯಿಂದ ನಿಯಮಾನುಸಾರ ಸುಪರ್ಧಿಗೆ ತೆಗೆದುಕೊಂಡು ತಾಲೂಕ ಆಸ್ಪತ್ರೆಯಾಗಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಜೆಪಿ,ಜಿಈ ನಗರ ಸಭೆ ವ್ಯಾಪ್ತಿಗೆ
ನಗರದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿರುವ ಜೆಪಿ ಸಿಮೆಂಟ್ ಕಾರ್ಖಾನೆ ಹಾಗೂ ಜಿಈ ಕಾರ್ಖಾನೆಗಳ ಕಾಲೋನಿಯಲ್ಲಿ ನಿವಾಸಿಗಳ ಸಂಖ್ಯೆ ಕಡಿಮೆ ಇದ್ದು, ಈಗೀರುವ ಅಧಿಸೂಚಿತ ಪ್ರದೇಶವನ್ನು ಕೈಬಿಟ್ಟು, ಈ ಎರಡು ಕಾಲೋನಿಗಳನ್ನು ನಗರ ಸಭೆ ವ್ಯಾಪ್ತಿಗೆ ಸೇರಿಸಿದಲ್ಲಿ ಈ ಭಾಗದ ಸ್ವಚ್ಚತೆ, ನೀರು ಸರಬರಾಜು, ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದು ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ ಅವರು ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಂಕ್ ಖರ್ಗೆ ಅವರಿಗೆ ಬೆಂಗಳೂರಿನ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ, ಮಾಣಿಕಗೌಡ ಪಾಟೀಲ, ಅಜೀತ್ ಕುಮಾರ ಪಾಟೀಲ, ಹಾಶಮ್ ಖಾನ್, ಅಜೀಂ ಸೇಠ, ಮೃತ್ಯುಂಜಯ ಸ್ವಾಮಿ, ಸೇರಿದಂತೆ ಹಲವಾರು ಜನ ಮುಖಂಡರು ಇದ್ದರು.
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
16ನೇ ಶತಮಾನದಲ್ಲಿ ಭಕ್ತಿ ಪಂಥದ ಹರಿಕಾರರಾಗಿ ಕನ್ನಡ ಭಾಷೆಯಲ್ಲಿ ಕೀರ್ತನೆ, ಉಗಾಭೋಗಗಳನ್ನು ರಚಿಸಿ ಹಾಡುವುದರ ಮೂಲಕ ಕನ್ನಡ ಸಾಹಿತ್ಯ ಪರಂಪರೆಯನ್ನು ಶ್ರೀಮಂತಗೊಳಿಸಿದವರು ಕನಕದಾಸರು ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಅವರು ಶ್ರೀಮಠದಲ್ಲಿ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಕನಕದಾಸರು ಜಾತಿ. ಮತ. ಪoಥಗಳನ್ನು ಮೀರಿ ಬೆಳೆದವರು ಇಂತಹ ದಾಸರನ್ನು ಇಂದು ಜಾತಿ. ಮತಕ್ಕೆ ಸೀಮಿತಗೊಳಿಸುವ ಪ್ರಯತ್ನ ಆಗಬಾರದು.ಸಮಾಜದಲ್ಲಿರುವ ಜಾತಿಯತೆಯನ್ನು, ಮೇಲು ಕೀಳು ಭಾವನೆಯನ್ನು, ಸಾಮಾಜಿಕ ತಾರತಮ್ಯವನ್ನು ತಮ್ಮ ಕೀರ್ತನೆಗಳ ಮೂಲಕ ಸಮಾಜವನ್ನು ಎಚ್ಚರಿಸಿ ಸುಧಾರಿಸುವ ಕಾರ್ಯವನ್ನು ಕನಕದಾಸರು ಮಾಡಿದರು ಎಂದು ಹೇಳಿದರು. ಪ್ರಾಸ್ಥವಿಕವಾಗಿ ಮಾತನಾಡಿದ ಶಿಕ್ಷಕ ಸಿದ್ದಲಿಂಗ ಬಾಳಿ ದಾಸಸಾಹಿತ್ಯಕ್ಕೆ ಕನಕದಾಸರ ಕೊಡುಗೆ ಅಪಾರ. ದಾಸಸಾಹಿತ್ಯವಿಲ್ಲದ ಕನ್ನಡ ಸಾಹಿತ್ಯ ಅಪೂರ್ಣ. ಆದ್ದರಿಂದ ಪ್ರತಿಯೊಬ್ಬರೂ ಕನಕದಾಸರ ಜೀವನವನ್ನು ಓದಿ ಅವರು ಬರೆದ ಸಾಹಿತ್ಯವನ್ನು ಅಧ್ಯಯನ ಮಾಡಿ ಆ ದಾರಿಯನ್ನು ನಡೆಯುವ ಪ್ರಾಮಾಣಿಕ ಪ್ರಯತ್ನವನ್ನು ಎಲ್ಲರೂ ಮಾಡಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಡಾ. ಗುಂಡಣ್ಣ ಬಾಳಿ, ಅಣ್ಣಾರಾವ ಬಾಳಿ, ಮಲ್ಲಿನಾಥ ತುಮಕೂರ, ಶಿವಶರಣಪ್ಪ ಕೊಳ್ಳಿ, ಸಾಹೇಬಗೌಡ ತುಮಕೂರ, ಅಶೋಕ ವಗ್ಗರ, ಸಂಗಮೇಶ್ ಪೂಜಾರಿ, ನಿಂಗಣ್ಣ ಕೊಳ್ಳಿ, ಭೀಮು ಮದಗುಣಕಿ, ಮಹೇಶ ಬಾಳಿ, ಚಂದ್ರು ಕೊಳ್ಳಿ, ಶಿವು ಕಂಠಿಕಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯ ಪರಿಷತ್ ಸದಸ್ಯರಾಗಿ ಸಂಜಯ ರಾಠೋಡ ಆಯ್ಕೆ
ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಕರಣಿಕ ಆಯ್ಕೆ.
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ತಾಲೂಕ ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಶಿವಪುತ್ರ ಕರಣಿಕ ಆಯ್ಕೆಯಾದರು. ಶನಿವಾರ ಇಲ್ಲಿಯ ಸರಕಾರಿ ಪ್ರೌಢ ಶಾಲೆಯಲ್ಲಿ ನಡೆದ ಚುನಾವಣೆಯಲ್ಲಿ 15 ಮತಗಳನ್ನು ಪಡೆದು ವಿಜೇತರಾದರು. ವಿವಿಧ ಇಲಾಖೆಯಿಂದ ಆಯ್ಕೆಯಾದ ನಿರ್ಧೇಶಕರ 27 ಮತಗಳಲ್ಲಿ ಕರಣಿಕ 15 ಮತಗಳನ್ನು ಪಡೆದರು, ಅವರ ಪ್ರತಿಸ್ಪರ್ಧಿ ಸಂತೋಷ ಸಲಗಾರ 12 ಮತಗಳನ್ನು ಪಡೆದರು. ಕರಣಿಕ ಈಗಾಗಲೇ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಆಗಿದ್ದಾರೆ.
ಖಜಾಂಚಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕರಣಿಕ ಪೇನಲ್‌ನ ಮಂಜುನಾಥ ಹಂದರಾಳ 14 ಮತಗಳನ್ನು ಪಡೆದು ವಿಜೇತರಾದರು, ಅವರ ಪ್ರತಿಸ್ಪರ್ಧಿ ಜಗಪ್ಪ ಹೊಸಮನಿ 12 ಮತಗಳನ್ನು ಪಡೆದರು. ಇಲ್ಲಿ ಓರ್ವ ಮತದಾರ ತನ್ನ ಮತವನ್ನು ಯಾಗಿಗೂ ಹಾಕದೆ ಖಾಲಿ ಬಿಟ್ಟಿದ್ದಾನೆ.
ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ ಸಂಜಯ ರಾಠೋಡ 15 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಸೈಯದ್ ಮಜರ್ ಖಾದ್ರಿ 12 ಮತಗಳನ್ನು ಪಡೆದಿದ್ದಾರೆ.
ಚುನಾವಣೆ ಅಧಿಕಾರಿಯಾಗಿ ಚುನಾವಣೆ ಅಧಿಕಾರಿಯಾಗಿ, ಹಾಜಪ್ಪ ಬಿರಾಳ ಉಪ ಚುನಾವಣಾಧಿಕಾರಿಯಾಗಿ, ಮಹಾದೇವ ಪಾಟಲ ಮತಗಟ್ಟೆ ಅಧಿಕಾರಿಯಾಗಿ, ಸಂತೋಷ ಕೋಮಟೆ ಪಿಒ, ಗಿರಿಮಲ್ಲಪ್ಪ ವಳಸಂಗ ಎಪಿಆರ್‌ಒ ಆಗಿ ಕರ್ತವ್ಯ ನಿರ್ವಹಿಸಿದ್ದರು. ಎಲ್ಲಾ 27 ಮತದಾರರು ಮಧ್ಯಾಹ್ನದವರೆಗೆ ತಮ್ಮ ಹಕ್ಕನ್ನು ಚಲಾಯಿಸಿದ್ದರಿಂದ ಆರು ಜನ ಅಭ್ಯರ್ಥಿಗಳ ಲಿಖಿತ ಒಪ್ಪಿಗೆ ಮೇರೆಗೆ ಮಧ್ಯಾಹ್ನವೆ ಮತ ಎಣಿಕೆ ನಡೆದು, ಆಯ್ಕೆ ಘೋಷಿಸಲಾಯಿತು.
ಸಂಭ್ರಮ ಆಚರಣೆ : ಚುನಾಯಿತ ಅಭ್ಯರ್ಥಿಗಳು ತಮ್ಮ ಗೆಲುವಿನ ನಂತರ ನಗರ ಸಭೆ ಎದುರುಗಡೆ ಇರುವ ಡಾ.ಅಂಬೇಡ್ಕರ, ಡಾ.ಬಾಬು ಜಗಜೀವನರಾಮ, ಬಸವೇಶ್ವರ ವೃತ್ತದಲ್ಲಿಯೇ ಬಸವೇಶ್ವರ ಪುತ್ಥಳಿಗೆ, ರೈಲು ನಿಲ್ದಾಣದ ಬಳಿ ಇರುವ ಸಂತ ಸೇವಾಲಾಲ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಪಟಾಕಿ ಸಿಡಿಸಿ, ಸಿಹಿ ಹಂಚಲಾಯಿತು.
ತೋನಸನಳ್ಳಿ(ಎಸ್) ಗ್ರಾಮ ಪಂಚಾಯಿತಿಗೆ ಅವಿರೋಧ ಆಯ್ಕೆ
ಗೋಳಾ(ಕೆ) ಕ್ಷೇತ್ರದಲ್ಲಿ ತೆರವಾಗಿದ್ದ ಸ್ಥಾನಕ್ಕೆ ಶೃತಿ ಕಟ್ಟಿ ಆಯ್ಕೆ
ವಿಜಯ ಟೈಮ್ಸ್ ನ್ಯೂಸ ಶಹಾಬಾದ
ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮ ಪಂಚಾಯಿತಿಯ ಗೋಳಾ(ಕೆ) ಕ್ಷೇತ್ರದ ಗ್ರಾಮ ಪಂಚಾಯತಿ ನೂತನ ಸದಸ್ಯರಾಗಿ ಶೃತಿ ಶ್ರೀಕಾಂತ ಕಟ್ಟಿ ಅವರು ಆಯ್ಕೆಯಾಗಿದ್ದರು. ತಾಲೂಕಿನ ತೊನಸನಳ್ಳಿ(ಎಸ್) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೋಳಾ(ಕೆ) ಗ್ರಾಮದ ಸದಸ್ಯ ಸಂತೋಷ ಪವಾರ ಅವರ ನಿಧನದಿಂದ ತೆರವಾಗಿ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆಯಿತು. ಶೃತಿ ಶ್ರೀಕಾಂತ ಕಟ್ಟಿ ಅವರೊಬ್ಬರೆ ನಾಮಪತ್ರ ಸಲ್ಲಿಸದ್ದರು. ಪ್ರಮಾಣ ವಚನ : ಶೃತಿಯವರು ಆಯ್ಕೆಯಾಗುತ್ತಿದ್ದಂತೆ ನಡೆದ ಪ್ರಮಾಣ ವಚನದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಸಿದ್ಧಾರ್ಥ ಮಲ್ಲಿಕಾರ್ಜುನ ತಳವಾರ, ಫಯಾಜ, ಮುಖಂಡರಾದ ಮಾಣಿಕ ಪಾಟೀಲ್, ವಿಜಯಕುಮಾರ ಹಳ್ಳಿ, ಶಂಕರ ಅಳ್ಳೋಳಿ, ಕೃಷ್ಣಪ್ಪ ಕರಣಿಕ, ಮಲ್ಲಿಕಾರ್ಜುನ ಕಟ್ಟಿ, ವೀರಯ್ಯ ಸ್ವಾಮಿ, ಮಲ್ಲಿಕಾರ್ಜುನ ಕಟ್ಟಿ, ಹರಿಶ್ಚಂದ್ರ ಕೋಬಾಳಕರ್, ಶರಣಪ್ಪ ದೊಡ್ಡಮನಿ, ಮೈನೊದ್ದಿನ ತರನಳ್ಳಿ, ಮಹಾದೇವ ತರನಳ್ಳಿ, ನೂರ ಅಹ್ಮದ, ಹೈಯಾಳಪ್ಪ ಹಿರೇನೂರ ಇತರರು ಇದ್ದರು.
ಶಹಾಬಾದ ತಾಲೂಕಿನ ಭಂಕೂರ ಶಾಂತನಗರದ ಬಸವ ಸಮಿತಿಯಲ್ಲಿ ನಡೆದ ಬಸವ ತತ್ವ ದರ್ಶನ, ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮವನ್ನು ಚಿಂತಕ ಬಸವರಾಜ ವೆಂಕಟಾಪುರ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವದರೊಂದಿಗೆ ಉದ್ಘಾಟಿಸಿದರು.
ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬಸವ ತತ್ವದಲ್ಲಿವೇ: ವೆಂಕಟಾಪೂರ.
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ಪ್ರತಿಭಟನೆಗಳಿಂದ ಸ್ಥಾನ ಪಲ್ಲಟವಾಗಬಹುದು, ಆದರೆ ಅದು ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ಲ, ಅದರೆ, ಸಮಾಜದ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಬಸವ ತತ್ವದಲ್ಲಿದೆ ಎಂದು ಶಿರಗುಪ್ಪಾ ಬಸವ ಭವನದ, ಬಸವ ತತ್ವ ಚಿಂತಕ ಬಸವರಾಜ ವೆಂಕಟಾಪುರ ಅಭಿಪ್ರಾಯ ಪಟ್ಟರು.
ಅವರು ಗುರುವಾರ ಭಂಕೂರನ ಬಸವ ನಗರದ ಬಸವ ಮಂಟಪದಲ್ಲಿ ಬಸವ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಬಸವೇಶ್ವರ ಮೂರ್ತಿ ಅನಾವರಣದ ವಾರ್ಷಿಕೋತ್ಸವ ಹಾಗೂ ಶ್ರೀಬುತ್ತಿ ಬಸವಲಿಂಗ ಪ್ರತಿಷ್ಠಾಪನೆಯ 27ನೇ ವಾರ್ಷಿಕೋತ್ಸವ ನಿಮಿತ್ತ ಅಯೋಜಿಸಿದ್ದ ಬಸವ ತತ್ವ ದರ್ಶನ, ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡುತ್ತ ಮಾತನಾಡಿ, ಕಾಯ್ದೆ ಕಾನೂನುಗಳಿಂದ ಬದಲಾವಣೆ ಸಾಧ್ಯವಿಲ್ಲ, ಸಮಾಜದಲ್ಲಿ ಪರಸ್ಪರ ಹೊಂದಾಣಿಕೆಯಿAದ ಮಾತ್ರ ಬದಲಾವನೆ ಸಾಧ್ಯ, ಬಸವ ತತ್ವ ಎಂದರೆ, ಹೊಂದಾಣಿಕೆ ಎಂದು ಹೇಳಿದರು.
ಶಿಕ್ಷಕ ಬಸವರಾಜ ಮುಗಳಖೊಡ, ಪತ್ರಕರ್ತ ಕೆ.ರಮೇಶ ಭಟ್ಟ ಮಾತನಾಡಿದರು. ಶರಣಬಸಪ್ಪ ನಂದಿ ವೇದಿಕೆ ಮೇಲೆ ಇದ್ದರು. ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮಾದುಗೋಳಕರ್ ಅಧ್ಯಕ್ಷತೆ ವಹಿಸಿದ್ದರು.
ಬಿ.ಕೆ.ವೀರಣ್ಣ ವಚನಗಾಯನ ಮಾಡಿದರು, ರೇವಣಸಿದ್ದಪ್ಪ ಮುಸ್ತಾರಿ ಸ್ವಾಗತಿಸಿದರು,್ಪ ಅಮೃತ ಮಾನಕರ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು, ಅಮರಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಗುರುಲಿಂಗಪ್ಪ ಪಾಟೀಲ,ವೀರಪ್ಪ ಕಲಶಟ್ಟಿ, ಹಣಮಂತರಾವ ದೇಸಾಯಿ, ಚಂದ್ರಕಾAತ ಅಲಮಾ, ಸಿದ್ದು ಹರವಾಳ ಸೇರಿದಂತೆ ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.
ಕಾರ್ಮಿಕ ಹೋರಾಟಗಾರ ಡಾ.ಮಲ್ಲೇಶಿ ಸಜ್ಜನ ಇನಿಲ್ಲ
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ಶಹಾಬಾದ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರ ನೋವಿಗೆ ಧ್ವನಿಯಾಗಿದ್ದ ಕಾರ್ಮಿಕ ಹೋರಾಟಗಾರ ಡಾ.ಮಲ್ಲೇಶಿ ಸಜ್ಜನ ಅವರು ಬುಧವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿಯೇ ದಲಿತ ಹೋರಾಟ, ಕಾರ್ಮಿಕರ ಹೋರಾಟದಲ್ಲಿ ಮುಂಚುಣಿಯಲ್ಲಿದ್ದ ಹೋರಾಟಗಾರ ಡಾ.ಮಲ್ಲೇಶಿ ಸಜ್ಜನ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜೆ.ಪಿ.ಕಾರ್ಖಾನೆಯ ಕಾರ್ಮಿಕ ಮುಖಂಡರಾಗಿ ಕಾರ್ಮಿಕ ನೋವಿಗೆ ಸ್ಪಂದಿಸಿ ಅವರ ಜೊತೆ ಹೋರಾಟ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಸಾಮಾನ್ಯ ಜನರೊಂದಿಗೆ ಸಾಮಾನ್ಯರಾಗಿ ಒಡನಾಡಿಯಾಗಿದ್ದರು.
ಮೃತರು ೮೦ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕುವಲ್ಲಿ, ಅದರ ಬೆಳವಣಿಗೆ ಹೋರಾಟದಲ್ಲಿ ಕರಾದಸಂಸ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಅವರೊಂದಿಗೆ ನಿರಂತರ ದಲಿತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೧೯೯೭ ರಲ್ಲಿ ಶಹಾಬಾದ ನಗರದ ಪ್ರತಿಷ್ಠಿತ ಎಚ್‌ಎಂಪಿ ಸಿಮೆಂಟ್ ಕಾರ್ಖಾನೆ ಮುಚ್ಚಲ್ಪಟ್ಟು, ನೂರಾರು ಜನ ಕಾರ್ಮಿಕರು ಉದ್ಯೋಗವಿಲ್ಲದ ಬೀದಿಗೆ ಬಿದ್ದಾಗ, ಕೋಲ್ಕತ್ತಾದ ಡಿಆರ್‌ಟಿ ನ್ಯಾಯಾಲಯದಲ್ಲಿ ನಿರಂತರ ಕಾನೂನು ಹೋರಾಟದ ಮೂಲಕ ಪೂನಾ ಮೂಲಕ ಜವ್ಹಾರ ಅವರು ಕಾರ್ಖಾನೆಯನ್ನು ಖರೀದಿಸಿ, ಕಾರ್ಖಾನೆಯ ನೂರಾರು ಜನ ಕಾರ್ಮಿಕರಿಗೆ ಉದ್ಯೋಗ ದೊರಕುವಂತೆ ಶ್ರಮಿಸಿದ್ದರು. ಕಾರ್ಮಿಕ ಮುಖಂಡರಾಗಿ, ನ್ಯಾಯವಾದಿಯಾಗಿ, ಉಪನ್ಯಾಸಕರಾಗಿ ದೇಶದ ವಿವಿಧ ಭಾಗದಲ್ಲಿ ಉಪನ್ಯಾಸ ನೀಡಿ ಸೇವೆ ಸಲ್ಲಿಸಿ, ಕಳೆದ ಆರು ತಿಂಗಳಿನಿAದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.
೮೦ರ ದಶಕದಲ್ಲಿ ದಲಿತ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು. ಅಲ್ಲದೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಅವರ ಜೊತೆ ಆಡಳಿತ ಮಂಡಳಿಯವರ ವಿರುದ್ಧ ಹೋರಾಟ ಮಾಡುವ ಛಲ ಹೊಂದಿದ್ದರು.
ಸುಮಾರು ಐದಾರು ತಿಂಗಳಿAದ ಅನಾರೋಗ್ಯದಿಂದ ಹಾಸಿಗೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು.
ಶೋಕ ವ್ಯಕ್ತ :
ಕದಸಂಸ ರಾಜ್ಯ ಸಂಚಾಲಕರಾದ ಡಿ.ಜಿ ಸಾಗರ ಹಾಗೂ ಹೆಣ್ಣೂರು ಶ್ರೀನಿವಾಸ, ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ, ಜೆ. ಪಿ ಕಾರ್ಮಿಕ ಸಂಘದ ಅಧ್ಯಕ್ಷ ಮಹ್ಮದ ಉಬೇದುಲ್ಲಾ, ಡಿ. ಡಿ ಓಣಿ, ಪೌರಾಯುಕ್ತ ಡಾ. ಗುರುಲಿಂಗಪ್ಪ, ಕದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ, ನಿಂಗಪ್ಪ ಹುಳಗೋಳ, ರಾಜೇಶ ಯನಗುಂಟಿಕರ, ಶರಣು ಪಗಲಾಪೂರ, ಡಾ. ಅಹ್ಮದ ಪಟೇಲ ಸೇರಿದಂತೆ ಅಪಾರ ಶಿಷ್ಯ ವೃಂದದವರು ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.
ಶಹಾಬಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ
ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಸರ್ವಾಧ್ಯಕ್ಷರಾಗಿ ಆಯ್ಕೆ.
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳ ಮೊದಲ ವಾರದಲ್ಲಿ ಆಯೋಜಿಸಲು ಉದ್ದೇಶಿಸಿರುವ ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಅವರನ್ನು ಸಮ್ಮೇಳನ ಸಮಿತಿ ಆಯ್ಕೆ ಸರ್ವಸಮ್ಮತೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಆಯ್ಕೆ ಸಮಿತಿಯ ಮರೆಪ್ಪ ಹಳ್ಳಿ ತಿಳಿಸಿದ್ದಾರೆ.
ಅವರು ಮಂಗಳವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕಳೆದ ಶನಿವಾರ ಕಸಾಪದ ಸರ್ವ ಸದಸ್ಯರ, ಪ್ರಮುಖರ, ಕನ್ನಡ ಪರ ಚಿಂತಕರ, ವಿವಿಧ ಸಂಘ ಸಂಸ್ಥೆಗಳ ಸಾಮಾನ್ಯ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸುಮಾರು ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಐದು ಹೆಸರುಗಳು ಪ್ರಸ್ತಾಪಿಸಲ್ಪಟ್ಟಿತ್ತು. ಸಭೆಯಲ್ಲಿ ಸಮ್ಮೇಳನದ ಸ್ವಾಗತಿ ಸಮಿತಿ, ಅಧ್ಯಕ್ಷರ ಆಯ್ಕೆ ಸಮಿತಿ ತಿರ್ಮಾನಕ್ಕೆ ಎಲ್ಲರೂ ಬದ್ದರಾಗಲು ಒಪ್ಪಿಲಾಯಿತು.
ಸಭೆಯ ನಿರ್ಣಯದಂತೆ ಎರಡು ದಿನ ಆಯ್ಕೆ ಸಮಿತಿ ಕೂಲಂಕುಷವಾಗಿ ಚರ್ಚೆ ನಡೆಸಿ, ಶಹಾಬಾದ್ ಅಲ್ಟಾçಮ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಲೇ, ಮಕ್ಕಳ ಸಾಹಿತಿಗಳಾಗಿ, ಶಿಕ್ಷಣ ಪ್ರೇಮಿಗಳಾಗಿ, ಯೋಗ ಗುರುವಾಗಿ, ಮಕ್ಕಳಿಗೆ ಮಾರ್ಗದರ್ಶಕರಾಗಿ ದಶಕಗಳಿಂದ ಸೇವೆ ಸಲ್ಲಿಸಿದ್ದು, ಅವರನ್ನು ಸರ್ವಾಧ್ಯಕ್ಷರನ್ನಾಗಿ ಸರ್ವಸಮ್ಮತ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸದರು. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಂಕ್ ಖರ್ಗೆ ಅವರನ್ನು ಸಮ್ಮೇಳನದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರನ್ನಾಗಿ, ಶಾಸಕರಾದ ಬಸವರಾಜ ಮತ್ತಿಮಡು ಅವರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಸರ್ವಸಮ್ಮತವಾಗಿ ಒಪ್ಪಲಾಯಿತು. ಸಮ್ಮೇಳನದ ಯಶಶ್ವಿಗೆ ವಿವಿಧ ಸಮಿತಿಗಳನ್ನು ರಚಿಸಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕ ಅಧ್ಯಕ್ಷರಾಗ ಶರಣಬಸಪ್ಪ ಕೋಬಾಳ, ಅಣವೀರ ಇಂಗಿನಶೆಟ್ಟಿ, ಶರಣಗೌಡ ಪೊಲೀಸ್ ಪಾಟೀಲ, ಮೃತ್ಯುಂಜಯ ಸ್ವಾಮಿ ಹಿರೇಮಠ, ಅಜೀಮ್ ಸಠ, ಕನಕಪ್ಪ ದಂಡಗುಲಕರ್, ಕೆ.ರಮೇಶ ಭಟ್ಟ, ಶರಣು ವಸ್ತçದ,ಬಾಬುರಾವ ಪಂಚಾಳ, ಡಾ.ಅಹ್ಮದ ಪಟೇಲ, ಗುಂಡಮ್ಮಾ ಮಡಿವಾಳ, ಗಿರಿಮಲ್ಲಪ್ಪ ವಳಸಂಗ, ಶರಣಗೌಡ ಪಾಟೀಲ, ನಾಗಣ್ಣ ರಾಂಪುರೆ ಇದ್ದರು.
ಕಸಾಪ ತಾಲೂಕ ಸಮ್ಮೇಳನ ಪೂರ್ವಭಾವಿ ಸಭೆ
ಅರ್ಥಪೂರ್ಣ ಸಮ್ಮೇಳನಕ್ಕೆ ಅಸ್ತು.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ನಗರದ ಪಾರ್ವತಿ ಸಭಾಗೃಹದಲ್ಲಿ ನಡೆದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶಹಾಬಾದ ತಾಲೂಕ ಕನ್ನಡ ಸಾಹಿತ್ಯ ಪರಿಷತ್ ಪ್ರಥಮ ಸಮ್ಮೇಳನ ನಡೆಸಲು ಕರೆದ ಪೂರ್ವಭಾವಿ ಸಭೆಯಲ್ಲಿ ಒಮ್ಮತ್ತದಿಂದ ಒಪ್ಪಿಗೆ ಸೂಚಿಸಲಾಯಿತು.
ಕಸಾಪ ಅಧ್ಯಕ್ಷ ಶರಣಬಸಪ್ಪ ಕೋಬಾಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಥಮ ಸಭೆಯನ್ನು ಯಾವುದೇ ವಯಕ್ತಿಕ ವಿಚಾರಕ್ಕೆ ಒತ್ತು ಕೊಡದೆ, ಸಮ್ಮೇಳನ ಸಮಿತಿಯ ನಿರ್ಣಯಕ್ಕೆ ಬದ್ದರಾಗಿ ಕನ್ನಡ ನಾಡು, ನುಡಿ, ಶಹಾಬಾದ ತಾಲೂಕಿನ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ಸರ್ವರು ಜಾತಿ,ಧರ್ಮ, ರಾಜಕೀಯ ಹೊರತು ಪಡಿಸಿ ಒಮ್ಮತದಿಂದ ಸಮ್ಮೇಳನ ಯಶಶ್ವಿಗೆ ಪ್ರಯತ್ನಿಸೋಣೆ ಎಂದು ಸಭೆಯಲ್ಲಿ ದಸಂಸ ರಾಜ್ಯ ಸಂ.ಸAಚಾಲಕ ಮರೆಪ್ಪ ಹಳ್ಳಿ ಹೇಳಿದರು.
ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ತಾಲೂಕಿನ ಕಲೆ.ಸಾಹಿತ್ಯ ಸಂಸ್ಕೃತಿ ಬಿಂಬಿಸುವ, ಹಳ್ಳಿಗಳ ವಿಶೇಷತೆ ಸಾರುವ ಸ್ಥಬ್ದ ಚಿತ್ರಗಳನ್ನು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಇರಬೇಕೆಂದು ಸಲಹೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಮ್ಮೇಳನದ ಸ್ವಾಗತ ಸಮಿತಿಯನ್ನು ಪ್ರಮುಖರು ಸೇರಿ ಚರ್ಚಿಸಿ, ಅಂತಿಮಗೊಳಿಸಲು, ತಾಲೂಕಿನ ಹಿರಿಕಿರಿಯ ಸಾಹಿತಿಗಳ ಹೆಸರನ್ನು ಪರಿಶೀಲಿಸಿ, ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಒಪ್ಪಿಗೆ ಸೂಚಿಸಲಾಯಿತು. ಸಭೆಯಲ್ಲಿ ಭರತ ಧನ್ನಾ, ಸಿದ್ದುಗೌಡ ಅಫಜಲ್‌ಪೂರ, ನಾಮದೇವ ರಾಠೋಡ, ಮೃತ್ಯುಂಜಯ ಸ್ವಾಮಿ ಹಿರೇಮಠ, ಅಣವೀರ ಇಂಗಿನಶೆಟ್ಟಿ, ಯಲ್ಲಾಲಿಂಗ ಹೈಯಾಳಕರ್, ಕನಕಪ್ಪ ದಂಡಗುಲರಕ, ಎನ್.ಸಿ.ವಾರದ, ಚಂದ್ರಕಾAತ ಗೊಬ್ಬುಕರ್, ಸಿದ್ದಲಿಂಗ ಬಾಳಿ, ಶರಣು ಪಗಲಾಪುರ, ಪೀರಪಾಶಾ ಹೊನಗುಂಟಾ, ರವಿ ಅಲ್ಲಂಶೆಟ್ಟಿ, ಶರಣಗೌಡ ಪಾಟೀಲ, ಗುಂಡಮ್ಮಾ ಮಡಿವಾಳ, ಎನ್.ಸಿ.ವಾರದ, ಸೇರಿದಂತೆ ಹಲವರು ತಮ್ಮ ಅಭಿಪ್ರಾಯ ಮಂಡಿಸಿದರು. ನಗರದ ಪ್ರಮುಖರಾದ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ, ರಾಜು ಮೇಸ್ತಿç, ಅನೀಲಕುಮಾರ ಇಂಗಿನಶೆಟ್ಟಿ, ಶಿವರಾಜ ಇಂಗಿನಶೆಟ್ಟಿ, ಪ್ರಶಾಂತ ಮರಗೋಳ, ಬಾಬುರಾವ ಪಂಚಾಳ, ನಿಂಗಣ್ಣ ಹುಳಗೋಳ, ಸಿದ್ದಲಿಂಗ ಹಿರೇಮಠ, ಅಜೀಮ್ ಸೇಠ, ಶರಣಗೌಡ ಪೊಲೀಸ್ ಪಾಟೀಲ, ಭೀಮರಾವ ಸಾಳುಂಕೆ, ಕಿರಣ ಕೋರೆ, ಮ.ಮಸ್ತಾನ, ಶರಣು ವಸ್ತçದ ವೇದಿಕೆಯಲ್ಲಿದ್ದರು. ವಿಶ್ವರಾಧ್ಯ ಬಿರಾಳ, ಡಾ.ಅಹ್ಮದ ಪಟೇಲ್, ಶಂಕರ ಜಾನಾ, ನಿಂಗಣ್ಣ ಪೂಜಾರಿ, ಸೋಮಶೇಖರ ನಂದಿಧ್ವಜ, ಅಮೃತ ಮಾನಕರ, ಮಲ್ಲಿಕಾರ್ಜುನ ಘಾಲಿ, ಗಿರಿಮಲ್ಲಪ್ಪ ವಳಸಂಘ, ಜಗನ್ನಾಥ ಎಸ್.ಹೆಚ್, ಚಂದ್ರಕಾAತ ಗೊಬ್ಬುರಕರ, ರತನರಾಜ ಕೋಬಾಳಕರ್, ದಶರಥ ಕೋಟನೂರ, ಶಂಕರ ಅಳ್ಳೋಳಿ, ಮಹ್ಮದ ಉಬೇದುಲ್ಲಾ, ನಿಂಗಣ್ಣ ಸಂಗಾವಿಕರ, ಮಹೇಶ ನಗರದ ಗಣ್ಯರು ಪಾಲ್ಗೊಂಡಿದರು.
ಅಧಿಕಾರಿಗಳ ಗೈರು.
ಪ್ರಥಮ ತಾಲೂಕ ಸಮ್ಮೇಳನ ನಡೆಸಲು ಕರೆದ ಪೂರ್ವ ಭಾವಿ ಸಭೆಗೆ ಕಸಾಪ ಸರ್ವ ಸದಸ್ಯರು, ನಗರ ಗಣ್ಯರು ಸೇರಿದಂತೆ ತಾಲೂಕಿನ ಎಲ್ಲಾ ಸರಕಾರಿ ಇಲಾಖೆ ಅಧಿಕಾರಿಗಳನ್ನು ಸಭೆಗೆ ಅವ್ಹಾನ ನೀಡಲಾಗಿತ್ತು. ಆದರೆ, ತಾಲೂಕಿನ ಸರಕಾರಿ ಕಚೇರಿಗಳ ಯಾವೊಬ್ಬ ಅಧಿಕಾರಿಗಳು ಸಹ ಸಭೆಗೆ ಹಾಜರಾಗದೆ, ಅಥವಾ ತಮ್ಮ ಪರವಾಗಿ ಯಾರದರನ್ನು ಕಳುಹಿಸದೆ, ಕನ್ನಡ ನಾಡು, ನುಡಿ, ಭಾಷೆ ಅಗೌರವ ತೋರಿಸಿದ್ದಲ್ಲದೆ, ಸಾಹಿತ್ಯ ಸಮ್ಮೇಳನಕ್ಕೆ ತಮ್ಮ ಅನಾಸಕ್ತಿ ತೋರಿಸಿರುವದು ಕಂಡು ಬಂದಿತು.
ಪ್ರಾಥಮಿಕ ಶಾಲಾ ಸರಕಾರಿ ನೌಕರರ ಚುನಾವಣೆ ಪ್ರಚಾರ
ಬಿ.ಇ.ಓ ಕಾರ್ಯಾಲಯ ಪ್ರಾರಂಭಿಸಲು ಒತ್ತಾಯ : ಕರಣಿಕ
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ತಾಲೂಕು ಕೇಂದ್ರವೆAದು ಘೋಷಣೆಯಾಗಿ ದಶಕಗಳೆ ಕರೆದರು ಇಲ್ಲಿಯವರೆಗೆ ಕೆಲವು ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಶೀಘ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಪ್ರಾರಂಭಿಸಲು ಸರಕಾರದ ಮೇಲೆ ಒತ್ತಡ ತರುವದಾಗಿ ಶಿವಪುತ್ರ ಕರಣಿಕ ಹೇಳಿದರು.
ಅವರು ತೊನಸನಳ್ಳಿ (ಎಸ್) ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ನೌಕರರ ಸಂಘದ ಚುನಾವಣೆ ಪ್ರಯುಕ್ತ ಪ್ರಜಾ ಸತ್ತಾತ್ಮಕ ಶಿಕ್ಷಕರ ಪೆನಲಾ ಪರವಾಗಿ ಪ್ರಚಾರ ನಡೆಸುತ್ತ ಪತ್ರಿಕೆಯೊಂದಿಗೆ ಮಾತನಾಡಿ, ತಾಲೂಕು ಘೋಷಣೆಯಾಗಿ ೧೨ ವರ್ಷವಾದರು ಶಿಕ್ಷಕರು, ಪೋಷಕರು, ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲಸಕ್ಕಾಗಿ ದೂರದ ಚಿತ್ತಾಪುರಕ್ಕೆ ಅಲೆಯುವದು ತಪ್ಪುತ್ತಿಲ್ಲ, ಇದನ್ನು ತಪ್ಪಿಸಲು ಈ ಚುನಾವಣೆಯಲ್ಲಿ ತಮ್ಮ ಪೇನಲ್‌ನ್ನು ಬಹುಮತದಿಂದ ಗೆಲ್ಲಿಸಬೇಕಾಗಿ ಮನವಿ ಮಾಡಿದರು.
ಶಿಕ್ಷಕ ಬನ್ನಪ್ಪ ಸೈದಾಪುರ ಮಾತನಾಡಿ ನಗರದಲ್ಲಿ ಸಿಎ ನಿವೇಶ ಪಡೆದು ಸರಕರಿ ಭವನ ನಿರ್ಮಾಣ, ಪ್ರತಿ ವರ್ಷ ಶಿಕ್ಷಕರಿಗೆ ಆದಾಯ ತೆರಿಗೆ ನಮೂನೆ ೧೯ನ್ನು ಉಚಿತವಾಗಿ ವಿತರಿಸಲಾಗುವದು, ಜ್ಯೋತಿ ಸಂಜೀವಿನ ಅಡಿಯಲ್ಲಿ ಎಲ್ಲಾ ಶಿಕ್ಷಕರಿಗೆ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ಹಲವಾರ ಅಭಿವೃದ್ದಿ ಯೋಜನೆಗಳನ್ನು ನಮ್ಮ ಪೇನಲ್ ಹಾಕಿಕೊಂಡಿದೆ ಎಂದು ಹೇಳಿದರು. ಚುನಾವಣೆ ಪ್ರಚಾರದಲ್ಲಿ ಸುಲೋಚನಾ ಜಾಧವ, ರೀಹಾನಾ ಪರವೀನ್, ಶಿವಲಿಂಗಪ್ಪ ಹೆಬ್ಬಾಳಕರ್, ಕಮಲಾ ಹಿರೇಮಠ, ನಝೀರ್ ಮುಲ್ಲಾ, ನರಸಪ್ಪ, ಹಬೀಬ್, ಶರಫೋದ್ದೀನ್, ಶರಣಮ್ಮ ಇತರರು ಇದ್ದರು.
ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಭಟನೆ
ವಿವಿಧ ಬೇಡಿಕೆಗೆ ಆಗ್ರಹಿಸಿ ಎಸ್‌ಯುಸಿಐ ಪ್ರತಿಭಟನೆ
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ನಗರದಲ್ಲಿ ಮೂಲಭೂತ ಸೌಲಭ್ಯಗಳು ಸಿಗದೆ ಜನರು ಸಂಕಷ್ಟಗಳು ಎದುರಿಸುತ್ತಿದ್ದಾರೆ, ಕನಿಷ್ಠ ಸೌಲಭ್ಯಗಳು ಕೊಡದ ನಗರಸಭೆ ಜನರ ಬಗ್ಗೆ ನಿಷ್ಕಾಳಜಿ ತೋರುತ್ತಿದೆ ಎಂದು ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಗಣಪತರಾವ ಕೆ ಮಾನೆ ಹೇಳಿದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಸೋಮವಾರ ನಗರದ ವಿವಿಧ ಬೇಡಿಕೆಗೆ ಆಗ್ರಹಿಸಿ ನಗರಸಭೆ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಶಹಾಬಾದ ಜನರು ಸ್ಮಾರ್ಟ್ ಸಿಟಿ ಕೇಳುತ್ತಿಲ್ಲ, ಕನಿಷ್ಟ ಮೂಲಭೂತ ಸೌಲಭ್ಯ ನೀಡುವಲ್ಲಿ ನಗರಸಭೆಯವರು ವಿಫಲರಾಗಿದ್ದಾರೆ, ರಸ್ತೆ ಚರಂಡಿ ಬೀದಿ ದೀಪ ಉದ್ಯಾನವನ ಗ್ರಂಥಾಲಯ ಮಹಿಳಾ ಶೌಚಾಲಯ ಮತ್ತು ಆಶ್ರಯ ಕಾಲೋನಿಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಹಲವು ಬಾರಿ ನಗರಸಭೆಗೆ ಮನವಿ ನೀಡಿದರು ಇಲ್ಲಿವರೆಗೂ ಯಾವುದೇ ಸಮಸ್ಯೆ ಬಗೆಹರಿಸದೆ ಇರುವುದು ಜನರ ಬಗ್ಗೆ ನಿಷ್ಕಾಳಜಿ ವಹಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನಗರ ಸಭೆ ಅಧ್ಯಕ್ಷರ ವಾರ್ಡಿನಲ್ಲಿಯೇ ಮಹಿಳೆಯರು ಬಯಲು ಶೌಚಾಲಯಕ್ಕಾಗಿ ಗಿಡ ಗಂಟೆಗಳ ಮಧ್ಯೆ ಹೋಗುವ ಪರಿಸ್ಥಿತಿ ಇದೆ ಎಂದು ಪಕ್ಷದ ಸದಸ್ಯೆ ಗುಂಡಮ್ಮ ಮಡಿವಾಳ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಾದ ರಾಘವೇಂದ್ರ ಎಂ. ಜಿ, ರಾಜೇಂದ್ರ ಅತನೂರ್ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಡಾ.ಕೆ ಗುರುಲಿಂಗಪ್ಪ ಮಾತನಾಡಿ ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು, ನಗಸಭೆಯ ಉಪಾಧ್ಯಕ್ಷೆ ಫಾತಿಮಾ ಬಾಕ್ರುದ್ದೀನ್, ಸದಸ್ಯರಾದ ಸೂರ್ಯಕಾಂತ ಕೋಬಾಳ ಅವರಿಗೆ ಮನೆ ಪತ್ರ ಸಲ್ಲಿಸಿದರು. ಬಸವೇಶ್ವರ ವೃತ್ತದಿಂದ ನಗರ ಸಭೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಜಗನ್ನಾಥ ಎಸ್,ಹೆಚ್, ರಘು ಪವಾರ್ ರಮೇಶ್ ದೇವಕರ, ಅಂಬಿಕಾ ಗುರಜಾಲಕರ, ರಾಧಿಕಾ ಚೌಧರಿ, ದೇವರಾಜ ಹೊನುಗುಂಟ ಸೇರಿದಂತೆ ವಿವಿಧ ಬಡಾವಣೆಯ ಸಾರ್ವಜನಿಕರು ಉಪಸ್ಥಿತರಿದ್ದರು.
ಕಲಬುರಗಿ - ಬೆಂಗಳೂರ ನಡುವೆ ವಿಶೇಷ ರೈಲು
ವಿಜಯ ಟೈಮ್ಸ್ ನ್ಯೂಸ್ ಬೆಂಗಳೂರು
ದೀಪಾವಳಿ ಹಬ್ಬಕ್ಕಾಗಿ ಕಲಬುರಗಿಗೆ ಬರುವರಿಗೆ ಸಂತೋಷದ ಸುದ್ದಿ, ಬೆಂಗಳೂರು-ಕಲಬುರಗಿ ವಿಶೇಷ ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ೨ ಟ್ರೀಪ್ ರೈಲನ್ನು ಓಡಿಸಲಾಗುತ್ತದೆ ಎಂದು ನೈರುತ್ಯ ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ದೀಪಾವಳಿ ಹಬ್ಬದ ವಿಶೇಷ ಸಂದರ್ಭದಲ್ಲಿ ಪ್ರಯಾಣಿಕರಿಗೆ ಅನುಕೂಲಕ್ಕಾಗಿ ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಯಿಂದ ಕಲಬುರಗೆ ನಡುವೆ ವಿಶೇಷ ರೈಲು ಓಡಿಸುತ್ತಿದೆ ಇದರಿಂದ ಹಬ್ಬಕ್ಕೆ ಬರುವರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದೆ.
ರೈಲು ಸಂಖ್ಯೆ 06533 ಅಕ್ಟೋಬರ ೩೦ ಹಾಗೂ ನವೆಂಬರ ೨ ರಂದು ಬೆಂಗಳೂರಿನಿAದ ಪ್ರಯಾಣ ಪ್ರಾರಂಭವಾಗುತ್ತದೆ. ಎಸ್‌ಎಂ ವಿಶ್ವೇಶ್ವರಯ್ಯ ಬೆಂಗಳೂರು ರೈಲು ನಿಲ್ದಾಣದಿಂದ ಅಕ್ಟೋಬರ ೩೦ ಮತ್ತು ನವೆಂಬರ ೨ ರಂದು ರಾತ್ರಿ ೯:೧೫ ಕ್ಕೆ ಹೊರಡಲಿದೆ.
ಕಲಬುರಗಿ- ಬೆಂಗಳೂರು:
ಕಲಬುರಗಿಯಿಂದ ಇದೇ ರೈಲು 06534 ಅಕ್ಟೋಬರ್ ೩೧ ಮತ್ತು ನವೆಂಬರ ೩ ರಂದು ಬೆಳಗ್ಗೆ ೯:೩೦ಕ್ಕೆ ಹೊರಡಲಿರುವ ರೈಲು ಬೆಂಗಳೂರು ರಾತ್ರಿ ೮ ಗಂಟೆಗೆ ತಲುಪಲಿದೆ.
ಎಲ್ಲೆಲ್ಲಿ ನಿಲ್ಲುತ್ತಿದೆ ಈ ರೈಲು:
ಯಲಹಂಕ ಮಾರ್ಗವಾಗಿ, ಧಮಾವರಂ, ಅನಂತಪುರ, ಗುಂತಕಲ್, ಆದೋನಿ, ಮಂತ್ರಾಲಯ ರೋಡ್, ರಾಯಚೂರ, ಕೃಷ್ಣಾ, ಯಾದಗಿರಿ, ಶಹಾಬಾದ್ ನಿಲ್ದಾಣಗಳಲ್ಲಿ ಈ ರೈಲು ನಿಲ್ಲುತ್ತದೆ.
ಬೋಗಿಗಳ ಸಂಖ್ಯೆ :
ಹಬ್ಬದ ಈ ವಿಶೇಷ ರೈಲುನಲ್ಲಿ ಒಟ್ಟು 19 ಬೋಗಿಗಳನ್ನು ಅಳವಡಿಸಲಾಗಿದೆ. ೧೨ ಜನರಲ್(ಸಾಮಾನ್ಯ) ೩ ಸ್ಲೀಪರ್ ಕ್ಲಾಸ್, ೨ ಎಸಿ, ೧ ಲಗೇಜ್ /ಬ್ರೇಕ್ ಎಸ್‌ಎಲ್‌ಆರ್‌ಡಿ ಸೇರಿಸಿ. ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ರೈಲ್ವೆ ಇಲಾಖೆಯ ಅಧಿಕೃತ ವೆಬ್ ಸೈಟ್‌ಗೆ ಭೇಟಿ ನೀಡಿ ಹೆಚ್ಚಿನ ಮಾಹಿತಿ ಪಡಿಯಬಹುದು.
ಆಸ್ಪತ್ರೆ ಸಮಸ್ಯೆಗಳತ್ತ ಕಣ್ಣೇತ್ತಿ ನೋಡದ ಡಿಸಿ.
೨೦ ನಿಮಿಷದಲ್ಲಿ ಪರಶೀಲನೆ ಮುಕ್ತಾಯ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ತಾಲೂಕ ಕೇಂದ್ರ ಸಮುದಾಯ ಆಸ್ಪತ್ರೆಗೆ ಜಿಲ್ಲಾಧಿಕಾರಿ ಫೌಜೀಯಾ ತರನ್ನುಮ್ ಅವರು ಏಕಾಏಕಿ ಭೇಟ್ಟಿ ನೀಡಿ, ಇಲ್ಲಿಯ ವೈದ್ಯಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಆಸ್ಪತ್ರೆ ಸಮಸ್ಯೆಗಳತ್ತ ಕನಿಷ್ಠ ಕಣ್ಣೇತ್ತಿ ನೋಡದೆ ೧೦-೧೫ ನಿಮಿಷದಲ್ಲಿಯೇ ಪರಿಶೀಲನೆ ಪ್ರಕ್ರಿಯೇ ಮುಗಿಸಿ, ಕಾರು ಹತ್ತಿದ್ದಾರೆ.
ಮಂಗಳವಾರ ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಚಿತ್ತಾಪುರ ತಾಲೂಕಿನ ಕೆಲ ಆಸ್ಪತ್ರೆಗಗಳಿಗೆ ಭೇಟ್ಟಿ ನೀಡಿ, ಅಲ್ಲಿಂದ ಶಹಾಬಾದ ಆಸ್ಪತ್ರೆಗೆ ಆಗಮಿಸಿದ್ದಾರೆ. ಬಂದವರೆ ನೇರವಾಗಿ ಹೆರಿಗೆ ವಿಭಾಗಕ್ಕೆ ಭೇಟ್ಟಿ ನೀಡಿ, ಅಲ್ಲಿಂದ ವೈದ್ಯಾಧಿಕಾರಿಗಳ ಕಚೇರಿಗೆ ಹೋಗಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ನಂತರ ಅಲ್ಲಿಂದ ಹೊರ ಹೋಗಿದ್ದಾರೆ.
ಅದರೆ, ಆಸ್ಪತ್ರೆಯ ಸಮಸ್ಯೆಗಳನ್ನು ನೋಡದೆ ಹಾಗೇ ಹೋಗಿರುವದು ಎಷ್ಟು ಸಮಂಜಸ ಎಂಬುವದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅಸ್ಪತ್ರೆಯಲ್ಲಿರುವ ಶೌಚಾಲಯ ಕನಿಷ್ಠ ಸ್ವಚ್ಚತೆ ಇಲ್ಲದೆ ಇರುವದನ್ನು ನೋಡದೆ ಹಾಗೇ ಹೋಗಿದ್ದಾರೆ. ಅಲ್ಲದೆ, ಕಳೆದ ಮೂರು ತಿಂಗಳ ಹಿಂದೆ ಲೋಕಾಯುಕ್ತ ಎಸ್‌ಪಿ ಅಂಟೋನಿ ಜಾನ್ ಅವರು ಆಸ್ಪತ್ರೆಗೆ ಭೇಟ್ಟಿ ನೀಡಿದ್ದಾಗ, ಇಲ್ಲಿಯ ಶುದ್ದ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸದೆ ಇರವದನ್ನು ಕಂಡು, ಅದನ್ನು ಶೀಘ್ರದಲ್ಲಿ ದುರಸ್ತಿಗೊಳಿಸಿ, ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಗೆ ಉಪಯೋಗಿವಾಗುವಂತೆ ಕ್ರಮ ಕೈಗೊಳ್ಳಲು ಸ್ಥಳದಿಂದಲೇ ಫೋನ್ ಮುಖಾಂತರ ತಾಲೂಕ, ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದರು. ಆದರೆ, ಮೂರು ತಿಂಗಳಾಗದರು ಇತ್ತ ನೋಡದೆ ಇರುವದನ್ನು ಡಿಸಿ ಯವರೂ ಪರಿಶೀಲನೆ ನಡೆಸಲೇ ಇಲ್ಲಾ,
ತ್ಯಾಜ್ಯ ಸುಟ್ಟ ಸಿಬ್ಬಂದಿ
ಆಸ್ಪತ್ರೆಯ ಹಿಂದುಗಡೆ ಆಸ್ಪತ್ರೆಯ ತ್ಯಾಜ್ಯವನ್ನು ಹಾಕಲು ನಿರ್ಮಿಸಿರುವ ಸ್ಥಳದಲ್ಲಿ ವೈದ್ಯಕೀಯ ನಿಯಮದಂತೆ ಸಿರೀಂಜ್, ಹ್ಯಾಂಡ್‌ಗ್ಲೋಸ್, ಔಷಧಿಯ ಗಾಜಿನ ಬಾಟಲಿಗಳನ್ನು ಸೂಕ್ತ ವಿಲೇವಾರಿ ಮಾಡದೆ ಅವುಗಳನ್ನು ತ್ಯಾಜ್ಯ ಎಸೆಯುವ ತಿಪ್ಪೆಯಲ್ಲಿ ಹಾಕಿ ಸುಟ್ಟಿದ್ದನು ಜಿಲ್ಲಾಧಿಕಾರಿಗಳ, ಜಿಲ್ಲಾ, ತಾಲೂಕ ವೈದ್ಯಾಧಿಕಾರಿಗಳ ಗಮನಕ್ಕೆ ಬರಲೆ ಇಲ್ಲ.
ಲೋಕಾಯುಕ್ತರ ಕಿಮ್ಮತ್ತಿಲ್ಲ
ಕಳೆದ ಮೂರು ತಿಂಗಳ ಹಿಂದೆ ಆಸ್ಪತ್ರೆಗೆ ಭೇಟ್ಟಿ ನೀಡಿದ್ದ ಲೋಕಾಯುಕ್ತರು ಆಸ್ಪತ್ರೆ ಸುತ್ತಲಿನ ಪರಿಸರದಲ್ಲಿ ಗಿಡಗಂಟಿ ಬೆಳೆದಿದ್ದನ್ನು ನಗರ ಸಭೆ ಸಿಬ್ಬಂದಿ ಸಹಕಾರದಿಂದ ಸ್ವಚ್ಚಗೊಳಿಸಿ ಎಂದು ಹೇಳಿದ್ದರು. ಇನ್ನೂ ಹಾಗೆ ಇರುವದು ಕಂಡು ಬಂದಿತ್ತು.
ಜಿಲ್ಲಾಧಿಕಾರಿಗಳೊAದಿಗೆ ತಹಶೀಲ್ದಾರ ಜಗದೀಶ ಚೌರ, ಜಿಲ್ಲಾ, ತಾಲೂಕ ವೈದ್ಯಾಧಿಕಾರಿಗಳು, ಸ್ಥಳೀಯ ವೈದರು, ಸಿಬ್ಬಂದಿ ವರ್ಗ, ಪಿಐ ನಟರಾಜ ಲಾಡೆ ಇದ್ದರು.
ಕಳ್ಳತನವಾಗಿದ್ದ ಮೋಬೈಲ್ ಪತ್ತೆ : ಹಸ್ತಾಂತರ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಬಸ್, ಮಾರುಕಟ್ಟೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡಿದ್ದ ೮ ಜನರ ಮೊಬೈಲ್ ಪತ್ತೆ ಮಾಡಿರುವ ಶಹಾಬಾದ ಪೊಲೀಸರು, ದೂರುದಾರಿಗೆ ಮೊಬೈಲ್ ವಾಪಾಸು ಕೊಟ್ಟಿದ್ದಾರೆ.
ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳ್ಳತನವಾಗಿದ್ದ ೮ ಮೋಬೈಲ್ ಪೋನ್ ಹೆಚ್ಚುವರಿ ಎಸ್ ಪಿ ಎನ್ ಶ್ರೀನಿಧಿ ಅವರು ಮೋಬೈಲ್ ವಾರಸುದಾರರಿಗೆ ಹಸ್ತಾಂತರಿಸಿದರು. ಪಿಐ ನಟರಾಜ ಲಾಡೆ, ಕೆಲವು ದಿನದಿಂದ ಕಳ್ಳತನವಾಗಿದ್ದ ೮ ಮೊಬೈಲ್ ಪೋನ್‌ಗಳ ಬಗ್ಗೆ ದೂರು ದಾಖಲಿಸಿದ್ದು, ಕಾರ್ಯಾಚರಣೆ ಮಾಡಿದ ಪೊಲೀಸರು ಸಿಇಐಆರ್ ಪೋರ್ಟಲ್ ಮೂಲಕ ಪತ್ತೆ ಹಚ್ಚಲಾಗಿದೆ.
ಪಿಎಸ್‌ಐ ಚಂದ್ರಕಾAತ ಮಕಾಲೆ, ಶಾಮರಾವ, ಎಎಸ್‌ಐ ಮಲ್ಲಿಕಾರ್ಜುನ, ಸಿಬ್ಬಂದಿ ಹುಸೇನ ಪಾಶಾ, ಮಲ್ಲಿಕಾರ್ಜುನ, ಹುಸೇನ ಪಟೇಲ್ ಮೊಬೈಲ್ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳ ಬಂಧನವಿಲ್ಲ : ಮೋಬೈಲ್ ಕಳ್ಳತನ ಮಾಡಿದ್ದ ಆರೋಪಿಗಳನ್ನು ಪೊಲೀಸರು ಇದುವರೆಗೂ ಬಂಧನ ಮಾಡಿಲ್ಲ. ಕೇವಲ ಮೋಬೈಲ್ ಖರೀದಿಸಿದ ಗ್ರಾಹಕರನ್ನು ಮಾತ್ರ ಪತ್ತೆ ಮಾಡಿ, ಅವರಿಂದ ಮೊಬೈಲ್ ಜಪ್ತಿ ಮಾಡಿದ್ದಾರೆ.
ಎಲ್‌ಎಲ್‌ಎಫ್‌ಯಿಂದ ಸ್ವಚ್ಛತೆ ಅಭಿಯಾನ
ವಯಕ್ತಿಕ ಸ್ವಚ್ಛತೆಯ ಅರಿವು ತಿಳಿಯಬೇಕು
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ಸ್ವಚ್ಛತಾ ಬಗ್ಗೆ ಜನರಿಗೆ ಮೊದಲು ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಸ್ವಚ್ಛತೆಯ ಮಹತ್ವ ತಿಳಿಯುತ್ತದೆ, ನಮ್ಮ ಸುತ್ತಮುತ್ತಲಿನ ಪರಿಸರ ನಿರ್ಮಲವಾಗಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಆರೋಗ್ಯ ಹಾಳಾಗಲು ದಾರಿಯಾಗುತ್ತದೆ ಎಂದು ತರನಳ್ಳಿ ಶಾಲೆಯ ಮುಖ್ಯಗುರು ಶಿವಲಿಂಗಪ್ಪ ಹೆಬ್ಬಾಳಕರ್ ಹೇಳಿದರು.
ಅವರು ನಗರದ ಹೊನಗುಂಟಾ ಕ್ಲಸ್ಟರ್‌ನ ಎಎಲ್ ಹಾಗೂ ಎಲ್‌ಎಲ್‌ಎಫ್ ಸಂಸ್ಥೆಯ ವತಿಯಿಂದ ತರನಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.
ಸಾರ್ವಜನಿಕರು ಸ್ವಚ್ಛತೆಯನ್ನು ಸೇವೆ ಎಂದು ಪರಿಗಣಿಸುವ ಮೂಲಕ ತಮ್ಮ ಮನೆ, ಬಡಾವಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಶ್ರಮದಾನ, ಸ್ವಚ್ಛತೆಯ ಪ್ರಜ್ಞೆ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಎಲ್‌ಎಲ್‌ಎಫ್ ಅಧಿಕಾರಿ ಕೃಷ್ಣ ಅವರು ಮಾತನಾಡಿ ಸಮುದಾಯವನ್ನು ಸ್ಥಳೀಯವಾಗಿ ಸರ್ಕಾರೇತರ ಸಂಸ್ಥೆ, ಆರೋಗ್ಯ ಇಲಾಖೆ, ಸ್ವಚ್ಛತೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು.
ಮುಖಂಡರಾದ ಅಪ್ಪು ಗೌಡ ಪೊಲೀಸ್ ಪಾಟೀಲ್, ಗ್ರಾಪಂ ಅಧ್ಯಕ್ಷೆ ನಿರ್ಮಲ ಶಿವಕುಮಾರ, ಉಪಾಧ್ಯಕ್ಷರಾದ ಚನ್ನಪ್ಪ ಕುಂಬಾರ, ಎಸ್‌ಡಿಎಮ್‌ಸಿ ಅಧ್ಯಕ್ಷ ಶಿವಮೂರ್ತಿ, ಸಿಹೆಚ್‌ಓ ಮಹ್ಮದ ಶಹನವಾಜ್, ಮುಖ್ಯಗುರು ಶಿವಲಿಂಗಪ್ಪ ಹೆಬ್ಬಾಳಕರ್, ಪಿಎಸ್‌ಇಓ ಅಧಿಕಾರಿ ನೀಲಾವತಿ, ಎಲ್‌ಎಲ್‌ಎಫ್ ಸಂಸ್ಥೆಯ ಶಿಕ್ಷಕಿ ಜ್ಯೋತಿ ಹಾಗೂ ಶಿಕ್ಷಕಿಯರು, ತರನಳ್ಳಿ ಗ್ರಾಮದ ಮುಖಂಡರು, ಯುವಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಸಂಘದ ಸಾಮಾಜಿಕ ಕಾರ್ಯ
ತಾಲೂಕ ಮಟ್ಟದ ಒಕ್ಕೂಟ ಸದಸ್ಯರ ಸಮಾವೇಶವನ್ನು
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ಧರ್ಮಸ್ಥಳ ಸಂಘ ಕೇವಲ ಸಾಲ ಕೊಡುವುದಷ್ಟೇ ಅಲ್ಲದೆ ನೂರಾರು ಜನೋಪಯೋಗಿ ಯೋಜನೆ ಕೈಗೆತ್ತಿಕೊಂಡಿದೆ. ದುಶ್ಚಟಮುಕ್ತ ಸಮಾಜ ನಿರ್ಮಿಸಲು ಜನಜಾಗೃತಿ ವೇದಿಕೆಯ ನಿರ್ಣಯಗಳನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ರಾವೂರ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಪೀಠಧಿಪತಿ ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಅವರು ರಾವೂರ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿದ್ದ ಚಿತ್ತಾಪುರ ತಾಲೂಕ ಮಟ್ಟದ ಒಕ್ಕೂಟ ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಹಲವು ಜನಪರ ಯೋಜನಗಳ ಮೂಲಕ ಜನ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಅತ್ಯಂತ ಶ್ಲಾಘನೀಯವಾಗಿದ್ದು, ಸ್ವಾಸ್ಥ ಸಮಾಜವನ್ನು ನಿರ್ಮಾಣ ಮಾಡುವ ಮೂಲಕ ನಾಡಿನ ಕಲ್ಯಾಣದ ಆಶಯ ಹೊಂದಿರುವ ಸಂಸ್ಥೆಯು ಮಹಿಳಾ ಸಬಲೀಕರಣ, ವ್ಯಸನಮುಕ್ತ ಸಮಾಜ, ಆರೋಗ್ಯದ ಕಾಳಜಿ, ಪರಿಸರದ ಕಾಳಜಿ, ದೇವಸ್ಥಾನಗಳ ರಕ್ಷಣೆ, ಜೀರ್ಣೋದ್ದಾರಗಳ ಮೂಲಕ ಜಾತ್ಯಾತೀತವಾಗಿ, ಧರ್ಮಾತೀತವಾಗಿ ಸೇವೆ ಸಲ್ಲಿಸುತ್ತಿರುವ ಸಂಸ್ಥೆ ಎಂದರೆ ಅದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರು ಸಿದ್ದಲಿಂಗ ಬಾಳಿ ಮಾತನಾಡಿ ಸಮಾಜದ ಎಲ್ಲಾ ವರ್ಗದವರಿಗೆ ಯೋಜನೆಗಳನ್ನು ರೂಪಿಸಿದ್ದಾರೆ. ಜಾತಿ ಧರ್ಮದ ಭೇಧವಿಲ್ಲದೆ ಎಲ್ಲರೂ ಈ ಯೋಜನೆಗಳ ಲಾಭವನ್ನು ಪಡೆದು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಸಂಸ್ಥೆಯ ಒಕ್ಕೂಟ ಸದಸ್ಯರು ಪ್ರತಿಯೊoದು ಯೋಜನೆಯನ್ನು ಮನೆ ಮನೆಗೆ ತಲುಪಿಸುವ ಮೂಲಕ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಅವರ ಕನಸುಗಳನ್ನು ಸಾಕಾರಗೊಳಿಸುವ ಕೆಲಸವನ್ನು ಮಾಡಬೇಕಿದೆ ಎಂದು ಹೇಳಿದರು.ಸಂಸ್ಥೆಯ ಜಿಲ್ಲಾ ನಿರ್ದೇಶಕ ಕಮಲಾಕ್ಷ ಅವರು ಕಳೆದ ಎಂಟು ವರ್ಷಗಳಲ್ಲಿ ಸಂಸ್ಥೆಯು ಈ ಭಾಗದಲ್ಲಿ ಹಮ್ಮಿಕೊಂಡಿರುವ ಯೋಜನೆಗಳು ಹಾಗೂ ತಲುಪಿರುವ ಗುರಿಯ ಕುರಿತು ಮಾಹಿತಿ ನೀಡಿದರು. ತಾಲೂಕ ಯೋಜನಾಧಿಕಾರಿ ಗುರುರಾಜ ಬಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಜಿಲ್ಲಾ ನಿರ್ದೇಶಕರಾದ ಕಮಲಾಕ್ಷ, ವಿಠ್ಠಲ್ ಕಟ್ಟಿಮನಿ, ಬ್ಯಾಂಕ್ ಅಧಿಕಾರಿ ಕಿರಣ್ ವೇದಿಕೆಯಲ್ಲಿದ್ದರು. ತಾಲೂಕಿನ ೬೦ ಒಕ್ಕೂಟದ ೫೦೦ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಮೇಲ್ವಿಚಾರಕ ಫಕೀರೇಶ್ ನಿರೂಪಿಸಿದರು, ವಲಯ ಮೇಲ್ವಿಚಾರಕಿ ಜಯಶ್ರೀ ವಂದಿಸಿದರು.
“ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿ ಫಲಾನುಭವಿಗಳ ಆರ್ಥಿಕ, ಸಾಮಾಜಿಕ, ಹಾಗೂ ಶೈಕ್ಷಣಿಕ ಪ್ರಗತಿಗಾಗಿ ಸಾಮಾಜಿಕ ಸೇವೆಯನ್ನು ಮಾಡುತ್ತಿದೆ. ಸಮಾಜದಲ್ಲಿ ಎಲ್ಲರೂ ನೆಮ್ಮದಿಯ ಬದುಕನ್ನು ಬದುಕಲು ಉತ್ತಮ ಆರೋಗ್ಯ ನಿರ್ಮಾಣ ಮಾಡಲು ಅರಿವು ಕಾರ್ಯಕ್ರಮ ಹಲವಾರು ಸಮಾಜ ಪರ ಯೋಜನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ”.
- ಕಮಲಾಕ್ಷ, ಸಂಸ್ಥೆಯ ಜಿಲ್ಲಾ ನಿರ್ದೇಶಕ
ಸತ್ಯ-ಮಿಥ್ಯಗಳ ನಡುವಿನ ಮಸ್ಕಿಯ ಗಾಂಧಿ-೧೫೫ ವಿಚಾರ ಸಪ್ತಾಹ
ಭಾರತದಲ್ಲಿ ೧೫೫ ವರ್ಷಗಳ ಹಿಂದೆ ಜನಿಸಿದ ಮೋಹನದಾಸ್ ಕರಮಚಂದ್ ಗಾಂಧಿ ಮಹಾತ್ಮನಾದದ್ದು ಈಗ ಇತಿಹಾಸ. ವಿಚಿತ್ರವೆಂದರೆ ಈ ಮಹಾಪುರುಷನ ಕುರಿತಂತೆ ಈಗಲೂ ದೇಶದ ತುಂಬಾ ಗಂಭೀರ ಚರ್ಚೆಗಳು ಆತ ತೀರಿಕೊಂಡು ಏಳು ದಶಕಗಳೇ ಕಳೆದಿದ್ದರೂ ಇಂದಿಗೂ ನಡೆಯುತ್ತಲೆ ಇವೆ. ಈ ಚರ್ಚೆಗಳು ಗಾಂಧೀಜಿಯವರನ್ನು ಕುರಿತಂತೆ ಸತ್ಯ ಹೇಳುವ ಅಥವಾ ಮಿಥ್ಯ ಪ್ರಕಟಗೊಳಿಸುವ ಪ್ರಯತ್ನದ ಹಿನ್ನೆಲೆಯಲ್ಲೆ ಏನೇಲ್ಲ ನಡೆದರೂ ಗಾಂಧೀಜಿ ಬರಹಗಾರರಿಂದ ಹಿಡಿದು, ವಿದ್ವಾಂಸರವರೆಗೆ, ಕವಿಗಳಿಂದ ಹಿಡಿದು ರಾಜಕಾರಣಿಗಳ ವರೆಗೂ ಈಗಲೂ ಜೀವಂತವಿರುವ ಒಂದು ಅಚ್ಚರಿಯ ಶಕ್ತಿ!
ವಕೀಲರಾಗಿ, ಹೋರಾಟಗಾರರಾಗಿ, ಚಳುವಳಿಗಳ ರೂವಾರಿಯಾಗಿ, ಪತ್ರಕರ್ತರಾಗಿ, ಬರಹಗಾರರಾಗಿ ಗಾಂಧೀಜಿ ರೂಪುಗೊಂಡದ್ದು ಅಸಾಮಾನ್ಯ. ಬುದ್ಧ, ಕ್ರಿಸ್ತ, ಬಸವಣ್ಣ, ಮಾರ್ಟಿನ್ ಲೂಥರ್ ಕಿಂಗ್, ಲೇನಿನ್, ಮಾರ್ಕ್ಸ, ಮಾಕ್ಸಿಂ ಗೋರ್ಕಿ, ಟಾಲಸ್ಟಾಯ್, ಪಾಬ್ಲೋ ನೋಡ, ಆಲ್ಬರ್ಟ್ ಐನಸ್ಟಿನ್, ರವೀಂದ್ರನಾಥ ಟಾಗೋರ್, ಬಾಬಾಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಹೋಲಿಸುವ ಚುಂಬಕ ಶಕ್ತಿಯ ಚಿಂತಕ ವ್ಯಕ್ತಿತ್ವ ಗಾಂಧೀಜಿಯವರದು. `ಒಥಿ ಐiಜಿe is ಒಥಿ ಒessಚಿge’(ನನ್ನ ಜೀವನವೆ ನನ್ನ ಸಂದೇಶ) ಎನ್ನುವ ಸಂದೇಶವನ್ನು ಮಹಾತ್ಮಾ ಗಾಂಧೀಜಿಯವರೂ ಯಾವಾಗಲೂ ಕೊಟ್ಟಿದ್ದರೂ ಅವರ ಬದುಕೂ ಈಗಲೂ ನಮಗೆ ಹೊಸ ಹೊಸ ಹೊಳಹುಗಳನ್ನು ನೀಡುತ್ತಲೇ ಬಂದಿದೆ. ಇಷ್ಟಿದ್ದರೂ ದೇಶದಲ್ಲಿ ನಡೆಯುತ್ತಿರುವ ಹಲವು ಬಗೆಯ ಸಮಸ್ಯೆಗಳು ಯಾವುದೋ ಒಂದು `ಇಸಂ’ಗೆ ಜೋತು ಬಿದ್ದು ನಮ್ಮ ಜನಮಾನಸದ ಬದುಕನ್ನು, ಸಮಾಜದ ಆರೋಗ್ಯವನ್ನು, ಸಮುದಾಯದ ಒಗ್ಗಟ್ಟನ್ನು ಇನ್ನಷ್ಟು, ಮತ್ತಷ್ಟು ಸಂಕಿರ್ಣಗೊಳಿಸುತ್ತಿರುವುದು ಸಧ್ಯ ಕಂಡುಬರುತ್ತಿರುವ ತಲ್ಲಣ.
ಹೀಗಿದ್ದರೂ ಗಾಂಧಿ ಜೊತೆಗಿನ ಅನುಸಂಧಾನವೆAದರೆ ಅದು ಬೌಧ್ಧಿಕ ಕಸರತ್ತಿನ ಜೊತೆಗಿನ ಚಿಂತನ ಮಂಥನ, ಸ್ವಾತಂತ್ಯ ಹೋರಾಟದ ಜೀವನ ಮೌಲ್ಯಗಳು ಮಾಯವಾಗುತ್ತಿರುವ ಈ ಸಂದರ್ಭದಲ್ಲಿ, ನವಜನಾಂಗದಲ್ಲಿ ಗಾಂಧಿಯ ಕುರಿತ ವಿಕೃತ ಭಾವನೆ ಮೂಡುತ್ತಿರುವ ಕಾಲದಲ್ಲಿ ಈ ಚಿಂತನೆಗಳು ಅಗತ್ಯ ಎನಿಸದೆ ಇರಲಾರದು. ಇದು ಈಗಿನ ಸಂದರ್ಭದಲ್ಲಿ ತೀವ್ರ ಅಗತ್ಯ ಮತ್ತು ಮಹತ್ವಪೂರ್ಣ ಎನಿಸುತ್ತಿದೆ.
ಕವಿ ಜಿ.ಎಸ್.ಶಿವರುದ್ರಪ್ಪ ಕವಿತೆಯೊಂದರಲ್ಲಿ ಹೀಗೆ ಹೇಳಿದ್ದಾರೆ:
`ಗಾಂಧಿ ಹೇಳುತ್ತಾರೆ:
ತೆರೆದಿಡುತ್ತೇನೆ ಈ ನನ್ನ ಮನೆಯ ಕಿಟಕಿ ಬಾಗಿಲುಗಳನು ಅಗಲವಾಗಿ
ಬರಲಿ ಈ ಇದರೊಳಗೆ ಜಗತ್ತಿನೆಲ್ಲಾ
ಗಾಳಿ ಬೆಳಕುಗಳು ನಿರಾತಂಕವಾಗಿ’
`ನಾನಾದರೋ ಯಾವ ಗಾಳಿಗಳ ದಾಳಿಗೂ
ಹೊಯ್ದಾಡದಂತೆ ಕಾಲೂರಿ ನಿಲ್ಲುತ್ತೇನೆ
ಈ ನೆಲದಲ್ಲಿ ಸುಭದ್ರವಾಗಿ’
ಗಾಂಧೀಜಿ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಈ ಅಂಶವನ್ನು ನಿಜವಾಗಿಸಿದ್ದಾರೆ. ****
ರಾಯಚೂರು ಜಿಲ್ಲೆಯ ಮಸ್ಕಿಯ ಲವಲವಿಕೆಯ ಗೆಳೆಯರಾದ ಮಹಾಂತೇಶ ಮಸ್ಕಿ, ಗುಂಡುರಾವ್ ದೇಸಾಯಿ, ಪರಶುರಾಮ ಕೋಡಗುಂಟಿ, ಮತ್ತಿತರ ಸಮಾನ ಮನಸ್ಕ ಗೆಳೆಯರು ೨೦೧೬ ರಲ್ಲಿ ಅಕ್ಷರ ಸಾಹಿತ್ಯ ವೇದಿಕೆ ಆರಂಭಿಸಿದರು. ೨೦೧೮ ರಲ್ಲಿ ಕವಿಗೋಷ್ಠಿಯೊಂದಿಗೆ ಗಾಂಧಿ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಾಂಧಿಜೀಯವರ ೧೫೦ ನೇ ಜಯಂತಿಯ ಪ್ರಯುಕ್ತ ಆರಂಭವಾದ ಗಾಂಧಿ ಚಿಂತನೆಯ ವಿಚಾರಗಳು ಕಳೆದ ಆರು ವರ್ಷಗಳಿಂದ ನಿರಂತರವಾಗಿ ನಡೆದುಬರುತ್ತಿವೆ, ಗಾಂಧಿ ವಿಚಾರ ಸಪ್ತಾಹ ನಡೆಯುತ್ತಿರುವುದು ಇದೆ ಮೊದಲು.
ಅಕ್ಷರ ಸಾಹಿತ್ಯ ವೇದಿಕೆ, ಬಂಡಾರ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ಗಳು ಒಟ್ಟಾರೆಯಾಗಿ ೨೦೨೪ ರ ಗಾಂಧಿ ಜಯಂತಿ ಆಚರಿಸಿದ್ದು ಮಾತ್ರ ವಿಶೇಷ ರೀತಿಯಲ್ಲಿ. ಮಸ್ಕಿಯ `ಮನೆ ಮನೆಗೆ ಗಾಂಧಿ’ü ಎನ್ನುವ ಧೇಯ ವಾಕ್ಯದೊಂದಿಗೆ ಒಂದು ವಾರದ ಚಿಂತನ ಮಂಥನದಲ್ಲಿ ಗಾಂಧೀಜಿ ಕುರಿತ ಹಲವು ಬಗೆಯ ಚಿಂತನೆಗಳು, ವಿದ್ವತ್‌ಪೂರ್ಣ ಮಾತುಗಳು, ಗಾಂಧೀ ಆತ್ಮ ಕತೆಯ ವಾಚನ, ವಿಚಾರ ಚಿಂತನೆ, ರಾಮಧುನ್, ಗಾಂಧೀ ಕುರಿತ ಕಾವ್ಯ ಪ್ರಸ್ತುತಿ ವಿಭಿನ್ನ ಮತ್ತು ವಿಶಿಷ್ಟ ಎನಿಸಿದವು.
೨೬.೯.೨೦೨೪ ರಂದು ಹಿರಿಯ ಸಾಹಿತಿ ಸಿ.ದಾನಪ್ಪ ಅವರಿಂದ ಉದ್ಘಾಟನೆಗೊಂಡ ಸಪ್ತಾಹ ನಿರಂತರವಾಗಿ ನಡೆದು ೨.೧೦೨೦೨೪ ರಂದು ಮಾಜಿ ಶಾಸಕ ಪ್ರತಾಪಗೌಡ ಪಾಟಲ ಅವರಿಂದ ಸಮಾರೋಪಗೊಂಡದ್ದು ದಾಖಲೆ.
ಗಾಂಧಿ ವಿಚಾರ ಚಿಂತನೆಯಲ್ಲಿ `ಗಾಂಧಿಯ ಹತ್ಯೆ ಮಾನವತೆಯ ಹತ್ಯೆ’(ಮಲ್ಲಯ್ಯ), `ಗಾಂಧೀಜಿ ಜೀವನ ವೃತ್ತಾಂತ’(ಆದಪ್ಪ ಹೆಂಬಾ,) `ಗಾಂಧಿ ಮತ್ತು ದಲಿತರು-ಒಂದು ಪರಾಮರ್ಶೆ’(ಎಕ್ಬಾಲ್ ಸಾಬ್), `ಗಾಂಧಿ ಮತ್ತು ಬಾಂಬ್ ಸಂಸ್ಕೃತಿ’(ಶAಕರ್ ಸಕ್ರಿ), `ಗಾಂಧಿ ಮತ್ತು ಅಪಪ್ರಚಾರ’(ವೀರೇಶ ಸೌದ್ರಿ), `ಅನ್ಯ ರಾಷ್ಟçಗಳಲ್ಲಿ ಗಾಂಧಿ’ü(ನೇತಾಜಿ ಗಾಂಧಿ), `ಗಾಂಧಿ ಮತ್ತು ಚರಕದ ವಿಶೇಷತೆ’(ಮಂಗಳಾ ಎಸ್), `ಎಲ್ಲರ ಗಾಂಧಿ’(ಶರಣಬಸವ ಗುಡದಿನ್ನಿ) ಹಾಗೂ ಗಾಂಧಿ ಕುರಿತ ಪ್ರಖರ ವಿಚಾರಗಳನ್ನು ಮಂಡಿಸಿದ (ಬಸವಂತರಾಯ ಕುರಿ), ಸಾಹಿತ್ಯದಲ್ಲಿ ಗಾಂಧಿ ಕುರಿತು (ಮಂಡಲಗಿರಿ ಪ್ರಸನ್ನ) ಮುದ ನೀಡಿದ ವಿಚಾರಗಳು.
ಕಾವ್ಯ ಪ್ರಸ್ತುತಿಯಲ್ಲಿ ರಾಮಸ್ವಾಮಿ, ಬಸ್ಸಪ್ಪ ಪೂಜಾರ, ಕಾಮಾಕ್ಷಿ ತೋಟದ್, ಷರೀಫ್ ಹಸಮಕಲ್, ದೇವರಾಜ್ ಗಂಟಿ, ಕೆ.ವರದೇಂದ್ರ, ಮಾಜಾನ್ ಮಸ್ಕಿ, ವಿಶ್ವನಾಥ ಕಂಬಾಳಿಮಠ, ಅಬ್ದುಲ್ ಗನಿ ಸಾಬ್, ಸೂಗೂರೇಶ ಹಿರೇಮಠ ಭಾಗವಹಿಸಿ, ಗಾಂಧೀಜಿ ಕುರಿತ ಕಾವ್ಯ ವಾಚನ ಮಾಡಿದರು.
ನಿವೇದಿತಾ ಇತ್ಲಿ, ನಿರ್ಮಲಾ ಲದ್ದಿ, ರೋಹಿಣಿ ವರದೇಂದ್ರ, ಮಂಜುನಾಥ ಹಾಲಾಪೂರ, ಪಲ್ಲವಿ, ಉದಯ ಕೋಡಗುಂಟಿ, ಜೀವನ್ ಅಂಗಡಿ, ವಿಧಾತ್ರಿ, ಹರಿಪ್ರಿಯಾ, ಸುಧಾ ನಾಯ್ಕ ಅವರ ರಾಮ್ ಧುನ್, ಕಲಾವಿದ ವೆಂಕಟೇಶ ರಾಥೋಡ ಅವರ ಗಾಂಧಿ ಕುರಿತ ರೇಖಾಚಿತ್ರಗಳು ವಿಶೇಷ ಎನಿಸಿದವು.
ದೇಶದಲ್ಲಿ ಗಾಂಧೀ ಹೀಗೆ ಇನ್ನೂ ಜೀವಂತವಾಗಿದ್ದರೂ, ಇಷ್ಟೆಲ್ಲಗಳ ನಡುವೆಯೂ ಆಗಾಗ ಕವಿ ಗೋಪಾಲಕೃಷ್ಣ ಅಡಿಗರ ಕವಿತೆ ಮೂಲಕ ನೆನಪಾಗುತ್ತಾರೆ:
`ನಿನ್ನ ಕಂಡು ಬೆರಗಾದರು, ನಿನಗೆ ನಮೋ ಎಂದರು
ನಿನ್ನ ಹೊಗಳಿ ಹಾಡಿದರು, ಹಣ್ಣು ಕಾಯಿ ತಂದರು
ನಿನ್ನ ಪಥವ ಮರೆತು ನಿನ್ನ ಪದಕೆ ಬಿದ್ದ ಅಂಧರು
ನಿನಗೆ ಗುಡಿಯ ಕಟ್ಟಿ ತಾವು ಬಚ್ಚಲಲ್ಲಿ ನಿಂದರು
ಅಮೃತಬAದು ಮನೆಯ ಮುಂದೆ ಹರಿಯುತ್ತಿದ್ದರು
ವಿಷವನರಸಿ ಹೊರಟರಯ್ಯೋ ಈ ಮತಾಂಧರು’
ಗಾಂಧಿಯನ್ನು ದೇವರು ಮಾಡಿ ಪೂಜಿಸಬೇಕಿಲ್ಲ, ಬದಲಿಗೆ ಗಾಂಧಿಯ ಚಿಂತನೆಗಳನ್ನು ಗೌರವಿಸಿ, ಪೂಜಿಸಬೇಕಿದೆ. ಸಮಾಜದ ಸ್ವಾಸ್ಥö್ಯಕ್ಕಾಗಿ ಇದು ತೀರ ಅಗತ್ಯವಾಗಿದೆ.
- ಮಂಡಲಗಿರಿ ಪ್ರಸನ್ನ , ಸಂಪಾದಕರು, ವಿಜಯ ಟೈಮ್ಸ್ ನ್ಯೂಸ್ ಬೆಂಗಳೂರ.
ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬವೇ ದಸರಾ ಹಬ್ಬ : ಸಿದ್ದಲಿಂಗ ಶ್ರೀ
ಸಮಾಜದಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬವೇ ದಸರಾ ಹಬ್ಬವೆಂದು ಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಅವರು ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಶ್ರೀಗಳ ಮೌನ ಅನುಸ್ಟಾನ ಮಂಗಲ ಹಾಗೂ ದಸರಾ ಹಬ್ಬದ ವಿಶೇಷ ಆಶೀರ್ವಚನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದೂ ಹಬ್ಬಗಳೂ ತನ್ನದೇ ಆದ ಇತಿಹಾಸ, ಹಿನ್ನಲೆಯನ್ನು ಒಳಗೊಂಡಿರುವಂತೆ ವಿಜಯದಶಮಿ ಅಥವಾ ದಸರಾ ಹಬ್ಬವು ಐತಿಹಾಸಿಕ, ಧಾರ್ಮಿಕ ಹಿನ್ನಲೆಯನ್ನು ಹೊಂದಿದೆ. ವಿಶೇಷವಾಗಿ ದಸರಾ ಹಬ್ಬವು ಬನ್ನಿ ಬಂಗಾರವನ್ನು ಕೊಡುವುದರ ಮೂಲಕ ದೂರವಿದ್ದವರನ್ನು ಹತ್ತಿರಕ್ಕೆ ಸೇರಿಸುವ, ದ್ವೇಷಿಸುವರನ್ನು ಪ್ರೀತಿಸುವ ಹಬ್ಬವಾಗಿದೆ. ಹಿರಿಯರು ಮಕ್ಕಳನ್ನು ಇಂತಹ ಹಬ್ಬಗಳಲ್ಲಿ ಗುರು ಹಿರಿಯರಿಗೆ ಗೌರವಿಸುವ, ಪ್ರೀತಿಸುವ ಸಂಸ್ಕಾರಗಳನ್ನು ಹೇಳಿಕೊಡಬೇಕು. ಭಾರತವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂಸ್ಕೃತಿಯನ್ನು ಹಿಂದಿದ್ದು. ನಾವು ಅದನ್ನು ಅರ್ಥ ಮಾಡೋಕೊಂಡು ನಮ್ಮ ಮಕ್ಕಳಿಗೂ ತಿಳಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಉತ್ತಮ ವಿಚಾರಗಳನ್ನು ಹೊಂದುವ ಮೂಲಕ ದುಷ್ಟ ವಿಚಾರಗಳನ್ನು ನಮ್ಮಿಂದ ದೂರ ಮಾಡಬೇಕು ಅದೇ ವಿಜಯದಶಮಿ ಹಬ್ಬದ ಮೂಲ ಆಶಯವೆಂದು ಹೇಳಿದರು. ಗೋಳಾ (ಕೆ ) ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ಹಮ್ಮಿಕೊಂಡಿದ್ದ ಅನುಷ್ಠಾನದಲ್ಲಿ ಸಕಲ ಜೀವರಾಶಿಗಳಿಗೆ ಒಳಿತಾಗಲಿ ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು. ನಂತರ ಸೇರಿದ ಸಾವಿರಾರು ಭಕ್ತರು ಕತೃ ಗದ್ದುಗೆಗೆ ಹಾಗೂ ಪೂಜ್ಯರಿಗೆ ಬನ್ನಿ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಮುಖಂಡರಾದ ಡಾ. ಗುಂಡಣ್ಣ ಬಾಳಿ, ಚೆನ್ನಣ್ಣ ಬಾಳಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ್, ಸಾಹೇಬಗೌಡ ತುಮಕೂರ, ದೇವಿಂದ್ರ ತಳವಾರ, ಅಣ್ಣಾರಾವ ಬಾಳಿ, ಈಶ್ವರ ಬಾಳಿ, ಬಸವರಾಜ ಮಾಕಾ, ಪಾಂಡುರಂಗ ಇಗ್ವೆ,ಸೂರ್ಯಕಾoತ ಕಾಳೆಕಾರ್, ಚಂದ್ರಶೇಖರ ಹಾವೇರಿ, ಸಿದ್ರಾಮಪ್ಪ ದೇಸಾಯಿ, ಚೆನ್ನಪ್ಪ ಆಳ್ಳೊಳ್ಳಿ, ಶರಣು ಜ್ಯೋತಿ, ಭೀಮರಾವ್ ಪಾಟೀಲ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.
ನವರಾತ್ರಿ ಉತ್ಸವ ನಿಮಿತ್ತ ಲೇಖನ
ಶಹಾಬಾದ ಜಾಗೃತ ಜಗದಂಬಾ ಉತ್ಸವ ೪೮ನೇ ವರ್ಷ
ಚಿತ್ರ: ೧ ಎಸ್‌ಬಿಡಿ ೧ ಶ್ರೀ ಜಗದಂಬಾ ದೇವಿ ದೇವಸ್ಥಾನದಲ್ಲಿ ದೇವಿಯ ಮೂರ್ತಿ.
ನವರಾತ್ರಿಯ ಪ್ರಾರಂಭ ದಿನ ಅಕ್ಟೋಬರ ೩ ರಂದು ಬೆಳಿಗ್ಗೆ ದೇವಿಯ ವಿಶೇಷ ಪೂಜೆಯಿಂದ ೯ ದಿನಗಳು ಕಾಲ ವಿಶೇಷ ಅಲಂಕಾರ ವಿವಿಧ ಪೂಜಾ ಕಾರ್ಯಕ್ರಮದ ಜತೆಗೆ ಪ್ರತಿನಿತ್ಯ ಸಂಜೆ ವಿಶೇಷ ಆರತಿ, ದೇವಿಯ ಅಲಂಕಾರ, ನಡೆಯಲಿವೆ. ನವರಾತ್ರಿ ಉತ್ಸವಕ್ಕೆ ಸಜ್ಜುಗೊಂಡಿದೆ. ಜಗದಂಬಾ ದೇವಿ ದೇವಾಲಯದಲ್ಲಿ ವಿಶೇಷ ಪೂಜೆ, ಅಲಂಕಾರದೊAದಿಗೆ ಸಡಗರ, ಸಂಭ್ರಮದಿAದ ಆರಂಭವಾಗಿದ್ದು, ದೇವಿಯ ಉತ್ಸವ ನಿಮಿತ್ತ ಮನೆ ಮನೆಯಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ದೇವಿಯ ದೀಪವನ್ನು ಹಾಕಿ, ದೇವಿಯ ಘಟ ಸ್ಥಾಪನೆ ಮಾಡಿದ ಮಹಿಳೆಯರು, ಶ್ರದ್ಧಾ, ಭಕ್ತಿಯಿಂದ ದೇವಿಯ ಆರಾಧನೆಗೆ ಉಲ್ಲಾಸದಿಂದ ಪಾಲ್ಗೊಂಡಿದ ದೃಶ್ಯ ಕಂಡು ಬಂತು. ನವರಾತ್ರಿ ಉತ್ಸವಕ್ಕೆ ತನ್ನದೇ ಆದ ವಿಶಿಷ್ಟ ಪರಂಪರೆಯಿದೆ, ಹಾಗಾಗೀ ನಗರದ ಜಗದಂಬಾ ದೇವಿ ದೇವಸ್ಥಾನದಲ್ಲಿ ೯ ದಿನ ಆಚರಿಸುವ ನವರಾತ್ರಿಯಲ್ಲಿ ನವದುರ್ಗೆಯರ ಆರಾಧನೆಯೇ ಪ್ರಧಾನವಾಗಿದೆ. ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂಭಮದ ನವರಾತ್ರಿ ಅಂದ್ರೆ ನವದುರ್ಗೆಯರ ಹಬ್ಬ ೯ ದಿನಗಳ ಕಾಲ ನಗರದ ಶ್ರೀ ಜಗದಂಬಾ ದೇವಿಯ ನವರಾತ್ರಿಯ ಉತ್ಸವ ಸಂಭ್ರಮದಿAದ ಚಾಲನೆಯಾಗಿದ್ದು, ಶ್ರೀ ಜಗದಂಬಾ ಮಂದಿರ ಕಮಿಟಿಯಿಂದ ಹಲವು ದಾರ್ಮಿಕ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿದೆ. ಭಕ್ತರಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ. ದೇವಿಯ ಆರತಿಯೊಂದಿಗೆ ಚಾಲನೆಯಾಗಿದ್ದ ೯ ದಿನ ನಿರಂತರ ಕಾರ್ಯಕ್ರಮಗಳನ್ನು ಶ್ರದ್ಧಾ, ಭಕ್ತಿ ಭಾವದಿಂದ ನಡೆಯುತ್ತಿದ್ದು ಸಾವಿರಾರು ಭಕ್ತರು ಸಾಯಂಕಾರ ದೇವಿಯ ಮಹಾಮಂಗಳಾರುತಿಗೆ ಪ್ರತಿದಿನ ದರ್ಶನ ಪಡೆಯಲು ಬರುತ್ತಿದ್ದಾರೆ,
ಗುರುವಾರ ಅಕ್ಟೋಬರ ೩ ರಂದು ಮಧ್ಯಾಹ್ನ ಘಟ ಸ್ಥಾಪನೆ ಮಾಡಲಾಯಿತು. ನವರಾತ್ರಿ ವಿಶೇಷ ಪೂಜೆಗೆ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ದೀಲಿಪ ಯಲಶೆಟ್ಟಿ ಅವರಿಗೆ ಚಾಲನೆ ನೀಡಿಲಾಯಿತು. ರಾತ್ರಿ ವಿಠ್ಠಲ ಮಂದಿರ ಮತ್ತು ಹನುಮಾನ ಮಂದಿರ ಭಾರತ ಚೌಕ ಭಜನಾ ಮಂಡಳಿಯವರಿAದ ಭಜನೆ ನಡೆಯಿತು. ಶುಕ್ರವಾರ ಅ.೪ ರಂದು ಮಧ್ಯಾಹ್ನ ೩ ರಿಂದ ೫ ಗಂಟೆವರೆಗೆ ಮೆಹಂದಿ ಸ್ಪರ್ಧೆ ನಡೆಯಲಿದ್ದು, ಸಂಜೆ ನಡೆಯುವ ಮಹಾಮಂಗಳಆರತಿ ಕಾರ್ಯಕ್ರವನ್ನು ನಗರಸಭೆ ನೂತನ ಅಧ್ಯಕ್ಷೆ ಚಂಪಾಬಾಯಿ ರಾಜು ಮಿಸ್ತಿçà ಅವರು ಚಾಲನೆ ನೀಡಿದರು. ರಾತ್ರಿ ಸಿದ್ಧಾರೂಡ ಭಜನ ಮಂಡಳಿಯವರಿAದ ಭಜನಾ ಕಾರ್ಯಕ್ರಮ ನಡೆಯಲಿದೆ. ಶನಿವಾರ ಅ.೫ ರಂದು ಮಧ್ಯಾಹ್ನ ೩ಕ್ಕೆ ರಂಗೋಲಿ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ಮಾಡಿದರು. ಸಂಜೆ ೭ ಗಂಟೆಗೆ ನಡೆಯುವ ಆರತಿ ಕಾರ್ಯಕ್ರವನ್ನು ನಗರ ಪೊಲೀಸ್ ಠಾಣೆಯ ಪಿಐ ನಟರಾಜ ಲಾಡೆ ಅವರು ಚಾಲನೆ ನೀಡಿದರು. ರಾತ್ರಿ ಭಜನಾ ಕಾರ್ಯಕ್ರಮ. ಭಾನುವಾರ ಅ.೬ ರಂದು ಮಧ್ಯಾಹ್ನ ೩ ಕ್ಕೆ ಚಿತ್ರಕಲೆ ಸ್ಪರ್ಧೆ ನಡೆಸಿ ಬಹುಮಾನ ವಿತರಣೆ ಮಾಡಲಾಯಿತು. ಸಂಜೆ ೭ ಕ್ಕೆ ನಡೆಯುವ ಆರತಿ ಕಾರ್ಯಕ್ರವನ್ನು ಡಿವಾಯ್ ಎಸ್ಪಿ ಶಂಕರಗೌಡ ಪಾಟೀಲ್ ಅವರು ಚಾಲನೆ ನೀಡಿದರು. ರಾತ್ರಿ ಭಜನಾ ಕಾರ್ಯಕ್ರಮ ನಡೆಯಿತು. ಸೋಮವಾರ ಅ.೭ ರಂದು ಮಧ್ಯಾಹ್ನ ಕುಂಕಮಾರ್ಚನೆ, ಸಹಸ್ರ ನಾಮಾವಳಿ ಜ್ಞಾನೇಶ್ವರ ನನ್ನಾವರೆ ಅವರಿಂದ ಸಂಜೆ ನಡೆಯುವ ಆರತಿ ಕಾರ್ಯಕ್ರವನ್ನು ಉದ್ಯಮಿ ಆದಿತ್ಯ ವರ್ಮಾ ಅವರು ಚಾಲನೆ ನೀಡಿದರು. ನಂತರ ಭಜನಾ ಕಾರ್ಯಕ್ರಮ ನಡೆಯಿತು. ಮಂಗಳವಾರ ೮ ರಂದು ಮಧ್ಯಾಹ್ನ ಮಾರವಾಡಿ ಮಹಿಳಾ ಮಂಡಲ ಇವರಿಂದ ರಜ್ಜಕ ಕಾರ್ಯಕ್ರಮ, ಸಂಜೆ ೭ಕ್ಕೆ ನಡೆಯುವ ಮಹಾಮಂಗಳಾರತಿಯನ್ನು ತಹಶೀಲ್ದಾರ ಜಗದೀಶ ಚೌರ ಅವರು ಚಾಲನೆ ನೀಡಿದರು. ರಾತ್ರಿ ಬಸವ ಸಮಿತಿ ಭಜನಾ ಮಂಡಳ ಅವರಿಂದ ಕಾರ್ಯಕ್ರಮ ನಡೆಯಿತು. ಬುಧವಾರ ಅ.೯ ರಂದು ಮಧ್ಯಾನ ವಿಠ್ಠಲ್ ಮಂದಿರ ಮಹಿಳಾ ಭಜನಾ ಮಂಡಳಿಯವರಿAದ ಭಜನೆ ನಡೆಯಲಿದ್ದು, ಸಂಜೆ ೭ಕ್ಕೆ ನಡೆಯುವ ಮಹಾಮಂಗಳಾರತಿಯನ್ನು ಜಯಶ್ರೀ ಬಸವರಾಜ ಮತಿಮಡು ಅವರು ಚಾಲನೆ ನೀಡಲಿದ್ದಾರೆ. ಗುರುವಾರ ಅ.೧೦ ರಂದು ಬೆಳಗ್ಗೆ ಹೋಮಹವನ ವಾಸುದೇವಾಚಾರ್ಯ ಜೋಷಿ ಅವರಿಂದ ಹಸ್ತದಿಂದ. ನಂತರ ಶ್ರೀದೇವಿ ಸ್ತುತಿ ಹೋಮ ಚಂದ್ರಕಾAತ ನಾಗುರಾವಸಾ ಮೆಂಗಜಿ ದಂಪತಿಯವರ ವತಿಯಿಂದ ನಡೆಯಲಿದೆ. ಮಧ್ಯಾನ್ ಭಜನೆ ಕಾರ್ಯಕ್ರಮ ನಡೆಯಲಿದೆ. ಸಂಜೆ ದೀಪೋತ್ಸವ ಕಾರ್ಯಕ್ರಮ ನಡೆಯಲಿದೆ. ಸಂಜೆ ೭ಕ್ಕೆ ನಡೆಯುವ ಮಹಾಮಂಗಳಾರತಿಯನ್ನು ಮಹೇಶ ಸಚ್ಚದೇವ ಅವರಿಂದ ಚಾಲನೆ ನೀಡಲಾಗುತ್ತದೆ. ರಾತ್ರಿ ೧೦ ಗಂಟೆಗೆ ಹನುಮಾನ ಮಂದಿರ ಭಾರತ ಚೌಕ ಹಾಗೂ ವಿಠ್ಠಲ ಮಂದಿರ ಭಜನ ಮಂಡಳಿ ಇವರಿಂದ ನಡೆಯಲಿದೆ. ಶುಕ್ರವಾರ ಅ.೧೧ ರಂದು ಮಹಾನವಮಿ (ಖಂಡಿಪೂಜೆ) ಸಾಯಂಕಾಲ ೭ ಗಂಟೆಗೆ ಮಹಾಮಂಗಳಾರತಿ ಉದ್ಯಮಿ ವಿಜಯಕುಮಾರ ಮುಟ್ಟತ್ತಿ ಅವರಿಂದ. ಶನಿವಾರ ಅ.೧೨ ರಂದು ವಿಜಯದಶಮಿ ಸಂಜೆ ಮಹಾಮಂಗಳಾರತಿ ವಿಶ್ವ ಹಿಂದೂ ಪರಿಷದ ಅಧ್ಯಕ್ಷರಾದ ರಾಮು ಕುಸಾಳೆ ಅವರಿಂದ ಚಾಲನೆ. ರಾತ್ರಿ ೧೨ ಗಂಟೆಗೆ ಜೋಗುಳ ಪದಗಳೊಂದಿಗೆ ಶಯನೋತ್ಸವ ಪೂಜೆಯನ್ನು ಶಿಕ್ಷಣ ಪ್ರೇಮಿ ಭೀಮಾಶಂಕರ ಮುತ್ತಟ್ಟಿ ಅವರಿಂದ ನೆರವೇರಿಸಲಾಗುತ್ತದೆ. ಅ.೧೭ ರಂದು ಹುಣ್ಣಿಮೆ ದೇವಿಗೆ ಪ್ರಾರ್ಥನೆಯೊಂದಿಗೆ ನಿದ್ದೆಯಿಂದ ಜಾಗೃತಗೊಳಿಸಲಾಗುವುದು. ನಂತರ ಶ್ರೀದೇವಿಯ ನಿತ್ಯಾಲಂಕಾರ ಹಾಗೂ ಪೂಜೆ, ಆರತಿ, ಸಂಜೆ ದಾನಿಗಳಿಗೆ ಹಾಗೂ ಭಕ್ತರಿಗೆ ಸನ್ಮಾನ ಕಾರ್ಯಕ್ರಮ. ನಂತರ ಆರತಿ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಅ.೧೮ ರಂದು ದೇವಿಯ ಮಹಾಮಂಗಳಾರತಿ ನಂತರ ಮಧ್ಯಾಹ್ನ ಮಹಾಪ್ರಸಾದ ಕಾರ್ಯಕ್ರಮ ನಡೆಯಲಿದೆ. ಮಹಾಪ್ರಸಾದ ವಿವಿಧ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು ದೇವಸ್ಥಾನ ಕಚೇರಿಗೆ ಬಂದು ಹೆಸರು ನೊಂದಿಸಬೇಕೆAದು ಜಗದಂಬಾ ದೇವಿ ದೇವಸ್ಥಾನದ ಅಧ್ಯಕ್ಷರಾದ ದಿಲೀಪ ಯಲಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿತ್ರ: ೧ ಎಸ್‌ಬಿಡಿ ೨ ಶ್ರೀ ಜಗದಂಬಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ದೇವಿಯ ಉತ್ಸವ ಮೂರ್ತಿ ಸ್ಥಾಪಿಸಿರುವುದು.
ಶಹಾಬಾದ ಜಗದಂಬಾ ದೇವಿ ಉತ್ಸವ ಪ್ರಾರಂಭ
ಸAಭ್ರಮ ಸಡಗರದಿಂದ ನವರಾತ್ರಿಯ ಕಾರ್ಯಕ್ರಮಗಳು ಚಾಲನೆ
ವಿಜಯ ಟೈಮ್ಸ್ ನ್ಯೂಸ್
ಶಹಾಬಾದ ಆದಿಶಕ್ತಿ ಜಗನ್ಮಾತೆ ಜಗದಂಬಾ ಉತ್ಸವಕ್ಕೆ ೪೮ ವರ್ಷದ ಸಂಭ್ರಮ ಪ್ರಾರಂಭದಲ್ಲಿ ೧೯೬೪-೧೯೬೫ ರಲ್ಲಿ ದೇವಿಯ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಪ್ರಾರಂಭವಾದ ನವರಾತ್ರಿಯ ಉತ್ಸವಕ್ಕೆ ನಗರದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ೯ ದಿನ ನವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ.
ಮಹಾರಾಷ್ಟçದ ತುಳಜಾಪು ಮಾದರಿಯಲ್ಲಿ ನಡೆಯುವ ಇಲ್ಲಿನ ನವರಾತ್ರಿ ಉತ್ಸವಕ್ಕೆ ದೇಶದ ಮೂಲೆ ಮೂಲೆಯಿಂದ ಸಾವಿರಾರು ಜನ ಹರಿದು ಬರುವುದು ವಿಶೇಷ! ನಲವತ್ತು ಎಂಟು ವರ್ಷಗಳ ಹಿಂದೆ ಅಂದಿನ ಪುರಸಭೆ ಅಧ್ಯಕ್ಷರಾಗಿದ್ದ ಬಾಬುರಾವ ಮಹೇಂದ್ರಕರ್ ದಾನ ಮಾಡಿದ ಸ್ಥಳದಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಪುಟ್ಟ ಮಂದಿರ ನಿರ್ಮಾಣವಾಯಿತು. ದೇವಿಯ ಭಕ್ತರಾದ ಡಾ.ಅಂಬಾದಾಸ ಜಿಂಗಾಡೆ, ಕೊಂಡಿಭರಾವ ತಾಂದಳೆ, ನಾರಾಯಣ ತೇಲ್ಕರ್, ನರಸಪ್ಪ ಪುಸಲೆ, ಹೀರಾಲಾಲ ಹಿಬಾರೆ, ದಿಗಂಬರ ಕಠಾರೆ, ಹಣಮಂತರಾವ ಉತ್ತರಕರ್ ಅಂತಹ ಪ್ರಮುಖರ ವಯಕ್ತಿಕ ದಾನದಿಂದ ಒಂಬತ್ತು ದಿನಗಳ ಉತ್ಸವಕ್ಕೆ ನಾಂದಿಯಾಯಿತು. ಹಿಂದೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಉತ್ಸವಕ್ಕೆ ತುಳಜಾಪುರ ಮಂದಿರದಲ್ಲಿರುವ ದೇವಿಯನ್ನು ಹೋಲುವ ಆಕರ್ಷಕ ಮೂರ್ತಿಯನ್ನು ಸ್ಥಾಪಿಸಿಲಾಯಿತು. ನಂತರ ಭಕ್ತರೊಬ್ಬರು ನೀಡಿದ ಉತ್ಸವ ಮೂರ್ತಿ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವದಲ್ಲಿ ಸ್ಥಾಪನೆ ಮಾಡಲ್ಪಡುತ್ತದೆ. ಪ್ರತಿವರ್ಷದ ಉತ್ಸವದಲ್ಲಿ ಘಟಸ್ಥಾಪನೆ, ದೀಪಾಲಂಕಾರ, ದೇವಿಯ ಅಲಂಕಾರ ಸಾವಿರಾರು ಭÀಕ್ತಾದಿಗಳನ್ನು ಆಕರ್ಷಿಸುತ್ತದೆ. ಉತ್ಸವದ ನಂತರ ದೇವಿಯ ಶಯನ ಕೋಣೆಗೆ ವಿಜಯದಶಮಿಯ ದಿನದಂದು ಎಲ್ಲಿಲ್ಲದ ಮಹತ್ವ. ಅಂದು ಮಧ್ಯರಾತ್ರಿ ಕೋಣೆಯನ್ನು ಮುಚ್ಚಿ ಮತ್ತೆ ಹುಣ್ಣಿಮೆಯಂದು ಸಾರ್ವಜನಿಕರಿಗೆ ತೆರೆದು ವಿಶೇಷ ಪೂಜೆ ಮಾಡಲಾಗುತ್ತದೆ. ಪ್ರತಿವರ್ಷ ಆಷಾಢದಲ್ಲಿ ವಿಶೇಷ ಕಾರ್ಯಕ್ರಮ, ಯುಗಾದಿಯ ದೀಪೋತ್ಸವ ನೆಡೆಯುತ್ತವೆ. ಮಂದಿರ ವ್ಯಾಪ್ತಿಯ ಸಭಾಗೃಹ ಹಾಗೂ ಕಲ್ಯಾಣ ಮಂಟಪ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುತ್ತಿದೆ. ಸರ್ಕಾರದ ಯಾವುದೆ ಸಹಾಯವಿಲ್ಲದೆ ಕೇವಲ ಭಕ್ತಾದಿಗಳ ಆರ್ಥಿಕ ನೆರವಿನೊಂದಿಗೆ ಚಟುವಟಿಕೆಗಳು ನಡೆಯುತ್ತಿವೆ. .
ಪೋಟೋ; ೭ ಎಸ್‌ಬಿಡಿ ೧.
ಶಹಾಬಾದ ಪೊಲೀಸ್‌ರು ಅಂತರ ಜಿಲ್ಲಾ ಕುಖ್ಯಾತ ಕಳ್ಳರನ್ನು ಬಂಧಿಸಿ, ಬೈಕ್ ಸಹಿತ ಒಟ್ಟು ೧೪.೭೦ ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ ಶ್ರೀನಿವಾಸಲು, ಅಪರ ವರಿಷ್ಠಾಧಿಕಾರಿ ಶ್ರೀನಿಧಿ, ಡಿವೈಎಸ್‌ಪಿ ಶಂಕರಗೌಡ ಪಾಟೀಲ,ಚಂದ್ರಶೇಖರ ತಿಗಡಿ,ಕಾಳಗಿಯ ಜಗದೇವಪ್ಪಾ ಪಾಳಾ, ಪಿಐ ನಟರಾಜ ಲಾಡೆ, ಪಿಎಸ್‌ಐ ತಿರುಮಲೇಶ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.
.................
ಪೋಟೋ ರಫೀಕ ಇನಾಮದಾರ
ಪೋಟೋ; ಮ.ಮಾಜೀದ್ ಪೊಲೀಸ್ ಪಾಟೀಲ.
-------
ಅಂತರ ಜಿಲ್ಲಾ ಕುಖ್ಯಾತ ಕಳ್ಳರ ಬಂಧನ.
ಶಹಾಬಾದ
ಶಹಾಬಾದ,ಚಿತ್ತಾಪುರ, ವಾಡಿ, ಕಾಳಗಿ, ಮಾಡಬೂಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿದ್ದ ಅಂತರ ಜಿಲ್ಲಾ ಕುಖ್ಯಾತ ಇಬ್ಬರು ಕಳ್ಳರನ್ನು ಶಹಾಬಾದ್ ಪೊಲೀಸರು ಬಂಧಿಸಿದ್ದು, ಅವರಿಂದ ಬೈಕ್ ಸಹಿತಿ ೧೪.೭೦ ಲಕ್ಷ ರೂ. ಚಿನ್ನದಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ ಸೆ. ೨೯ ರಂದು ಮರತೂರ ಗ್ರಾಮದ ರಜಾಕ್ ತಂ.ಉಸ್ಮಾನ ಬಾಗೋಡಿ ಅವರ ಮನೆಯನ್ನು ಕಳ್ಳತನ ನಡೆಸಿ, ೫ ಗ್ರಾಂ.ಗಳ ಬಂಗಾರದ ಎರಡು ಉಂಗುರು, ೭ ಗ್ರಾಂ. ಮಂಗಳಸೂತ್ರ, ೭ ಗ್ರಾಂ. ಬಂಗಾರದ ಬೊರಮಳ, ೧೨ ಗ್ರಾಂ. ೨ ಎಣೆ ಗುಂಡಿನ ಸರ, ೨೫೦ ಗ್ರಾಂ.ಬೆಳ್ಳಿ ಕಾಲಿನ ಚೈನ್, ೩೦ ಗ್ರಾಂ. ಬೆಳ್ಳಿ ಕಾಲುಂಗುರ, ೫ ಗ್ರಾಂ.ನ ೬ ಬೆಳ್ಳಿ ಉಂಗುರುಗಳು, ೩.೯೫ ನಗದು ಕಳ್ಳತನ ನಡೆದ ಕುರಿತು ಶಹಾಬಾದ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರ ಶ್ರೀನಿವಾಸಲು, ಅಪರ ವರಿಷ್ಠಾಧಿಕಾರಿ ಶ್ರೀನಿಧಿ, ಡಿವೈಎಸ್‌ಪಿ ಶಂಕರಗೌಡ ಪಾಟೀಲ, ಮಾರ್ಗದರ್ಶನದಲ್ಲಿ ಚಿತ್ತಾಪುರ ಸಿಪಿಐ ಚಂದ್ರಶೇಖರ ತಿಗಡಿ,ಕಾಳಗಿಯ ಜಗದೇವಪ್ಪಾ ಪಾಳಾ, ಶಹಾಬಾದ್ ಪಿಐ ನಟರಾಜ ಲಾಡೆ, ಪಿಎಸ್‌ಐ ತಿರುಮಲೇಶ ವಾಡಿ, ಎಎಸ್‌ಐ ಗುಂಡಪ್ಪ, ಲಾಲ್ ಅಹ್ಮದ, ಮಲ್ಲಿಕಾರ್ಜುನ, ಉಪಳಪ್ಪ, ಸಿಬ್ಬಂದಿ ರಮಣಯ್ಯ, ರವಿ ಆರೀಫ್, ಶ್ರೀಕಾಂತ, ಲಕ್ಷö್ಮಣ, ಬಸಲಿಂಗಪ್ಪ, ದೊಡ್ಡಪ್ಪ, ಪಾಷಾ, ವೆಂಕಟೇಶ, ಭೀಮಶ, ಮಂಜುನಾಥ ಅವರನ್ನೊಳಗೊಂಡ ತಂಡ ರಚಿಸಿಕೊಂಡು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದರು.
ಸೋಮವಾರ ಶಹಾಬಾದನ ವಾಡಿ ಕ್ರಾಸ್ ಬಳಿ ಸಂಶಯಾಸ್ಪದವಾಗಿ ಮೋಟಾರ ಬೈಕ್ ಮೇಲೆ ಹೋಗುತ್ತಿದ್ದ ವಾಡಿಯ ಪಿಲ್ಕಂ ಏರಿಯಾ ನಿವಾಸಿ ರಫೀಕ ಅಬ್ದುಲ ಗನಿ, ಇನಾಮದಾರ ಗಂವಾರ, ಕಲಬುರಗಿ ಯತಿಮಖಾನ್ ಕಂಪೌAಡ ನಿವಾಸಿ ಮ. ಮಾಜೀದ ಖಾಜಾ ಮೈನೋದ್ದೀನ್ ಪೊಲೀಸ್ ಪಾಟೀಲ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆರೋಪಿ ರಫೀಕ್ ತಾನು ಒಟ್ಟು ೩೦ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದು ಒಪ್ಪಿಕೊಂಡಿದ್ದಾನೆ.
೧೧ ಕಳ್ಳತನದಲ್ಲಿ ಕಳ್ಳತನ ನಡೆಸಿದ್ದ ೧೭೦ ಗ್ರಾಂ ಬಂಗಾರ, ೨೮೦ ಬೆಳ್ಳಿ ಸಾಮಗ್ರಿ, ೧.೦೫ ಲಕ್ಷ ರೂ. ನಗದು, ೪೫ ಸಾವಿರ ರೂ. ಮೌಲ್ಯದ ಬೈಕ್ ಸೇರಿದಂತೆ ಒಟ್ಟು ೧೪.೭೦ ಲಕ್ಷ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಅರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
=======
ಶಹಾಬಾದ ನಗರದಲ್ಲಿ ದಸರಾ ಕ್ರೀಡಕೂಟ
ಶಹಾಬಾದ
ತಾಲೂಕು, ನಗರದ ಕ್ರೀಡಾ ಪಟುಗಳು ತಾಲೂಕ, ಜಿಲ್ಲಾ ಮಟ್ಟದಲ್ಲಿ ಯಶಶ್ವಿಯಾಗಿ ರಾಜ್ಯ ಮಟ್ಟದಲ್ಲಿ ಗೆಲವು ಸಾಧಿಸಬೇಕೆಂದು ನಗರ ಸಭೆ ನೂತನ ಅಧ್ಯಕ್ಷ ಚಂಪಾಬಾಯಿ ಮೇಸ್ತಿç ಕ್ರೀಡಾ ಪಟುಗಳಿಗೆ ಶುಭ ಹಾರೈಸಿದರು. ಅವರು ನಗರದ ಬಾಲವಿದ್ಯಾ ಮಂದಿರ ಕ್ರೀಡಾಂಗಣದಲ್ಲಿ ತಾಲೂಕ ಮಟ್ಟದ ದಸರಾ ಕ್ರೀಡಾ ಕೂಟವನ್ನು ಧ್ಯಾನ್‌ಚಂದ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಉದ್ಘಾಟಿಸಿ, ಶುಭ ಹಾರೈಸಿದರು. ತಾಲೂಕ ದೈಹಿಕ ಶಿಕ್ಷಕ ಸಂಘದ ಪರಿವೀಕ್ಷಕ ಶಿವಶರಣಪ್ಪ ಮಂಠಾಳೆ ದ್ವಜಾರೋಹಣ ನೇರವೇರಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ ಕ್ರೀಡಾಜ್ಯೋತಿ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ರಾಜ್ಯ ದೈಹಿಕ ಶಿಕ್ಷಕರ ಸಂಘದ ಉಪಾಧ್ಯಕ್ಷ ಚನ್ನಬಸಪ್ಪ ಕೊಲ್ಲೂರ, ಮರೆಪ್ಪ ಬೊಮ್ಮನಳ್ಳಿ, ತಾಲೂಕ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಬನ್ನಪ್ಪ ಸೈದಾಪುರ, ವಿಜಯಲಕ್ಷಿö್ಮÃರಾಣಿ ಹಿರೇಮಠ, ಗಣೇಶ ಜಾಯಿ, ಶಿವಗಂಗಾ, ರಹೇನಾ ಪರ್ವೀನ್, ಸುರೇಶ ಕಾಂಬಳೆ, ರತನರಾಜ ಕೋಬಾಳಕರ, ಮಹೇಶ ಸೇರಿದಂತೆ ಕ್ರೀಡಾ ಪಟುಗಳ ಭಾಗವಹಿಸಿದ್ದರು.
Copyright © 2025 Vijay Times News. All Rights Reserved.
Website by Samanth