ಶಹಾಬಾದ ತಾಲೂಕಿನ ಭಂಕೂರ ಶಾಂತನಗರದ ಬಸವ ಸಮಿತಿಯಲ್ಲಿ ನಡೆದ ಬಸವ ತತ್ವ ದರ್ಶನ, ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮವನ್ನು ಚಿಂತಕ ಬಸವರಾಜ ವೆಂಕಟಾಪುರ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡುವದರೊಂದಿಗೆ ಉದ್ಘಾಟಿಸಿದರು.
ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಬಸವ ತತ್ವದಲ್ಲಿವೇ: ವೆಂಕಟಾಪೂರ.
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ
ಪ್ರತಿಭಟನೆಗಳಿಂದ ಸ್ಥಾನ ಪಲ್ಲಟವಾಗಬಹುದು, ಆದರೆ ಅದು ಸಮಸ್ಯೆಗಳಿಗೆ ಶಾಶ್ವತ ಪರಿಹಾರವಲ್ಲ, ಅದರೆ, ಸಮಾಜದ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಬಸವ ತತ್ವದಲ್ಲಿದೆ ಎಂದು ಶಿರಗುಪ್ಪಾ ಬಸವ ಭವನದ, ಬಸವ ತತ್ವ ಚಿಂತಕ ಬಸವರಾಜ ವೆಂಕಟಾಪುರ ಅಭಿಪ್ರಾಯ ಪಟ್ಟರು.
ಅವರು ಗುರುವಾರ ಭಂಕೂರನ ಬಸವ ನಗರದ ಬಸವ ಮಂಟಪದಲ್ಲಿ ಬಸವ ಸಮಿತಿ ವತಿಯಿಂದ ಆಯೋಜಿಸಿದ್ದ ಶ್ರೀ ಬಸವೇಶ್ವರ ಮೂರ್ತಿ ಅನಾವರಣದ ವಾರ್ಷಿಕೋತ್ಸವ ಹಾಗೂ ಶ್ರೀಬುತ್ತಿ ಬಸವಲಿಂಗ ಪ್ರತಿಷ್ಠಾಪನೆಯ 27ನೇ ವಾರ್ಷಿಕೋತ್ಸವ ನಿಮಿತ್ತ ಅಯೋಜಿಸಿದ್ದ ಬಸವ ತತ್ವ ದರ್ಶನ, ಆಧ್ಯಾತ್ಮಿಕ ಚಿಂತನ ಕಾರ್ಯಕ್ರಮದಲ್ಲಿ ಮಾರ್ಗದರ್ಶನ ನೀಡುತ್ತ ಮಾತನಾಡಿ, ಕಾಯ್ದೆ ಕಾನೂನುಗಳಿಂದ ಬದಲಾವಣೆ ಸಾಧ್ಯವಿಲ್ಲ, ಸಮಾಜದಲ್ಲಿ ಪರಸ್ಪರ ಹೊಂದಾಣಿಕೆಯಿAದ ಮಾತ್ರ ಬದಲಾವನೆ ಸಾಧ್ಯ, ಬಸವ ತತ್ವ ಎಂದರೆ, ಹೊಂದಾಣಿಕೆ ಎಂದು ಹೇಳಿದರು.
ಶಿಕ್ಷಕ ಬಸವರಾಜ ಮುಗಳಖೊಡ, ಪತ್ರಕರ್ತ ಕೆ.ರಮೇಶ ಭಟ್ಟ ಮಾತನಾಡಿದರು. ಶರಣಬಸಪ್ಪ ನಂದಿ ವೇದಿಕೆ ಮೇಲೆ ಇದ್ದರು. ಬಸವ ಸಮಿತಿ ಅಧ್ಯಕ್ಷ ನೀಲಕಂಠ ಮಾದುಗೋಳಕರ್ ಅಧ್ಯಕ್ಷತೆ ವಹಿಸಿದ್ದರು.
ಬಿ.ಕೆ.ವೀರಣ್ಣ ವಚನಗಾಯನ ಮಾಡಿದರು, ರೇವಣಸಿದ್ದಪ್ಪ ಮುಸ್ತಾರಿ ಸ್ವಾಗತಿಸಿದರು,್ಪ ಅಮೃತ ಮಾನಕರ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು, ಅಮರಪ್ಪ ವಂದಿಸಿದರು. ಕಾರ್ಯಕ್ರಮದಲ್ಲಿ ಗುರುಲಿಂಗಪ್ಪ ಪಾಟೀಲ,ವೀರಪ್ಪ ಕಲಶಟ್ಟಿ, ಹಣಮಂತರಾವ ದೇಸಾಯಿ, ಚಂದ್ರಕಾAತ ಅಲಮಾ, ಸಿದ್ದು ಹರವಾಳ ಸೇರಿದಂತೆ ಬಸವಾಭಿಮಾನಿಗಳು ಪಾಲ್ಗೊಂಡಿದ್ದರು.
Copyright © 2025 Vijay Times News. All Rights Reserved.
Website by Samanth