Breaking News


ಭಗವಾನ ಮಹಾವೀರ ಜಯಂತಿ ಆಚರಣೆ | ಜಿಲ್ಲೆ | Vijay Times News

ಭಗವಾನ ಮಹಾವೀರ ಜಯಂತಿ ಆಚರಣೆ

ಚವ್ಹಾಣ್ ಶಿಕ್ಷಣ ಸಂಸ್ಥೆಯಲ್ಲಿ ಭಗವಾನ ಮಹಾವೀರ ಜಯಂತಿ ಆಚರಣೆ
ಸತ್ಯ- ಶಾಂತಿ ಮಾರ್ಗದಲ್ಲಿ ನಡೆದ ಚೇತನ
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ಸಮಾಜದಲ್ಲಿ ಸತ್ಯ ಮತ್ತು ಶಾಂತಿಯ ಕಡೆಗೆ ಕೊಂಡೊಯ್ದು, ತಾವು ಅದೇ ಮಾರ್ಗದಲ್ಲಿ ನಡೆದ ಮಹಾನ್ ಚೇತನ ವರ್ಧಮಾನ ಮಹಾವೀರ ಎಂದು ಉಪನ್ಯಾಸಕಿ ರೇಷ್ಮಾ ದೋತ್ರೆ ಹೇಳಿದರು. ಅವರು ನಗರದ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರದ ಸಭಾಗೃಹದಲ್ಲಿ ನಡೆದ ಭಗವಾನ ಮಹಾವೀರರ ಜಯಂತಿ ಕಾರ್ಯಕ್ರಮ ಚಾಲನೆ ನೀಡಿ ಮಾತನಾಡಿದರು. ಜಗತ್ತಿಗೆ ಆಧ್ಯಾತ್ಮದ ಚಿಂತನೆಯನ್ನು ಜೈನ ಧರ್ಮದ ತೀರ್ಥಂಕರರಾದ ಮಹಾವೀರರು ನೀಡಿದ್ದಾರೆ. ಮಹಾವೀರರ ತತ್ವ, ಮೌಲ್ಯ ಮತ್ತು ಅವರು ಬೋಧಿಸಿದ ೫ ಪಂಚಶೀಲ ತತ್ವಗಳಾದ ಸತ್ಯ, ಅಹಿಂಸೆ, ಅಪರಿಗ್ರಹ, ಕ್ಷಮೆ ಮತ್ತು ಬ್ರಹ್ಮಚರ್ಯವನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಸುಖ ಶಾಂತಿಯಿAದ ಸಹಬಾಳ್ವೆಯಿಂದ ಜೀವನ ನಡೆಸಬಹುದು ಎಂದು ಹೇಳಿದರು. ಶಿಕ್ಷಕಿಯರಾದ ಸಾನೀಯಾ, ದೇವಿಕಾ, ರೇಣುಕಾ, ಸಿಬ್ಬಂದಿ ವರ್ಗದವರು ಹಾಗೂ  ವಿದ್ಯಾರ್ಥಿಗಳು ಪಾಲ್ಗೊಂಡಿದರು. 

Copyright © 2025 Vijay Times News. All Rights Reserved. Website by Samanth