ಶಹಾಬಾದ ತಾಲೂಕಿನ ಭಂಕೂರನ ಎಸ್‌ಬಿಐ ಬ್ಯಾಂಕ್‌ನಿAದ ಡಾ.ಅಂಬೇಡ್ಕರ ಜಯಂತೋತ್ಸವ ನಿಮಿತ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು. ವ್ಯವಸ್ಥಾಪಕ ದೀಪಕ ಕುಮಾರ, ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ, ಮುಖಂಡರಾದ ಸುರೇಶ ಮೆಂಗನ್, ಭರತ ಧನ್ನಾ, ಮೌಲಾನಾ ಇತರರು ಇದ್ದರು.
ಡಾ.ಅಂಬೇಡ್ಕರ ಜಯಂತಿ ಪ್ರಯುಕ್ತ
ಎಸ್‌ಬಿಐನಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ.
ವಿಜಯ ಟೈಮ್ಸ್ ನ್ಯೂಸ್ ಕಲಬುರಗಿ
ತಾಲೂಕಿನ ಭಂಕೂರನ ಎಸ್‌ಬಿಐ ಬ್ಯಾಂಕ್ ವತಿಯಿಂದ ಡಾ.ಅಂಬೇಡ್ಕರ ಅವರು ೧೩೪ನೇ ಜಯಂತೋತ್ಸವ ನಿಮಿತ್ತ ಬ್ಯಾಂಕ್ ವ್ಯಾಪ್ತಿಗೆ ಬರುವ ಗ್ರಾಮಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ, ಹಾಗೂ ಪತ್ರಕರ್ತರಿಗೆ, ಸತ್ಕರಿಸುವ ಮೂಲಕ ಆಚರಿಸಲಾಯಿತು.
ಬ್ಯಾಂಕ್ ವ್ಯವಸ್ಥಾಪಕ ದಿಲೀಪ ಕುಮಾರ ಅವರು ಡಾ.ಅಂಬೇಡ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ,ಮಾಲಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ.ಅಂಬೇಡ್ಕರ ೧೩೪ನೇ ಜಯಂತೋತ್ಸವ ಸಮಿತಿ ಗೌರವ ಅಧ್ಯಕ್ಷ ಸುರೇಶ ಮೆಂಗನ್ ಮಾತನಾಡಿ ಬ್ಯಾಂಕ್‌ನಲ್ಲಿ ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ, ಅವರನ್ನು ಉತ್ತೇಜಿಸುವ ಕಾರ್ಯ ಶ್ಲಾಘನೀಯವಾಗಿದೆ. ಅಂಬೇಡ್ಕರ ಬದುಕು, ಸಾಧನೆ ಮಕ್ಕಳಿಗೆ ಹೊಸ ಸ್ಫೂರ್ತಿ ತರಲಿದೆ ಎಂದು ಹೇಳಿದರು. ಪತ್ರಕರ್ತ ಲೋಹಿತ ಕಟ್ಟಿ, ಮೌಲಾನಾ ಮಾತನಾಡಿದರು.
ಕಳೆದ ಬಾರಿ ಹತ್ತನೇ ತರಗತಿಯಲ್ಲಿ ಹೆಚ್ಚು ಅಂಕ ಪಡೆದ ಕರಿಷ್ಮಾ, ಪೂಜಾ, ಮಲ್ಲಿಕಾರ್ಜುನ, ಪ್ರೇಮಾ, ಭಾವನಾ, ತರುಣ ವಿಜಯಶ್ರೀ ಅವರನ್ನು ಹಾಗೂ ಪತ್ರಕರ್ತರನ್ನು ಸತ್ಕರಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾಪಂ.ಅಧ್ಯಕ್ಷ ಶರಣಬಸಪ್ಪ ಧನ್ನಾ, ಶಿವಯೋಗಿ ಬಣಕಾರ, ಅನೀಲ ಮೈನಾಳಕರ್, ಸುರೇಶ ಕುಲಕರ್ಣಿ ಮರಲಿಂಗ ಯಾದಗಿರಿ, ಶಕೀಲ ಪಟೇಲ, ಜಾಕೀರ ಸೇಠ, ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ವಿಜಯಕುಮಾರ ಸೇರಿದಂತೆ ಇತರರು ಇದ್ದರು.
ಭರತ ಧನ್ನಾ ನಿರೂಪಿಸಿದರು. ಶಂಕರ ಜಾನಾ ಕ್ರಾಂತಿ ಗೀತೆ ಹಾಡಿದರು. ಮೌಲಾನ ವಂದಿಸಿದರು.
Copyright © 2025 Vijay Times News. All Rights Reserved.
Website by Samanth