Breaking News


ಮಸ್ಕಿಯ ಗಾಂಧಿ-೧೫೫ ವಿಚಾರ ಸಪ್ತಾಹ | ಕಲೆ ಸಾಹಿತ್ಯ | Vijay Times News

ಮಸ್ಕಿಯ ಗಾಂಧಿ-೧೫೫ ವಿಚಾರ ಸಪ್ತಾಹ


ಸತ್ಯ-ಮಿಥ್ಯಗಳ ನಡುವಿನ ಮಸ್ಕಿಯ ಗಾಂಧಿ-೧೫೫ ವಿಚಾರ ಸಪ್ತಾಹ
ಭಾರತದಲ್ಲಿ ೧೫೫ ವರ್ಷಗಳ ಹಿಂದೆ ಜನಿಸಿದ ಮೋಹನದಾಸ್ ಕರಮಚಂದ್ ಗಾಂಧಿ ಮಹಾತ್ಮನಾದದ್ದು ಈಗ ಇತಿಹಾಸ. ವಿಚಿತ್ರವೆಂದರೆ ಈ ಮಹಾಪುರುಷನ ಕುರಿತಂತೆ ಈಗಲೂ ದೇಶದ ತುಂಬಾ ಗಂಭೀರ ಚರ್ಚೆಗಳು ಆತ ತೀರಿಕೊಂಡು ಏಳು ದಶಕಗಳೇ ಕಳೆದಿದ್ದರೂ ಇಂದಿಗೂ ನಡೆಯುತ್ತಲೆ ಇವೆ. ಈ ಚರ್ಚೆಗಳು ಗಾಂಧೀಜಿಯವರನ್ನು ಕುರಿತಂತೆ ಸತ್ಯ ಹೇಳುವ ಅಥವಾ ಮಿಥ್ಯ ಪ್ರಕಟಗೊಳಿಸುವ ಪ್ರಯತ್ನದ ಹಿನ್ನೆಲೆಯಲ್ಲೆ ಏನೇಲ್ಲ ನಡೆದರೂ ಗಾಂಧೀಜಿ ಬರಹಗಾರರಿಂದ ಹಿಡಿದು, ವಿದ್ವಾಂಸರವರೆಗೆ, ಕವಿಗಳಿಂದ ಹಿಡಿದು ರಾಜಕಾರಣಿಗಳ ವರೆಗೂ ಈಗಲೂ ಜೀವಂತವಿರುವ ಒಂದು ಅಚ್ಚರಿಯ ಶಕ್ತಿ! 
ವಕೀಲರಾಗಿ, ಹೋರಾಟಗಾರರಾಗಿ, ಚಳುವಳಿಗಳ ರೂವಾರಿಯಾಗಿ, ಪತ್ರಕರ್ತರಾಗಿ, ಬರಹಗಾರರಾಗಿ ಗಾಂಧೀಜಿ ರೂಪುಗೊಂಡದ್ದು ಅಸಾಮಾನ್ಯ. ಬುದ್ಧ, ಕ್ರಿಸ್ತ, ಬಸವಣ್ಣ, ಮಾರ್ಟಿನ್ ಲೂಥರ್ ಕಿಂಗ್, ಲೇನಿನ್, ಮಾರ್ಕ್ಸ, ಮಾಕ್ಸಿಂ ಗೋರ್ಕಿ, ಟಾಲಸ್ಟಾಯ್, ಪಾಬ್ಲೋ ನೋಡ, ಆಲ್ಬರ್ಟ್ ಐನಸ್ಟಿನ್, ರವೀಂದ್ರನಾಥ ಟಾಗೋರ್, ಬಾಬಾಸಾಹೇಬ್ ಅಂಬೇಡ್ಕರ್ ಅವರೊಂದಿಗೆ ಹೋಲಿಸುವ ಚುಂಬಕ ಶಕ್ತಿಯ ಚಿಂತಕ ವ್ಯಕ್ತಿತ್ವ ಗಾಂಧೀಜಿಯವರದು. `ಒಥಿ ಐiಜಿe is ಒಥಿ ಒessಚಿge’(ನನ್ನ ಜೀವನವೆ ನನ್ನ ಸಂದೇಶ) ಎನ್ನುವ ಸಂದೇಶವನ್ನು ಮಹಾತ್ಮಾ ಗಾಂಧೀಜಿಯವರೂ ಯಾವಾಗಲೂ ಕೊಟ್ಟಿದ್ದರೂ ಅವರ ಬದುಕೂ ಈಗಲೂ ನಮಗೆ ಹೊಸ ಹೊಸ ಹೊಳಹುಗಳನ್ನು ನೀಡುತ್ತಲೇ ಬಂದಿದೆ. ಇಷ್ಟಿದ್ದರೂ ದೇಶದಲ್ಲಿ ನಡೆಯುತ್ತಿರುವ ಹಲವು ಬಗೆಯ ಸಮಸ್ಯೆಗಳು ಯಾವುದೋ ಒಂದು `ಇಸಂ’ಗೆ ಜೋತು ಬಿದ್ದು ನಮ್ಮ ಜನಮಾನಸದ ಬದುಕನ್ನು, ಸಮಾಜದ ಆರೋಗ್ಯವನ್ನು, ಸಮುದಾಯದ ಒಗ್ಗಟ್ಟನ್ನು ಇನ್ನಷ್ಟು, ಮತ್ತಷ್ಟು ಸಂಕಿರ್ಣಗೊಳಿಸುತ್ತಿರುವುದು ಸಧ್ಯ ಕಂಡುಬರುತ್ತಿರುವ ತಲ್ಲಣ.
ಹೀಗಿದ್ದರೂ ಗಾಂಧಿ ಜೊತೆಗಿನ ಅನುಸಂಧಾನವೆAದರೆ ಅದು ಬೌಧ್ಧಿಕ ಕಸರತ್ತಿನ ಜೊತೆಗಿನ ಚಿಂತನ ಮಂಥನ, ಸ್ವಾತಂತ್ಯ ಹೋರಾಟದ ಜೀವನ ಮೌಲ್ಯಗಳು ಮಾಯವಾಗುತ್ತಿರುವ ಈ ಸಂದರ್ಭದಲ್ಲಿ,  ನವಜನಾಂಗದಲ್ಲಿ ಗಾಂಧಿಯ ಕುರಿತ ವಿಕೃತ ಭಾವನೆ ಮೂಡುತ್ತಿರುವ ಕಾಲದಲ್ಲಿ ಈ ಚಿಂತನೆಗಳು ಅಗತ್ಯ ಎನಿಸದೆ ಇರಲಾರದು. ಇದು ಈಗಿನ ಸಂದರ್ಭದಲ್ಲಿ  ತೀವ್ರ ಅಗತ್ಯ ಮತ್ತು  ಮಹತ್ವಪೂರ್ಣ ಎನಿಸುತ್ತಿದೆ.
ಕವಿ ಜಿ.ಎಸ್.ಶಿವರುದ್ರಪ್ಪ ಕವಿತೆಯೊಂದರಲ್ಲಿ ಹೀಗೆ ಹೇಳಿದ್ದಾರೆ: 
`ಗಾಂಧಿ ಹೇಳುತ್ತಾರೆ:
ತೆರೆದಿಡುತ್ತೇನೆ ಈ ನನ್ನ ಮನೆಯ ಕಿಟಕಿ ಬಾಗಿಲುಗಳನು ಅಗಲವಾಗಿ
ಬರಲಿ ಈ ಇದರೊಳಗೆ ಜಗತ್ತಿನೆಲ್ಲಾ
ಗಾಳಿ ಬೆಳಕುಗಳು  ನಿರಾತಂಕವಾಗಿ’

`ನಾನಾದರೋ ಯಾವ ಗಾಳಿಗಳ ದಾಳಿಗೂ
ಹೊಯ್ದಾಡದಂತೆ ಕಾಲೂರಿ ನಿಲ್ಲುತ್ತೇನೆ
ಈ ನೆಲದಲ್ಲಿ  ಸುಭದ್ರವಾಗಿ’ 
ಗಾಂಧೀಜಿ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಈ ಅಂಶವನ್ನು ನಿಜವಾಗಿಸಿದ್ದಾರೆ.                                 ****
ರಾಯಚೂರು ಜಿಲ್ಲೆಯ ಮಸ್ಕಿಯ ಲವಲವಿಕೆಯ ಗೆಳೆಯರಾದ ಮಹಾಂತೇಶ ಮಸ್ಕಿ, ಗುಂಡುರಾವ್ ದೇಸಾಯಿ, ಪರಶುರಾಮ ಕೋಡಗುಂಟಿ, ಮತ್ತಿತರ ಸಮಾನ ಮನಸ್ಕ ಗೆಳೆಯರು ೨೦೧೬ ರಲ್ಲಿ ಅಕ್ಷರ ಸಾಹಿತ್ಯ ವೇದಿಕೆ ಆರಂಭಿಸಿದರು. ೨೦೧೮ ರಲ್ಲಿ ಕವಿಗೋಷ್ಠಿಯೊಂದಿಗೆ ಗಾಂಧಿ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗಾಂಧಿಜೀಯವರ ೧೫೦ ನೇ ಜಯಂತಿಯ ಪ್ರಯುಕ್ತ ಆರಂಭವಾದ ಗಾಂಧಿ ಚಿಂತನೆಯ ವಿಚಾರಗಳು ಕಳೆದ ಆರು ವರ್ಷಗಳಿಂದ ನಿರಂತರವಾಗಿ ನಡೆದುಬರುತ್ತಿವೆ, ಗಾಂಧಿ ವಿಚಾರ ಸಪ್ತಾಹ ನಡೆಯುತ್ತಿರುವುದು ಇದೆ ಮೊದಲು. 
ಅಕ್ಷರ ಸಾಹಿತ್ಯ ವೇದಿಕೆ, ಬಂಡಾರ ಪ್ರಕಾಶನ ಹಾಗೂ ಕನ್ನಡ ಸಾಹಿತ್ಯ ಪರಿಷತ್‌ಗಳು ಒಟ್ಟಾರೆಯಾಗಿ ೨೦೨೪ ರ ಗಾಂಧಿ ಜಯಂತಿ ಆಚರಿಸಿದ್ದು ಮಾತ್ರ ವಿಶೇಷ ರೀತಿಯಲ್ಲಿ. ಮಸ್ಕಿಯ `ಮನೆ ಮನೆಗೆ ಗಾಂಧಿ’ü ಎನ್ನುವ ಧೇಯ ವಾಕ್ಯದೊಂದಿಗೆ ಒಂದು ವಾರದ ಚಿಂತನ ಮಂಥನದಲ್ಲಿ ಗಾಂಧೀಜಿ ಕುರಿತ ಹಲವು ಬಗೆಯ ಚಿಂತನೆಗಳು, ವಿದ್ವತ್‌ಪೂರ್ಣ ಮಾತುಗಳು, ಗಾಂಧೀ ಆತ್ಮ ಕತೆಯ ವಾಚನ, ವಿಚಾರ ಚಿಂತನೆ, ರಾಮಧುನ್, ಗಾಂಧೀ ಕುರಿತ ಕಾವ್ಯ ಪ್ರಸ್ತುತಿ ವಿಭಿನ್ನ ಮತ್ತು ವಿಶಿಷ್ಟ ಎನಿಸಿದವು.
೨೬.೯.೨೦೨೪ ರಂದು ಹಿರಿಯ ಸಾಹಿತಿ ಸಿ.ದಾನಪ್ಪ ಅವರಿಂದ ಉದ್ಘಾಟನೆಗೊಂಡ ಸಪ್ತಾಹ ನಿರಂತರವಾಗಿ ನಡೆದು ೨.೧೦೨೦೨೪ ರಂದು ಮಾಜಿ ಶಾಸಕ ಪ್ರತಾಪಗೌಡ ಪಾಟಲ ಅವರಿಂದ ಸಮಾರೋಪಗೊಂಡದ್ದು ದಾಖಲೆ.
ಗಾಂಧಿ ವಿಚಾರ ಚಿಂತನೆಯಲ್ಲಿ `ಗಾಂಧಿಯ ಹತ್ಯೆ ಮಾನವತೆಯ ಹತ್ಯೆ’(ಮಲ್ಲಯ್ಯ), `ಗಾಂಧೀಜಿ ಜೀವನ ವೃತ್ತಾಂತ’(ಆದಪ್ಪ ಹೆಂಬಾ,) `ಗಾಂಧಿ ಮತ್ತು ದಲಿತರು-ಒಂದು ಪರಾಮರ್ಶೆ’(ಎಕ್ಬಾಲ್ ಸಾಬ್), `ಗಾಂಧಿ ಮತ್ತು ಬಾಂಬ್ ಸಂಸ್ಕೃತಿ’(ಶAಕರ್ ಸಕ್ರಿ), `ಗಾಂಧಿ ಮತ್ತು ಅಪಪ್ರಚಾರ’(ವೀರೇಶ ಸೌದ್ರಿ), `ಅನ್ಯ ರಾಷ್ಟçಗಳಲ್ಲಿ ಗಾಂಧಿ’ü(ನೇತಾಜಿ ಗಾಂಧಿ), `ಗಾಂಧಿ ಮತ್ತು ಚರಕದ ವಿಶೇಷತೆ’(ಮಂಗಳಾ ಎಸ್), `ಎಲ್ಲರ ಗಾಂಧಿ’(ಶರಣಬಸವ ಗುಡದಿನ್ನಿ) ಹಾಗೂ ಗಾಂಧಿ ಕುರಿತ ಪ್ರಖರ ವಿಚಾರಗಳನ್ನು ಮಂಡಿಸಿದ (ಬಸವಂತರಾಯ ಕುರಿ), ಸಾಹಿತ್ಯದಲ್ಲಿ ಗಾಂಧಿ ಕುರಿತು (ಮಂಡಲಗಿರಿ ಪ್ರಸನ್ನ) ಮುದ ನೀಡಿದ ವಿಚಾರಗಳು.
ಕಾವ್ಯ ಪ್ರಸ್ತುತಿಯಲ್ಲಿ ರಾಮಸ್ವಾಮಿ, ಬಸ್ಸಪ್ಪ ಪೂಜಾರ, ಕಾಮಾಕ್ಷಿ ತೋಟದ್, ಷರೀಫ್ ಹಸಮಕಲ್, ದೇವರಾಜ್ ಗಂಟಿ, ಕೆ.ವರದೇಂದ್ರ, ಮಾಜಾನ್ ಮಸ್ಕಿ, ವಿಶ್ವನಾಥ ಕಂಬಾಳಿಮಠ, ಅಬ್ದುಲ್ ಗನಿ ಸಾಬ್, ಸೂಗೂರೇಶ ಹಿರೇಮಠ ಭಾಗವಹಿಸಿ, ಗಾಂಧೀಜಿ ಕುರಿತ ಕಾವ್ಯ ವಾಚನ ಮಾಡಿದರು. 
ನಿವೇದಿತಾ ಇತ್ಲಿ, ನಿರ್ಮಲಾ ಲದ್ದಿ, ರೋಹಿಣಿ ವರದೇಂದ್ರ, ಮಂಜುನಾಥ ಹಾಲಾಪೂರ, ಪಲ್ಲವಿ, ಉದಯ ಕೋಡಗುಂಟಿ, ಜೀವನ್ ಅಂಗಡಿ, ವಿಧಾತ್ರಿ, ಹರಿಪ್ರಿಯಾ, ಸುಧಾ ನಾಯ್ಕ ಅವರ ರಾಮ್ ಧುನ್, ಕಲಾವಿದ ವೆಂಕಟೇಶ ರಾಥೋಡ ಅವರ ಗಾಂಧಿ ಕುರಿತ ರೇಖಾಚಿತ್ರಗಳು ವಿಶೇಷ ಎನಿಸಿದವು.
ದೇಶದಲ್ಲಿ ಗಾಂಧೀ ಹೀಗೆ ಇನ್ನೂ ಜೀವಂತವಾಗಿದ್ದರೂ, ಇಷ್ಟೆಲ್ಲಗಳ ನಡುವೆಯೂ ಆಗಾಗ ಕವಿ ಗೋಪಾಲಕೃಷ್ಣ ಅಡಿಗರ ಕವಿತೆ ಮೂಲಕ ನೆನಪಾಗುತ್ತಾರೆ:
`ನಿನ್ನ ಕಂಡು ಬೆರಗಾದರು, ನಿನಗೆ ನಮೋ ಎಂದರು
ನಿನ್ನ ಹೊಗಳಿ ಹಾಡಿದರು, ಹಣ್ಣು ಕಾಯಿ ತಂದರು
ನಿನ್ನ ಪಥವ ಮರೆತು ನಿನ್ನ ಪದಕೆ ಬಿದ್ದ ಅಂಧರು
ನಿನಗೆ ಗುಡಿಯ ಕಟ್ಟಿ ತಾವು ಬಚ್ಚಲಲ್ಲಿ ನಿಂದರು
ಅಮೃತಬAದು ಮನೆಯ ಮುಂದೆ ಹರಿಯುತ್ತಿದ್ದರು
ವಿಷವನರಸಿ ಹೊರಟರಯ್ಯೋ ಈ ಮತಾಂಧರು’ 
ಗಾಂಧಿಯನ್ನು ದೇವರು ಮಾಡಿ ಪೂಜಿಸಬೇಕಿಲ್ಲ, ಬದಲಿಗೆ ಗಾಂಧಿಯ ಚಿಂತನೆಗಳನ್ನು ಗೌರವಿಸಿ, ಪೂಜಿಸಬೇಕಿದೆ. ಸಮಾಜದ ಸ್ವಾಸ್ಥö್ಯಕ್ಕಾಗಿ ಇದು ತೀರ ಅಗತ್ಯವಾಗಿದೆ.
-    ಮಂಡಲಗಿರಿ ಪ್ರಸನ್ನ , ಸಂಪಾದಕರು, ವಿಜಯ ಟೈಮ್ಸ್ ನ್ಯೂಸ್ ಬೆಂಗಳೂರ. 

Copyright © 2025 Vijay Times News. All Rights Reserved. Website by Samanth