Breaking News


ಎಲ್‌ಎಲ್‌ಎಫ್‌ಯಿಂದ ಸ್ವಚ್ಛತೆ ಅಭಿಯಾನ | ಜಿಲ್ಲೆ | Vijay Times News

ಎಲ್‌ಎಲ್‌ಎಫ್‌ಯಿಂದ ಸ್ವಚ್ಛತೆ ಅಭಿಯಾನ

ಎಲ್‌ಎಲ್‌ಎಫ್‌ಯಿಂದ ಸ್ವಚ್ಛತೆ ಅಭಿಯಾನ
ವಯಕ್ತಿಕ ಸ್ವಚ್ಛತೆಯ ಅರಿವು ತಿಳಿಯಬೇಕು 
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ 
ಸ್ವಚ್ಛತಾ ಬಗ್ಗೆ ಜನರಿಗೆ ಮೊದಲು ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಸ್ವಚ್ಛತೆಯ ಮಹತ್ವ ತಿಳಿಯುತ್ತದೆ,  ನಮ್ಮ ಸುತ್ತಮುತ್ತಲಿನ ಪರಿಸರ ನಿರ್ಮಲವಾಗಿ ಇಟ್ಟುಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಆರೋಗ್ಯ ಹಾಳಾಗಲು ದಾರಿಯಾಗುತ್ತದೆ ಎಂದು ತರನಳ್ಳಿ ಶಾಲೆಯ ಮುಖ್ಯಗುರು ಶಿವಲಿಂಗಪ್ಪ ಹೆಬ್ಬಾಳಕರ್ ಹೇಳಿದರು. 
ಅವರು ನಗರದ ಹೊನಗುಂಟಾ ಕ್ಲಸ್ಟರ್‌ನ ಎಎಲ್ ಹಾಗೂ ಎಲ್‌ಎಲ್‌ಎಫ್ ಸಂಸ್ಥೆಯ ವತಿಯಿಂದ ತರನಳ್ಳಿ ಗ್ರಾಮದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು.  
ಸಾರ್ವಜನಿಕರು ಸ್ವಚ್ಛತೆಯನ್ನು ಸೇವೆ ಎಂದು ಪರಿಗಣಿಸುವ ಮೂಲಕ ತಮ್ಮ ಮನೆ, ಬಡಾವಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು, ವಿವಿಧ ಸಂಘ ಸಂಸ್ಥೆಗಳು ಸಾರ್ವಜನಿಕರಿಗೆ ಸ್ವಚ್ಛತೆಯ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಶ್ರಮದಾನ, ಸ್ವಚ್ಛತೆಯ ಪ್ರಜ್ಞೆ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು. 
ಎಲ್‌ಎಲ್‌ಎಫ್ ಅಧಿಕಾರಿ ಕೃಷ್ಣ ಅವರು ಮಾತನಾಡಿ ಸಮುದಾಯವನ್ನು ಸ್ಥಳೀಯವಾಗಿ ಸರ್ಕಾರೇತರ ಸಂಸ್ಥೆ, ಆರೋಗ್ಯ ಇಲಾಖೆ, ಸ್ವಚ್ಛತೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಹೇಳಿದರು. 
ಮುಖಂಡರಾದ ಅಪ್ಪು ಗೌಡ ಪೊಲೀಸ್ ಪಾಟೀಲ್, ಗ್ರಾಪಂ ಅಧ್ಯಕ್ಷೆ ನಿರ್ಮಲ ಶಿವಕುಮಾರ,  ಉಪಾಧ್ಯಕ್ಷರಾದ ಚನ್ನಪ್ಪ ಕುಂಬಾರ, ಎಸ್‌ಡಿಎಮ್‌ಸಿ ಅಧ್ಯಕ್ಷ ಶಿವಮೂರ್ತಿ, ಸಿಹೆಚ್‌ಓ ಮಹ್ಮದ ಶಹನವಾಜ್, ಮುಖ್ಯಗುರು ಶಿವಲಿಂಗಪ್ಪ ಹೆಬ್ಬಾಳಕರ್, ಪಿಎಸ್‌ಇಓ ಅಧಿಕಾರಿ ನೀಲಾವತಿ, ಎಲ್‌ಎಲ್‌ಎಫ್ ಸಂಸ್ಥೆಯ ಶಿಕ್ಷಕಿ ಜ್ಯೋತಿ ಹಾಗೂ ಶಿಕ್ಷಕಿಯರು, ತರನಳ್ಳಿ ಗ್ರಾಮದ ಮುಖಂಡರು, ಯುವಕರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದರು. 

Copyright © 2025 Vijay Times News. All Rights Reserved. Website by Samanth