Breaking News


ಕಾರ್ಮಿಕ ವಿಮಾ ಆಸ್ಪತ್ರೆಯನ್ನು ಶಹಾಬಾದ್ ತಾಲೂಕ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಸೂಕ್ತ ಕ್ರಮ | ಜಿಲ್ಲೆ | Vijay Times News

ಕಾರ್ಮಿಕ ವಿಮಾ ಆಸ್ಪತ್ರೆಯನ್ನು ಶಹಾಬಾದ್ ತಾಲೂಕ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಸೂಕ್ತ ಕ್ರಮ

ತಾಲೂಕ ಆಸ್ಪತ್ರೆಯಾಗಿ, ಇಎಸ್‌ಐ
ಸೂಕ್ತ ಕ್ರಮ: ಡಾ.ಶರಣಪ್ರಕಾಶ
ಪಾಟೀಲ ಅಶ್ವಾಸನೆ. 
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ನಗರದ ಹೊರ ವಲಯದ ರಾಷ್ಟಿçÃಯ ಹೆದ್ದಾರಿ ೧೫೦ ರಲ್ಲಿ ಜೆಪಿ ಸಿಮೆಂಟ್ ಕಾರ್ಖಾನೆಯ ಬಳಿ ಇರುವ ರಾಜ್ಯ ಕಾರ್ಮಿಕ ವಿಮಾ ಆಸ್ಪತ್ರೆಯನ್ನು ಶಹಾಬಾದ್ ತಾಲೂಕ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಸೂಕ್ತ ಕ್ರಮ ಕೈಗೊಳ್ಳುವದಾಗಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅಶ್ವಾಸನೆ ನೀಡಿದ್ದಾರೆ ಎಂದು ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ ತಿಳಿಸಿದ್ದಾರೆ.
ಶುಕ್ರವಾರ ಬೆಂಗಳೂರಿನ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರ ಕಚೇರಿಯಲ್ಲಿ ಬೇಟ್ಟಿ ಮಾಡಿದ ಡಾ.ರಶೀದ ಅವರು ಕೋವಿಡ್ ಮೂರನೇ ಹಂತದ ನಿರ್ವಾಹಣೆಗೆ ಸುಮಾರು ೧೨ ಕೋ.ರೂ. ವೆಚ್ಚದಲ್ಲಿ ಇಎಸ್‌ಐ ಆಸ್ಪತ್ರೆಗೆ ಮೇಲ್ದರ್ಜೆಗೆ ಏರಿಸಲಾಗಿದ್ದು, ಅದನ್ನು ನೂತನ ತಾಲೂಕವಾದ ಶಹಾಬಾದ್ ತಾಲೂಕ ಆಸ್ಪತ್ರೆಯನ್ನಾಗಿ ಮಾರ್ಪಡಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದಾಗಿ, ಸ್ಪಂದಿಸಿದ ಸಚಿವರು, ಕೂಡಲೇ ರಾಜ್ಯ ವೈದ್ಯಕೀಯ ಇಲಾಖೆ ಕಾರ್ಯದರ್ಶಿ ಅವರಿಗೆ ಸಂಪರ್ಕಿಸಿ, ವಿಮಾ ಆಸ್ಪತ್ರೆಯನ್ನು ಕಾರ್ಮಿಕ ಇಲಾಖೆಯಿಂದ ನಿಯಮಾನುಸಾರ ಸುಪರ್ಧಿಗೆ ತೆಗೆದುಕೊಂಡು ತಾಲೂಕ ಆಸ್ಪತ್ರೆಯಾಗಿ ಮಾಡಲು ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು. 
ಜೆಪಿ,ಜಿಈ ನಗರ ಸಭೆ ವ್ಯಾಪ್ತಿಗೆ 
ನಗರದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿರುವ ಜೆಪಿ ಸಿಮೆಂಟ್ ಕಾರ್ಖಾನೆ ಹಾಗೂ ಜಿಈ ಕಾರ್ಖಾನೆಗಳ ಕಾಲೋನಿಯಲ್ಲಿ ನಿವಾಸಿಗಳ ಸಂಖ್ಯೆ ಕಡಿಮೆ ಇದ್ದು, ಈಗೀರುವ ಅಧಿಸೂಚಿತ ಪ್ರದೇಶವನ್ನು ಕೈಬಿಟ್ಟು, ಈ ಎರಡು ಕಾಲೋನಿಗಳನ್ನು ನಗರ ಸಭೆ ವ್ಯಾಪ್ತಿಗೆ ಸೇರಿಸಿದಲ್ಲಿ ಈ ಭಾಗದ ಸ್ವಚ್ಚತೆ, ನೀರು ಸರಬರಾಜು, ಅಭಿವೃದ್ದಿಗೆ ಅನುಕೂಲವಾಗುತ್ತದೆ ಎಂದು ಬಿಸಿಸಿ ಅಧ್ಯಕ್ಷ ಡಾ.ಎಂ.ಎ.ರಶೀದ ಅವರು ಜಿಲ್ಲಾ ಉಸ್ತುವಾರಿ, ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಂಕ್ ಖರ್ಗೆ ಅವರಿಗೆ  ಬೆಂಗಳೂರಿನ ಕಚೇರಿಯಲ್ಲಿ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಿವಾನಂದ ಪಾಟೀಲ, ಮಾಣಿಕಗೌಡ ಪಾಟೀಲ, ಅಜೀತ್ ಕುಮಾರ ಪಾಟೀಲ, ಹಾಶಮ್ ಖಾನ್, ಅಜೀಂ ಸೇಠ, ಮೃತ್ಯುಂಜಯ ಸ್ವಾಮಿ, ಸೇರಿದಂತೆ ಹಲವಾರು ಜನ ಮುಖಂಡರು ಇದ್ದರು.

Copyright © 2025 Vijay Times News. All Rights Reserved. Website by Samanth