ಕಾರ್ಮಿಕ ಹೋರಾಟಗಾರ ಡಾ.ಮಲ್ಲೇಶಿ ಸಜ್ಜನ ಇನಿಲ್ಲ
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ಶಹಾಬಾದ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರ ನೋವಿಗೆ ಧ್ವನಿಯಾಗಿದ್ದ ಕಾರ್ಮಿಕ ಹೋರಾಟಗಾರ ಡಾ.ಮಲ್ಲೇಶಿ ಸಜ್ಜನ ಅವರು ಬುಧವಾರ ಬೆಳಗ್ಗೆ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿಯೇ ದಲಿತ ಹೋರಾಟ, ಕಾರ್ಮಿಕರ ಹೋರಾಟದಲ್ಲಿ ಮುಂಚುಣಿಯಲ್ಲಿದ್ದ ಹೋರಾಟಗಾರ ಡಾ.ಮಲ್ಲೇಶಿ ಸಜ್ಜನ ಅವರು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಜೆ.ಪಿ.ಕಾರ್ಖಾನೆಯ ಕಾರ್ಮಿಕ ಮುಖಂಡರಾಗಿ ಕಾರ್ಮಿಕ ನೋವಿಗೆ ಸ್ಪಂದಿಸಿ ಅವರ ಜೊತೆ ಹೋರಾಟ ಮಾಡಿ ಕಾರ್ಮಿಕರಿಗೆ ನ್ಯಾಯ ಒದಗಿಸುತ್ತಿದ್ದರು. ಸರಳ, ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದರು. ಸಾಮಾನ್ಯ ಜನರೊಂದಿಗೆ ಸಾಮಾನ್ಯರಾಗಿ ಒಡನಾಡಿಯಾಗಿದ್ದರು.
ಮೃತರು ೮೦ ದಶಕದಲ್ಲಿ ದಲಿತ ಸಂಘರ್ಷ ಸಮಿತಿ ಹುಟ್ಟು ಹಾಕುವಲ್ಲಿ, ಅದರ ಬೆಳವಣಿಗೆ ಹೋರಾಟದಲ್ಲಿ ಕರಾದಸಂಸ ರಾಜ್ಯ ಸಂಚಾಲಕ ಡಾ.ಡಿ.ಜಿ.ಸಾಗರ ಅವರೊಂದಿಗೆ ನಿರಂತರ ದಲಿತ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ೧೯೯೭ ರಲ್ಲಿ ಶಹಾಬಾದ ನಗರದ ಪ್ರತಿಷ್ಠಿತ ಎಚ್‌ಎಂಪಿ ಸಿಮೆಂಟ್ ಕಾರ್ಖಾನೆ ಮುಚ್ಚಲ್ಪಟ್ಟು, ನೂರಾರು ಜನ ಕಾರ್ಮಿಕರು ಉದ್ಯೋಗವಿಲ್ಲದ ಬೀದಿಗೆ ಬಿದ್ದಾಗ, ಕೋಲ್ಕತ್ತಾದ ಡಿಆರ್‌ಟಿ ನ್ಯಾಯಾಲಯದಲ್ಲಿ ನಿರಂತರ ಕಾನೂನು ಹೋರಾಟದ ಮೂಲಕ ಪೂನಾ ಮೂಲಕ ಜವ್ಹಾರ ಅವರು ಕಾರ್ಖಾನೆಯನ್ನು ಖರೀದಿಸಿ, ಕಾರ್ಖಾನೆಯ ನೂರಾರು ಜನ ಕಾರ್ಮಿಕರಿಗೆ ಉದ್ಯೋಗ ದೊರಕುವಂತೆ ಶ್ರಮಿಸಿದ್ದರು. ಕಾರ್ಮಿಕ ಮುಖಂಡರಾಗಿ, ನ್ಯಾಯವಾದಿಯಾಗಿ, ಉಪನ್ಯಾಸಕರಾಗಿ ದೇಶದ ವಿವಿಧ ಭಾಗದಲ್ಲಿ ಉಪನ್ಯಾಸ ನೀಡಿ ಸೇವೆ ಸಲ್ಲಿಸಿ, ಕಳೆದ ಆರು ತಿಂಗಳಿನಿAದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು.
೮೦ರ ದಶಕದಲ್ಲಿ ದಲಿತ ಚಳವಳಿಯಲ್ಲಿ ಪಾಲ್ಗೊಳ್ಳುವ ಮೂಲಕ ಹಲವಾರು ಹೋರಾಟಗಳಲ್ಲಿ ಭಾಗವಹಿಸಿದ್ದರು. ಅಲ್ಲದೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸಿ ಅವರ ಜೊತೆ ಆಡಳಿತ ಮಂಡಳಿಯವರ ವಿರುದ್ಧ ಹೋರಾಟ ಮಾಡುವ ಛಲ ಹೊಂದಿದ್ದರು.
ಸುಮಾರು ಐದಾರು ತಿಂಗಳಿAದ ಅನಾರೋಗ್ಯದಿಂದ ಹಾಸಿಗೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ, ಬುಧವಾರ ಬೆಳಗ್ಗೆ ಕೊನೆಯುಸಿರೆಳೆದರು.
ಶೋಕ ವ್ಯಕ್ತ :
ಕದಸಂಸ ರಾಜ್ಯ ಸಂಚಾಲಕರಾದ ಡಿ.ಜಿ ಸಾಗರ ಹಾಗೂ ಹೆಣ್ಣೂರು ಶ್ರೀನಿವಾಸ, ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ, ಜೆ. ಪಿ ಕಾರ್ಮಿಕ ಸಂಘದ ಅಧ್ಯಕ್ಷ ಮಹ್ಮದ ಉಬೇದುಲ್ಲಾ, ಡಿ. ಡಿ ಓಣಿ, ಪೌರಾಯುಕ್ತ ಡಾ. ಗುರುಲಿಂಗಪ್ಪ, ಕದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ, ನಿಂಗಪ್ಪ ಹುಳಗೋಳ, ರಾಜೇಶ ಯನಗುಂಟಿಕರ, ಶರಣು ಪಗಲಾಪೂರ, ಡಾ. ಅಹ್ಮದ ಪಟೇಲ ಸೇರಿದಂತೆ ಅಪಾರ ಶಿಷ್ಯ ವೃಂದದವರು ಅನೇಕರು ಶೋಕ ವ್ಯಕ್ತಪಡಿಸಿದ್ದಾರೆ.
Copyright © 2025 Vijay Times News. All Rights Reserved.
Website by Samanth