ಮೂಲಭೂತ ಸೌಲಭ್ಯಕ್ಕಾಗಿ ಪ್ರತಿಭಟನೆ
ವಿವಿಧ ಬೇಡಿಕೆಗೆ ಆಗ್ರಹಿಸಿ ಎಸ್‌ಯುಸಿಐ ಪ್ರತಿಭಟನೆ
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ನಗರದಲ್ಲಿ ಮೂಲಭೂತ ಸೌಲಭ್ಯಗಳು ಸಿಗದೆ ಜನರು ಸಂಕಷ್ಟಗಳು ಎದುರಿಸುತ್ತಿದ್ದಾರೆ, ಕನಿಷ್ಠ ಸೌಲಭ್ಯಗಳು ಕೊಡದ ನಗರಸಭೆ ಜನರ ಬಗ್ಗೆ ನಿಷ್ಕಾಳಜಿ ತೋರುತ್ತಿದೆ ಎಂದು ಕಮ್ಯುನಿಸ್ಟ್ ಪಕ್ಷದ ಕಾರ್ಯದರ್ಶಿ ಗಣಪತರಾವ ಕೆ ಮಾನೆ ಹೇಳಿದರು.
ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವತಿಯಿಂದ ಸೋಮವಾರ ನಗರದ ವಿವಿಧ ಬೇಡಿಕೆಗೆ ಆಗ್ರಹಿಸಿ ನಗರಸಭೆ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಶಹಾಬಾದ ಜನರು ಸ್ಮಾರ್ಟ್ ಸಿಟಿ ಕೇಳುತ್ತಿಲ್ಲ, ಕನಿಷ್ಟ ಮೂಲಭೂತ ಸೌಲಭ್ಯ ನೀಡುವಲ್ಲಿ ನಗರಸಭೆಯವರು ವಿಫಲರಾಗಿದ್ದಾರೆ, ರಸ್ತೆ ಚರಂಡಿ ಬೀದಿ ದೀಪ ಉದ್ಯಾನವನ ಗ್ರಂಥಾಲಯ ಮಹಿಳಾ ಶೌಚಾಲಯ ಮತ್ತು ಆಶ್ರಯ ಕಾಲೋನಿಯ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಲು ಹಲವು ಬಾರಿ ನಗರಸಭೆಗೆ ಮನವಿ ನೀಡಿದರು ಇಲ್ಲಿವರೆಗೂ ಯಾವುದೇ ಸಮಸ್ಯೆ ಬಗೆಹರಿಸದೆ ಇರುವುದು ಜನರ ಬಗ್ಗೆ ನಿಷ್ಕಾಳಜಿ ವಹಿಸುತ್ತಿರುವುದು ಸರಿಯಲ್ಲ ಎಂದು ಹೇಳಿದರು.
ನಗರ ಸಭೆ ಅಧ್ಯಕ್ಷರ ವಾರ್ಡಿನಲ್ಲಿಯೇ ಮಹಿಳೆಯರು ಬಯಲು ಶೌಚಾಲಯಕ್ಕಾಗಿ ಗಿಡ ಗಂಟೆಗಳ ಮಧ್ಯೆ ಹೋಗುವ ಪರಿಸ್ಥಿತಿ ಇದೆ ಎಂದು ಪಕ್ಷದ ಸದಸ್ಯೆ ಗುಂಡಮ್ಮ ಮಡಿವಾಳ ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯರಾದ ರಾಘವೇಂದ್ರ ಎಂ. ಜಿ, ರಾಜೇಂದ್ರ ಅತನೂರ್ ಮಾತನಾಡಿದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪೌರಾಯುಕ್ತ ಡಾ.ಕೆ ಗುರುಲಿಂಗಪ್ಪ ಮಾತನಾಡಿ ಹಂತ ಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು, ನಗಸಭೆಯ ಉಪಾಧ್ಯಕ್ಷೆ ಫಾತಿಮಾ ಬಾಕ್ರುದ್ದೀನ್, ಸದಸ್ಯರಾದ ಸೂರ್ಯಕಾಂತ ಕೋಬಾಳ ಅವರಿಗೆ ಮನೆ ಪತ್ರ ಸಲ್ಲಿಸಿದರು. ಬಸವೇಶ್ವರ ವೃತ್ತದಿಂದ ನಗರ ಸಭೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಜಗನ್ನಾಥ ಎಸ್,ಹೆಚ್, ರಘು ಪವಾರ್ ರಮೇಶ್ ದೇವಕರ, ಅಂಬಿಕಾ ಗುರಜಾಲಕರ, ರಾಧಿಕಾ ಚೌಧರಿ, ದೇವರಾಜ ಹೊನುಗುಂಟ ಸೇರಿದಂತೆ ವಿವಿಧ ಬಡಾವಣೆಯ ಸಾರ್ವಜನಿಕರು ಉಪಸ್ಥಿತರಿದ್ದರು.
Copyright © 2025 Vijay Times News. All Rights Reserved.
Website by Samanth