Breaking News


ಶಹಾಬಾದ ಜಗದಂಬಾ ದೇವಿ ಉತ್ಸವ ಪ್ರಾರಂಭ | ದೇಶ | Vijay Times News

ಶಹಾಬಾದ ಜಗದಂಬಾ ದೇವಿ ಉತ್ಸವ ಪ್ರಾರಂಭ

ಚಿತ್ರ: ೧ ಎಸ್‌ಬಿಡಿ ೨  ಶ್ರೀ ಜಗದಂಬಾ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ದೇವಿಯ ಉತ್ಸವ ಮೂರ್ತಿ ಸ್ಥಾಪಿಸಿರುವುದು. 

ಶಹಾಬಾದ ಜಗದಂಬಾ ದೇವಿ ಉತ್ಸವ ಪ್ರಾರಂಭ
ಸAಭ್ರಮ ಸಡಗರದಿಂದ ನವರಾತ್ರಿಯ ಕಾರ್ಯಕ್ರಮಗಳು ಚಾಲನೆ
ವಿಜಯ ಟೈಮ್ಸ್ ನ್ಯೂಸ್ 
ಶಹಾಬಾದ ಆದಿಶಕ್ತಿ ಜಗನ್ಮಾತೆ ಜಗದಂಬಾ ಉತ್ಸವಕ್ಕೆ ೪೮ ವರ್ಷದ ಸಂಭ್ರಮ ಪ್ರಾರಂಭದಲ್ಲಿ ೧೯೬೪-೧೯೬೫ ರಲ್ಲಿ ದೇವಿಯ ಭಾವಚಿತ್ರಕ್ಕೆ ಪೂಜೆ ಮಾಡುವ ಮೂಲಕ ಪ್ರಾರಂಭವಾದ ನವರಾತ್ರಿಯ ಉತ್ಸವಕ್ಕೆ ನಗರದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ೯ ದಿನ ನವರಾತ್ರಿಯ ಸಂದರ್ಭದಲ್ಲಿ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ. 
ಮಹಾರಾಷ್ಟçದ ತುಳಜಾಪು ಮಾದರಿಯಲ್ಲಿ ನಡೆಯುವ ಇಲ್ಲಿನ ನವರಾತ್ರಿ ಉತ್ಸವಕ್ಕೆ ದೇಶದ ಮೂಲೆ ಮೂಲೆಯಿಂದ ಸಾವಿರಾರು ಜನ ಹರಿದು ಬರುವುದು ವಿಶೇಷ!  ನಲವತ್ತು ಎಂಟು ವರ್ಷಗಳ ಹಿಂದೆ ಅಂದಿನ ಪುರಸಭೆ  ಅಧ್ಯಕ್ಷರಾಗಿದ್ದ ಬಾಬುರಾವ ಮಹೇಂದ್ರಕರ್ ದಾನ ಮಾಡಿದ ಸ್ಥಳದಲ್ಲಿ ಪಟ್ಟಣದ ಹೃದಯ ಭಾಗದಲ್ಲಿ ಪುಟ್ಟ ಮಂದಿರ ನಿರ್ಮಾಣವಾಯಿತು. ದೇವಿಯ ಭಕ್ತರಾದ ಡಾ.ಅಂಬಾದಾಸ ಜಿಂಗಾಡೆ, ಕೊಂಡಿಭರಾವ ತಾಂದಳೆ, ನಾರಾಯಣ ತೇಲ್ಕರ್, ನರಸಪ್ಪ ಪುಸಲೆ, ಹೀರಾಲಾಲ ಹಿಬಾರೆ, ದಿಗಂಬರ ಕಠಾರೆ, ಹಣಮಂತರಾವ ಉತ್ತರಕರ್ ಅಂತಹ ಪ್ರಮುಖರ ವಯಕ್ತಿಕ ದಾನದಿಂದ ಒಂಬತ್ತು ದಿನಗಳ ಉತ್ಸವಕ್ಕೆ ನಾಂದಿಯಾಯಿತು. ಹಿಂದೆ ಸಣ್ಣ ಪ್ರಮಾಣದಲ್ಲಿ ಆರಂಭವಾದ ಉತ್ಸವಕ್ಕೆ ತುಳಜಾಪುರ ಮಂದಿರದಲ್ಲಿರುವ ದೇವಿಯನ್ನು ಹೋಲುವ ಆಕರ್ಷಕ ಮೂರ್ತಿಯನ್ನು ಸ್ಥಾಪಿಸಿಲಾಯಿತು. ನಂತರ ಭಕ್ತರೊಬ್ಬರು ನೀಡಿದ ಉತ್ಸವ ಮೂರ್ತಿ ಒಂಬತ್ತು ದಿನಗಳ ಕಾಲ ನವರಾತ್ರಿ ಉತ್ಸವದಲ್ಲಿ ಸ್ಥಾಪನೆ ಮಾಡಲ್ಪಡುತ್ತದೆ. ಪ್ರತಿವರ್ಷದ ಉತ್ಸವದಲ್ಲಿ ಘಟಸ್ಥಾಪನೆ, ದೀಪಾಲಂಕಾರ, ದೇವಿಯ ಅಲಂಕಾರ ಸಾವಿರಾರು ಭÀಕ್ತಾದಿಗಳನ್ನು ಆಕರ್ಷಿಸುತ್ತದೆ. ಉತ್ಸವದ ನಂತರ ದೇವಿಯ ಶಯನ ಕೋಣೆಗೆ ವಿಜಯದಶಮಿಯ ದಿನದಂದು ಎಲ್ಲಿಲ್ಲದ ಮಹತ್ವ. ಅಂದು ಮಧ್ಯರಾತ್ರಿ ಕೋಣೆಯನ್ನು ಮುಚ್ಚಿ ಮತ್ತೆ ಹುಣ್ಣಿಮೆಯಂದು ಸಾರ್ವಜನಿಕರಿಗೆ ತೆರೆದು ವಿಶೇಷ ಪೂಜೆ ಮಾಡಲಾಗುತ್ತದೆ. ಪ್ರತಿವರ್ಷ ಆಷಾಢದಲ್ಲಿ ವಿಶೇಷ ಕಾರ್ಯಕ್ರಮ, ಯುಗಾದಿಯ ದೀಪೋತ್ಸವ ನೆಡೆಯುತ್ತವೆ. ಮಂದಿರ ವ್ಯಾಪ್ತಿಯ ಸಭಾಗೃಹ ಹಾಗೂ ಕಲ್ಯಾಣ ಮಂಟಪ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುತ್ತಿದೆ. ಸರ್ಕಾರದ ಯಾವುದೆ ಸಹಾಯವಿಲ್ಲದೆ ಕೇವಲ ಭಕ್ತಾದಿಗಳ ಆರ್ಥಿಕ ನೆರವಿನೊಂದಿಗೆ ಚಟುವಟಿಕೆಗಳು ನಡೆಯುತ್ತಿವೆ. .

Copyright © 2025 Vijay Times News. All Rights Reserved. Website by Samanth