ಗೃಹ ಸಚಿವ ಅಮಿತ್ ಶಾ ದೇಶದ ಜನರಿಗೆ ಕ್ಷಮೇಯಾಚಿಸಬೇಕು
ಬಂಜಾರ ಸಮಾಜದಿಂದ ಶಾ ರಾಜೀನಾಮೆಗೆ ಒತ್ತಾಯ
೨೪ ಕಲಬುರಗಿ ಬಂದ್‌ಗೆ ಬಂಜಾರ ಸಮಾಜ ಬೆಂಬಲ್
ವಿಜಯ ಟೈಮ್ಸ್ ನ್ಯೂಸ್ ಶಹಾಬಾದ್
ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್‌ನಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಕುರಿತು ನೀಡಿದ್ದಾರೆ ಎನ್ನಲಾದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸಿ ಬಂಜಾರ ಸಮಾಜದ ವತಿಯಿಂದ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ಬಂಜಾರ ಸಮಾಜದ ಹಿರಿಯ ಮುಖಂಡ ಕಿಶನ ನಾಯಕ ಮಾತನಾಡಿ ಗೃಹ ಸಚಿವ ಅಮಿತ್ ಶಾ ದೇಶದ ಸಾರ್ವಜನಿಕರ ಮುಂದೆ ಕ್ಷಮೆ ಯಾಚಿಸಬೇಕು, ಕೇಂದ್ರ ಸಚಿವ ಸ್ಥಾನದಿಂದ ಅವರನ್ನು ಕೈ ಬಿಡಬೇಕು. ಪ್ರಪಂಚದಲ್ಲಿ ಸೂರ್ಯ, ಚಂದ್ರ ಎಷ್ಟು ಸತ್ಯವೋ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಗಳು ಅಷ್ಟೇ ಸತ್ಯವಾಗಿದೆ. ವಿಶ್ವದಲ್ಲೇ ಭಾರತದ ಗೌರವ ಹೆಚ್ಚಿಸಿದ ಕೀರ್ತಿ ಬಾಬಾಸಾಹೇಬರಿಗೆ ಇದೆ ಎಂದು ಹೇಳಿದರು. ಅಮಿತ್ ಶಾ ನೀಡಿರುವ ಹೇಳಿಕೆಯಿಂದ ಇಡೀ ದಲಿತ ಸಮುದಾಯಕ್ಕೆ ನೋವುಂಟಾಗಿದ್ದು, ೨೪ ರಂದು ನಡೆಯುತ್ತಿರುವ ಕಲಬುರಗಿ ಬಂದ್‌ಗೆ ಬಂಜಾರ ಸಮಾಜದ ವತಿಯಿಂದ ಸಂಪೂರ್ಣವಾಗಿ ಬೆಂಬಲ ಇದೆ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಮುಖಂಡ ಚಂದು ಜಾಧವ ಅವರು ಮಾತನಾಡುತ್ತ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ನೀಡುವ ಮೂಲಕ ಸರ್ವ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿದ್ದಾರೆ. ಇದೀಗ ಅಂಬೇಡ್ಕರ್ ಅವರ ವಿರುದ್ಧ ಅಗೌರವದ ಮಾತನಾಡಿದ ಅಮಿತ ಶಾಗೆ ತಕ್ಕ ಪಾಠ ಕಲಿಸಬೇಕು. ಅಂಬೇಡ್ಕರ್ ಅವರು ಸರ್ವರು ಸಮಾನತೆಯ ತತ್ವ ಹೇಳಿದವರು. ಅಮಿತ್ ಶಾ ಗೃಹ ಸಚಿವ ಸ್ಥಾನದಿಂದ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ಬಂಜಾರ ಸಮಾಜದ ಮುಖಂಡರಾದ ಕುಮಾರ ಚವ್ಹಾಣ್, ದಿಲೀಪ ನಾಯಕ, ದೇವರಾಜ ರಾಠೋಡ, ಸುನೀಲ ಚವ್ಹಾಣ್, ಕಿರಣ ಚವ್ಹಾಣ್, ನರಸಿಂಗ ರಾಠೋಡ, ವಿಜಯ ರಾಠೋಡ, ಮಧನಲಾಲ ನಾಯಕ, ಇತರರು ಇದ್ದರು.
Copyright © 2025 Vijay Times News. All Rights Reserved.
Website by Samanth