Breaking News


ಪ್ರಾಥಮಿಕ ಶಾಲಾ ಸರಕಾರಿ ನೌಕರರ ಚುನಾವಣೆ ಪ್ರಚಾರ  | ಜಿಲ್ಲೆ | Vijay Times News

ಪ್ರಾಥಮಿಕ ಶಾಲಾ ಸರಕಾರಿ ನೌಕರರ ಚುನಾವಣೆ ಪ್ರಚಾರ 

ಪ್ರಾಥಮಿಕ ಶಾಲಾ ಸರಕಾರಿ ನೌಕರರ ಚುನಾವಣೆ ಪ್ರಚಾರ 
ಬಿ.ಇ.ಓ ಕಾರ್ಯಾಲಯ ಪ್ರಾರಂಭಿಸಲು ಒತ್ತಾಯ : ಕರಣಿಕ 

ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ತಾಲೂಕು ಕೇಂದ್ರವೆAದು ಘೋಷಣೆಯಾಗಿ ದಶಕಗಳೆ ಕರೆದರು ಇಲ್ಲಿಯವರೆಗೆ ಕೆಲವು ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಸರಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ, ಶೀಘ್ರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಪ್ರಾರಂಭಿಸಲು ಸರಕಾರದ ಮೇಲೆ ಒತ್ತಡ ತರುವದಾಗಿ ಶಿವಪುತ್ರ ಕರಣಿಕ ಹೇಳಿದರು. 
ಅವರು ತೊನಸನಳ್ಳಿ (ಎಸ್) ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಕಾರಿ ನೌಕರರ ಸಂಘದ ಚುನಾವಣೆ ಪ್ರಯುಕ್ತ ಪ್ರಜಾ ಸತ್ತಾತ್ಮಕ ಶಿಕ್ಷಕರ ಪೆನಲಾ ಪರವಾಗಿ ಪ್ರಚಾರ ನಡೆಸುತ್ತ ಪತ್ರಿಕೆಯೊಂದಿಗೆ ಮಾತನಾಡಿ, ತಾಲೂಕು ಘೋಷಣೆಯಾಗಿ ೧೨ ವರ್ಷವಾದರು ಶಿಕ್ಷಕರು, ಪೋಷಕರು, ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕೆಲಸಕ್ಕಾಗಿ ದೂರದ ಚಿತ್ತಾಪುರಕ್ಕೆ ಅಲೆಯುವದು ತಪ್ಪುತ್ತಿಲ್ಲ, ಇದನ್ನು ತಪ್ಪಿಸಲು ಈ ಚುನಾವಣೆಯಲ್ಲಿ ತಮ್ಮ ಪೇನಲ್‌ನ್ನು ಬಹುಮತದಿಂದ ಗೆಲ್ಲಿಸಬೇಕಾಗಿ ಮನವಿ ಮಾಡಿದರು. 
ಶಿಕ್ಷಕ ಬನ್ನಪ್ಪ ಸೈದಾಪುರ ಮಾತನಾಡಿ ನಗರದಲ್ಲಿ ಸಿಎ ನಿವೇಶ ಪಡೆದು ಸರಕರಿ ಭವನ ನಿರ್ಮಾಣ, ಪ್ರತಿ ವರ್ಷ ಶಿಕ್ಷಕರಿಗೆ ಆದಾಯ ತೆರಿಗೆ ನಮೂನೆ ೧೯ನ್ನು ಉಚಿತವಾಗಿ ವಿತರಿಸಲಾಗುವದು, ಜ್ಯೋತಿ ಸಂಜೀವಿನ ಅಡಿಯಲ್ಲಿ ಎಲ್ಲಾ ಶಿಕ್ಷಕರಿಗೆ ಉಚಿತ ಚಿಕಿತ್ಸೆ ನೀಡುವುದರ ಜೊತೆಗೆ ಹಲವಾರ ಅಭಿವೃದ್ದಿ ಯೋಜನೆಗಳನ್ನು ನಮ್ಮ ಪೇನಲ್ ಹಾಕಿಕೊಂಡಿದೆ ಎಂದು ಹೇಳಿದರು. ಚುನಾವಣೆ ಪ್ರಚಾರದಲ್ಲಿ ಸುಲೋಚನಾ ಜಾಧವ, ರೀಹಾನಾ ಪರವೀನ್, ಶಿವಲಿಂಗಪ್ಪ ಹೆಬ್ಬಾಳಕರ್, ಕಮಲಾ ಹಿರೇಮಠ, ನಝೀರ್ ಮುಲ್ಲಾ, ನರಸಪ್ಪ, ಹಬೀಬ್, ಶರಫೋದ್ದೀನ್, ಶರಣಮ್ಮ ಇತರರು ಇದ್ದರು.

Copyright © 2025 Vijay Times News. All Rights Reserved. Website by Samanth