Breaking News


Latest News

View All

ವೀರಶೈವ ವಿದ್ಯಾರ್ಥಿ ಘಟಕಕ್ಕೆ ಅರುಣ ಸಾತಿಹಾಳ ನೇಮಕ


ವೀರಶೈವ ವಿದ್ಯಾರ್ಥಿ ಘಟಕಕ್ಕೆ ಅರುಣ ಸಾತಿಹಾಳ ನೇಮಕ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಶಹಾಬಾದ ನಗರದ ಯುವಕ ಅರುಣ ಬಸವರಾಜ ಸಾತಿಹಾಳ ಅವರು ಅಖಂಡ ಕರ್ನಾಟಕ ವೀರಶೈ ಲಿಂಗಾಯತ ಸಮಾಜದ ವಿದ್ಯಾರ್ಥಿ ಘಟಕದ ತಾಲೂಕ ಅಧ್ಯಕ್ಷರಾಗಿ ನೇಮಮಾಡಲಾಗಿದೆ ಎಂದು ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಚೇತನ ಪ್ರಭುಲಿಂಗಪ್ಪ ಅವರು ತಿಳಿಸಿದ್ದಾರೆ. ವೀರಶೈವ ಲಿಂಗಾಯತ ಸಮಾಜದ ಸಂಘಟನೆಯ ತತ್ವಸಿದ್ಧಾಂತ, ಶಿಸ್ತು ಮತ್ತು ನಾವೆಲ್ಲರೂ ಒಂದೇ ಎಂದು ಕಾರ್ಯನಿರ್ವಹಿಸುವುದು. ವಿದ್ಯಾರ್ಥಿ ಘಟಕದ ಜವಾಬ್ದಾರಿಯನ್ನು ವಹಿಸಿಕೊಂಡು ಸಂಘಟನೆಯ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜವನ್ನು ಒಗ್ಗೂಡಿಸಿ, ಸಂಘಟಿಸಿ, ಸದಸ್ಯರನ್ನಾಗಿ ಮಾಡಿ ಸಂಘಟನೆಯ ಕಲ್ಯಾಣಕ್ಕಾಗಿ ಶ್ರಮಿಸಬೇಕೆಂದು ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷರಾದ ಚೇತನ ಪ್ರಭುಲಿಂಗಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಎಸ್‌ಬಿಐ ಬ್ಯಾಂಕ ವತಿಯಿಂದ ಪತ್ರಕರ್ತರಿಗೆ ಸನ್ಮಾನ

ಎಸ್‌ಬಿಐ ಬ್ಯಾಂಕ ವತಿಯಿಂದ ಪತ್ರಕರ್ತರಿಗೆ ಸನ್ಮಾನ
ವಿಜಯ ಟೈಮ್ಸ್ ನ್ಯೂಸ್ 

ಶಹಾಬಾದ ತಾಲೂಕಿನ ಭಂಕೂರ ಎಸ್‌ಬಿಐ ಬ್ಯಾಂಕ ವತಿಯಿಂದ ತಾಲೂಕಿನ ಪತ್ರಕರ್ತರಾದ ವಾಸುದೇವ ಚವ್ಹಾಣ, ಕೆ.ರಮೇಶ ಭಟ್ಟ, ನಿಂಗಣ್ಣ ಜಂಬಗಿ, ಲೋಹಿತ ಕಟ್ಟಿ, ಶಿವುಕುಮಾರ ಕುಸಾಳೆ, ಖಾಜಾ ಪಟೇಲ ಅವರನ್ನು ಸನ್ಮಾನಿಸಲಾಯಿತು. ಬ್ಯಾಂಕ ವ್ಯವಸ್ಥಾಪಕ ದೀಪಕ ಕುಮಾರ, ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ ಸುರೇಶ ಮೆಂಗನ್, ಭರತ ಧನ್ನಾ, ಶಂಕರ ಜಾನಾ, ಶಕೀಲ ಪಟೇಲ, ಜಾಕೀರ ಸೇಠ, ಶಿವಯೋಗಿ ಬಣಕಾರ ಇತರರು ಇದ್ದರು. 


ಎಸ್‌ಬಿಐನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ.

ಶಹಾಬಾದ ತಾಲೂಕಿನ ಭಂಕೂರನ ಎಸ್‌ಬಿಐ ಬ್ಯಾಂಕ್‌ನಿAದ ಡಾ.ಅಂಬೇಡ್ಕರ ಜಯಂತೋತ್ಸವ ನಿಮಿತ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ವ್ಯವಸ್ಥಾಪಕ ದೀಪಕ ಕುಮಾರ, ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ, ಮುಖಂಡರಾದ ಸುರೇಶ ಮೆಂಗನ್, ಭರತ ಧನ್ನಾ, ಮೌಲಾನಾ ಇತರರು ಇದ್ದರು. 

ಡಾ.ಅಂಬೇಡ್ಕರ ಜಯಂತಿ ಪ್ರಯುಕ್ತ
ಎಸ್‌ಬಿಐನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ತಾಲೂಕಿನ ಭಂಕೂರನ ಎಸ್‌ಬಿಐ ಬ್ಯಾಂಕ್ ವತಿಯಿಂದ ಡಾ.ಅಂಬೇಡ್ಕರ ಅವರು ೧೩೪ನೇ ಜಯಂತೋತ್ಸವ ನಿಮಿತ್ತ ಬ್ಯಾಂಕ್ ವ್ಯಾಪ್ತಿಗೆ ಬರುವ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಹಾಗೂ ಪತ್ರಕರ್ತರಿಗೆ, ಸತ್ಕರಿಸುವ ಮೂಲಕ ಆಚರಿಸಲಾಯಿತು. 
ಬ್ಯಾಂಕ್ ವ್ಯವಸ್ಥಾಪಕ ದಿಲೀಪ ಕುಮಾರ ಅವರು ಡಾ.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಂಬೇಡ್ಕರ ೧೩೪ನೇ ಜಯಂತೋತ್ಸವ ಸಮಿತಿ ಗೌರವ ಅಧ್ಯಕ್ಷ ಸುರೇಶ ಮೆಂಗನ್ ಮಾತನಾಡಿ ಬ್ಯಾಂಕ್‌ನಲ್ಲಿ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ, ಅವರನ್ನು ಉತ್ತೇಜಿಸುವ ಕಾರ್ಯ ಶ್ಲಾಘನೀಯವಾಗಿದೆ. ಅಂಬೇಡ್ಕರ ಬದುಕು, ಸಾಧನೆ ಮಕ್ಕಳಿಗೆ ಹೊಸ ಸ್ಫೂರ್ತಿ ತರಲಿದೆ ಎಂದು ಹೇಳಿದರು. ಪತ್ರಕರ್ತ ಲೋಹಿತ ಕಟ್ಟಿ, ಮೌಲಾನಾ  ಮಾತನಾಡಿದರು.  
ಕಳೆದ ಬಾರಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಕರಿಷ್ಮಾ, ಪೂಜಾ, ಮಲ್ಲಿಕಾರ್ಜುನ, ಪ್ರೇಮಾ, ಭಾವನಾ, ತರುಣ ವಿಜಯಶ್ರೀ ಅವರನ್ನು ಹಾಗೂ ಪತ್ರಕರ್ತರನ್ನು ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ, ಶಿವಯೋಗಿ ಬಣಕಾರ, ಅನೀಲ ಮೈನಾಳಕರ್, ಸುರೇಶ ಕುಲಕರ್ಣಿ ಮರಲಿಂಗ ಯಾದಗಿರಿ, ಶಕೀಲ ಪಟೇಲ, ಜಾಕೀರ ಸೇಠ, ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ವಿಜಯಕುಮಾರ ಸೇರಿದಂತೆ ಇತರರು ಇದ್ದರು. 
ಭರತ ಧನ್ನಾ ನಿರೂಪಿಸಿದರು. ಶಂಕರ ಜಾನಾ ಕ್ರಾಂತಿ ಗೀತೆ ಹಾಡಿದರು. ಮೌಲಾನ ವಂದಿಸಿದರು.


ಶಹಾಬಾದ ವಿಜೃಂಭಣೆಯ ಡಾ.ಅಂಬೇಡ್ಕರ ಜಯಂತಿ

ಶಹಾಬಾದ ನಗರ ಸಭೆ ಕಚೇರಿಯ ಮುಂದೆ ಇರುವ ಡಾ.ಅಂಬೇಡ್ಕರ ಪುತ್ಥಳಿಗೆ ನಗರ ಸಭೆ ಅಧ್ಯಕ್ಷೆ ಚಂಪಾಬಾಯಿ ಮೇಸ್ತಿç ಮಾಲಾರ್ಪಣೆ ಮಾಡಿದರು. ಡಾ.ಎಂ.ಎ.ರಶೀದ, ಜಗದೀಶ ಚೌರ, ಮಲ್ಲಿನಾಥ ರಾವೂರ, ಡಾ.ಕೆ.ಗುರುಲಿಂಗಪ್ಪ, ಮರೆಪ್ಪ ಹಳ್ಳಿ ಇತರರು ಇದ್ದರು. 

ಶಹಾಬಾದ ವಿಜೃಂಭಣೆಯ ಡಾ.ಅಂಬೇಡ್ಕರ ಜಯಂತಿ. 
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಅವರ ೧೩೪ನೇ ಜಯಂತೋತ್ಸವ ವಿಜೃಂಭಣೆಯಿAದ ನಡೆಯಿತು. ಸರಕಾರಿ ಕಚೇರಿ ಸೇರಿದಂತೆ ನಗರದ ವಿವಿಧ ಬಡಾವಣೆಗಳಲ್ಲಿ, ವೃತ್ತಗಳಲ್ಲಿ ಡಾ.ಅಂಬೇಡ್ಕರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಲಾಯಿತು. ಯುವಕರಿಂದ ಬೈಕ್ ರ‍್ಯಾಲಿ ನಡೆಯಿತು. ನಗರ ಸಭೆ ಕಚೇರಿಯಲ್ಲಿ ಅಧ್ಯಕ್ಷೆ ಚಂಪಾಬಾಯಿ ಮೇಸ್ತಿç ಡಾ.ಅಂಬೇಡ್ಕರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಕಚೇರಿಯಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ ಜಗದೀಶ ಚೌರ, ಜಿಲ್ಲಾ ಕಾಡಾ ಅಧ್ಯಕ್ಷ ಡಾ.ಎಂ.ಎ.ರಶೀದ, ತಾಪಂ.ಇಒ ಮಲ್ಲಿನಾಥ ರಾವೂರ, ಗ್ರೇಡ್ -೨ ತಹಶೀಲ್ದಾರ ಗುರುರಾಜ ಸಂಗಾವಿ, ಪೌರಾಯುಕ್ತ ಡಾ.ಕೆ.ಗುರುಲಿಂಗಪ್ಪ, ಎಇಇ ಶರಣು ಪೂಜಾರಿ,  ನಗರ ಸಭೆ ಉಪಾಧ್ಯಕ್ಷೆ ಫಾತೀಮಾ ಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷೆ ಪೀರಮ್ಮಾ ಪಗಲಾಪುರ, ದಸಂಸ ರಾಜ್ಯ ಸಂ.ಸAಚಾಲಕ ಮರೆಪ್ಪ ಹಳ್ಳಿ, ಕರಾದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಕರಣಿಕ, ನಿಂಗಣ್ಣ ಪೂಜಾರಿ, ಸುರೇಶ ಮೆಂಗನ್, ಶಿವರಾಜ ಕೋರೆ, ಶಂಕರ ಅಳ್ಳೊಳ್ಳಿ, ವಿಜಯಕುಮಾರ ಹಳ್ಳಿ, ನಾಗರಾಜ ಸಿಂಘೆ, ಸಾಹೇಬಗೌಡ ಬೊಗುಂಡಿ, ಕಿರಣ ಕೋರೆ, ಶರಣು ಪಗಾಲಾಪುರ, ಬಾಕ್ರೋದ್ದಿನ್ ಸೇಠ್,ಡಾ.ಅಹ್ಮದ ಪಟೇಲ, ಸಾಬೇರಾ ಬೇಗಂ, ನಾಗೇಂದ್ರ ಕರಣಿಕ, ಸೇರಿದಂತೆ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.  ಜಯಂತೋತ್ಸವ ನಿಮಿತ್ತ ತಾಪಂ. ಪಂಚಾಯತ ಕಚೇರಿಯಲ್ಲಿ ಹಾಗೂ ಬಸವೇಶ್ವರ ವೃತ್ತದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. 
 ಡಿವೈಎಸ್‌ಪಿ ಕಚೇರಿಯಲ್ಲಿ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪೊಲೀಸ್ ಠಾಣೆಯಲ್ಲಿ ಪಿಐ ನಟರಾಜ ಲಾಡೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸಿಬ್ಬಂದಿ ವರ್ಗದವರು ಇದ್ದರು. 


Advertisement

Advertisement

Copyright © 2025 Vijay Times News. All Rights Reserved. Website by Samanth