ಶಹಾಬಾದ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ
ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಸರ್ವಾಧ್ಯಕ್ಷರಾಗಿ ಆಯ್ಕೆ.
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ತಾಲೂಕ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಿಸೆಂಬರ ತಿಂಗಳ ಮೊದಲ ವಾರದಲ್ಲಿ ಆಯೋಜಿಸಲು ಉದ್ದೇಶಿಸಿರುವ ಶಹಾಬಾದ ತಾಲೂಕ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಮಕ್ಕಳ ಸಾಹಿತಿ ಎಚ್.ಬಿ.ತೀರ್ಥೆ ಅವರನ್ನು ಸಮ್ಮೇಳನ ಸಮಿತಿ ಆಯ್ಕೆ ಸರ್ವಸಮ್ಮತೆ ಒಪ್ಪಿಗೆ ಸೂಚಿಸಲಾಗಿದೆ ಎಂದು ಆಯ್ಕೆ ಸಮಿತಿಯ ಮರೆಪ್ಪ ಹಳ್ಳಿ ತಿಳಿಸಿದ್ದಾರೆ.
ಅವರು ಮಂಗಳವಾರ ಸಂಜೆ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ, ಕಳೆದ ಶನಿವಾರ ಕಸಾಪದ ಸರ್ವ ಸದಸ್ಯರ, ಪ್ರಮುಖರ, ಕನ್ನಡ ಪರ ಚಿಂತಕರ, ವಿವಿಧ ಸಂಘ ಸಂಸ್ಥೆಗಳ ಸಾಮಾನ್ಯ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಸುಮಾರು ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಐದು ಹೆಸರುಗಳು ಪ್ರಸ್ತಾಪಿಸಲ್ಪಟ್ಟಿತ್ತು. ಸಭೆಯಲ್ಲಿ ಸಮ್ಮೇಳನದ ಸ್ವಾಗತಿ ಸಮಿತಿ, ಅಧ್ಯಕ್ಷರ ಆಯ್ಕೆ ಸಮಿತಿ ತಿರ್ಮಾನಕ್ಕೆ ಎಲ್ಲರೂ ಬದ್ದರಾಗಲು ಒಪ್ಪಿಲಾಯಿತು.
ಸಭೆಯ ನಿರ್ಣಯದಂತೆ ಎರಡು ದಿನ ಆಯ್ಕೆ ಸಮಿತಿ ಕೂಲಂಕುಷವಾಗಿ ಚರ್ಚೆ ನಡೆಸಿ, ಶಹಾಬಾದ್ ಅಲ್ಟಾçಮ್ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಲೇ, ಮಕ್ಕಳ ಸಾಹಿತಿಗಳಾಗಿ, ಶಿಕ್ಷಣ ಪ್ರೇಮಿಗಳಾಗಿ, ಯೋಗ ಗುರುವಾಗಿ, ಮಕ್ಕಳಿಗೆ ಮಾರ್ಗದರ್ಶಕರಾಗಿ ದಶಕಗಳಿಂದ ಸೇವೆ ಸಲ್ಲಿಸಿದ್ದು, ಅವರನ್ನು ಸರ್ವಾಧ್ಯಕ್ಷರನ್ನಾಗಿ ಸರ್ವಸಮ್ಮತ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸದರು. ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಂಕ್ ಖರ್ಗೆ ಅವರನ್ನು ಸಮ್ಮೇಳನದ ಸ್ವಾಗತ ಸಮಿತಿ ಗೌರವ ಅಧ್ಯಕ್ಷರನ್ನಾಗಿ, ಶಾಸಕರಾದ ಬಸವರಾಜ ಮತ್ತಿಮಡು ಅವರನ್ನು ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಸರ್ವಸಮ್ಮತವಾಗಿ ಒಪ್ಪಲಾಯಿತು. ಸಮ್ಮೇಳನದ ಯಶಶ್ವಿಗೆ ವಿವಿಧ ಸಮಿತಿಗಳನ್ನು ರಚಿಸಲು ತಿರ್ಮಾನಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಸಾಪ ತಾಲೂಕ ಅಧ್ಯಕ್ಷರಾಗ ಶರಣಬಸಪ್ಪ ಕೋಬಾಳ, ಅಣವೀರ ಇಂಗಿನಶೆಟ್ಟಿ, ಶರಣಗೌಡ ಪೊಲೀಸ್ ಪಾಟೀಲ, ಮೃತ್ಯುಂಜಯ ಸ್ವಾಮಿ ಹಿರೇಮಠ, ಅಜೀಮ್ ಸಠ, ಕನಕಪ್ಪ ದಂಡಗುಲಕರ್, ಕೆ.ರಮೇಶ ಭಟ್ಟ, ಶರಣು ವಸ್ತçದ,ಬಾಬುರಾವ ಪಂಚಾಳ, ಡಾ.ಅಹ್ಮದ ಪಟೇಲ, ಗುಂಡಮ್ಮಾ ಮಡಿವಾಳ, ಗಿರಿಮಲ್ಲಪ್ಪ ವಳಸಂಗ, ಶರಣಗೌಡ ಪಾಟೀಲ, ನಾಗಣ್ಣ ರಾಂಪುರೆ ಇದ್ದರು.
Copyright © 2025 Vijay Times News. All Rights Reserved.
Website by Samanth