Breaking News


Latest News

View All

ಶಹಾಬಾದ ತಾಲೂಕಿನ ಭಂಕೂರ ವಾಡಾ ತಾಂಡದಲ್ಲಿ ನಡೆದ ಗಣರಾಜ್ಯೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಸಮಾಜ ಸೇವಕರಾದ ರಾಜು ಪವಾರ ಅವರು ನೀಡಿದರು.

ಶಹಾಬಾದ ತಾಲೂಕಿನ ಭಂಕೂರ ವಾಡಾ ತಾಂಡದಲ್ಲಿ ನಡೆದ ಗಣರಾಜ್ಯೋತ್ಸವದ ನಿಮಿತ್ತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯನ್ನು ಸಮಾಜ ಸೇವಕರಾದ ರಾಜು ಪವಾರ ಅವರು ನೀಡಿದರು.

ಭಂಕೂರ ವಾಡಾ ಶಾಲೆಯಲ್ಲಿ ಗಣರಾಜ್ಯೋತ್ಸವ ಸಂಭ್ರಮ 
 ಶಹಾಬಾದ್ 
ತಾಲೂಕಿನ ಭಂಕೂರ ವಾಡಾ ತಾಂಡದ  ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೭೭ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿಯಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಸಮಾಜ ಸೇವಕ ರಾಜು ಪವಾರ್ ಅವರು, "ಭಾರತದ ಸಂವಿಧಾನವು ನಮಗೆ ಹಕ್ಕು ಮತ್ತು ಜವಾಬ್ದಾರಿಗಳನ್ನು ನೀಡಿದೆ. ಇಂದಿನ ವಿದ್ಯಾರ್ಥಿಗಳು ಶಿಸ್ತು ಮತ್ತು ದೇಶಪ್ರೇಮವನ್ನು ಮೈಗೂಡಿಸಿಕೊಂಡು ಬೆಳೆಯಬೇಕು. ಶಿಕ್ಷಣದ ಜೊತೆಗೆ ಸಮಾಜದ ಏಳಿಗೆಗಾಗಿ ಶ್ರಮಿಸುವ ಗುಣವನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಬೇಕು," ಎಂದು ಕಿವಿಮಾತು ಹೇಳಿದರು. ಅಲ್ಲದೆ, ಶಾಲೆಯ ಅಭಿವೃದ್ಧಿಗೆ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸದಾ ಬೆಂಬಲವಾಗಿ ನಿಲ್ಲುವುದಾಗಿ ಅವರು ಭರವಸೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಗೋವರ್ಧನ ರಾಠೋಡ ಅವರು ವಹಿಸಿದ್ದರು. ಎಸ್‌ಡಿಎಮ್‌ಸಿ ಅಧ್ಯಕ್ಷರಾದ ಮಹಂತ ಜಾಧವ, ನಾರಾಯಣ ರಾಠೋಡ ಉಮಜಿ, ಗ್ರಾಮ ಪಂಚಾಯತ್ ಸದಸ್ಯರಾದ ಭರತ ಜಾಧವ ಅವರು ಉಪಸ್ಥಿತರಿದ್ದರು. ಶಿಕ್ಷಕರಾದ ಸಾವಿತ್ರಿ ಡಿ.ಕೆ. ನಿರೂಪಿಸಿದರು, ಜಗದೇವಪ್ಪ ಎಸ್.ಕೆ. ಸ್ವಾಗತಿಸಿದರು.   ಕಾರ್ಯಕ್ರಮದಲ್ಲಿ  ಗ್ರಾಮದ ಹಿರಿಯರು, ನಾಗರಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡಿದರು.


ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ, ಕುಂಕುಮಾರ್ಚನೆ 


 ಶಹಾಬಾದ್‌ನಲ್ಲಿ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮ. 

ಶಹಾಬಾದ್ ಪಾರ್ವತಿ ಕಲ್ಯಾಣ ಮಂಟಪದಲ್ಲಿ 
ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯ ಮಹಾ ಪಡಿಪೂಜೆ, ಕುಂಕುಮಾರ್ಚನೆ 

ಶಹಾಬಾದ್ 
ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಅಯ್ಯಪ್ಪ ಸ್ವಾಮಿ ಸನ್ನಿಧಿಯ ವತಿಯಿಂದ ಶ್ರೀ ಧರ್ಮಶಾಸ್ತ ಅಯ್ಯಪ್ಪ ಸ್ವಾಮಿಯವರ ವಿಶೇಷ ಪೂಜಾ ಕೈಂಕರ್ಯಗಳು, ಮಹಾ ಪಡಿಪೂಜೆ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮಕರ ಸಂಕ್ರಾAತಿಯ ನಂತರದ ಈ ಪುಣ್ಯಕಾಲದಲ್ಲಿ ನಡೆಯುವ ಪಡಿಪೂಜೆಯು ಅತ್ಯಂತ ಪವಿತ್ರವಾಗಿದ್ದು, ಹದಿನೆಂಟು ಮೆಟ್ಟಿಲುಗಳಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ದೀಪಾರಾಧನೆಯೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಲಿದೆ. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದಲೇ ಗಣಪತಿ ಪೂಜೆ, ಅಭಿಷೇಕ ಹಾಗೂ ಭಕ್ತಾದಿಗಳಿಂದ ಸಾಮೂಹಿಕ ಕುಂಕುಮಾರ್ಚನೆ ಜರುಗಲಿದೆ.
ನಡೆಯುವ ಮಹಾ ಪಡಿಪೂಜೆಯಲ್ಲಿ ಭಜನಾ ಮಂಡಳಿಗಳಿAದ ಭಜನೆ ಹಾಗೂ ನಂತರ ಮಹಾಪ್ರಸಾದ ವಿನಿಯೋಗವಿರುತ್ತದೆ. ನಗರದ ಹಾಗೂ ಸುತ್ತಮುತ್ತಲಿನ ಅಯ್ಯಪ್ಪ ಮಾಲಾಧಾರಿಗಳು ಮತ್ತು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಶಹಾಬಾದ ಅಯ್ಯಪ್ಪ ಸ್ವಾಮಿ ಸನ್ನಿಧಿಯ ಸೇವಾ ಸಮಿತಿ ಪದಾಧಿಕಾರಿಗಳು ವಿನಂತಿಸಿದೆ.
ಮಲ್ಲಿಕಾರ್ಜುನ ಇಂಗಳೇಶ್ವರ ಗುರುಸ್ವಾಮಿ, ಬಸವರಾಜ ಶೇರಿಕರ ಸ್ವಾಮಿ, ಡಾ.ವೆಂಕಟೇಶ ನಾಯಕೋಡಿ ಸ್ವಾಮಿ, ಡಾ.ಸಂಜಯ ಜಿಂಗಾಡೆ ಸ್ವಾಮಿ, ಬಸವರಾಜ ರೆಡ್ಡಿ ಸ್ವಾಮಿ, ಸುರೇಶ ಕುಂಟನಸ್ವಾಮಿ ಅವರು ಮಾಹಿತಿ ನೀಡಿದರು. 
ಪ್ರಮುಖ ಪೂಜೆಗಳು: ಮಹಾ ಪಡಿಪೂಜೆ, ಕುಂಕುಮಾರ್ಚನೆ, ಭಜನೆ ಹಾಗೂ ಪ್ರಸಾದ ವಿನಿಯೋಗ ಹೆಚ್ಚಿನ ಮಾಹಿತಿಗಾಗಿ ಅಥವಾ ಸಂಪರ್ಕಕ್ಕೆ:9632485501- 9448651899 - 9880219075


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಅವಿರೋಧ ಆಯ್ಕೆ


ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಸಚಿವ ಈಶ್ವರ ಖಂಡ್ರೆ ಅವಿರೋಧ ಆಯ್ಕೆ: ಅಣವೀರ ಇಂಗಿಶೆಟ್ಟಿ ಅವರಿಂದ ಅಭಿನಂದನೆ
ವಿಜಯ ಟೈಮ್ಸ್ ನ್ಯೂಸ್ ಬೆಂಗಳೂರ 
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಮಾಜದ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಈ ಪ್ರತಿಷ್ಠಿತ ಸ್ಥಾನಕ್ಕೆ, ಬೆಂಗಳೂರಿನಲ್ಲಿ ನಡೆದ ಮಹಾಸಭಾದ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈಶ್ವರ ಖಂಡ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಈ ಮಹತ್ವದ ಆಯ್ಕೆಯನ್ನು ವೀರಶೈವ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಕರ್ನಾಟಕ ರಾಜ್ಯ ಘಟಕದ ಉಪಾಧ್ಯಕ್ಷರಾದ ಅಣವೀರ ಇಂಗಿಶೆಟ್ಟಿ ಅವರು ಹೃತ್ಪೂರ್ವಕವಾಗಿ ಸ್ವಾಗತಿಸಿ, ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಸಮಾಜದ ಏಳಿಗೆಗೆ ಹೊಸ ಭರವಸೆ:  ಈ ಸಂದರ್ಭದಲ್ಲಿ ಮಾತನಾಡಿದ ಅಣವೀರ ಇಂಗಿಶೆಟ್ಟಿ ಅವರು, "ಈಶ್ವರ ಖಂಡ್ರೆ ಅವರು ಕಳೆದ ೧೩ ವರ್ಷಗಳಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಅಪಾರ ಅನುಭವ ಹೊಂದಿದ್ದಾರೆ. ಅವರ ತಂದೆ, ಲೋಕನಾಯಕ ದಿವಂಗತ ಭೀಮಣ್ಣ ಖಂಡ್ರೆ ಅವರು ಮಹಾಸಭೆಯನ್ನು ಕಟ್ಟಿ ಬೆಳೆಸಿದ ಹಾದಿಯಲ್ಲೇ ಈಶ್ವರ ಖಂಡ್ರೆ ಅವರು ಸಮಾಜವನ್ನು ಮುನ್ನಡೆಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಅವರ ನೇತೃತ್ವದಲ್ಲಿ ವೀರಶೈವ ಲಿಂಗಾಯತ ಸಮಾಜದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಗೆ ಹೊಸ ಚೈತನ್ಯ ಲಭಿಸಲಿದೆ," ಎಂದು ತಿಳಿಸಿದರು. ವೀರಶೈವ ಮತ್ತು ಲಿಂಗಾಯತ ಸಮಾಜದ ಒಗ್ಗೂಡಿಸುವುದಾಗಿ ಹೇಳಿ ಸಮಾಜಕ್ಕೆ ಬಲ ತುಂಬುವ ಕೆಲಸ ಮಾಡಿದ್ದಾರೆ,  ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿನಿಲಯದ ನಿರ್ಮಾಣ ಮಾಡುವುದಾಗಿ ಹೇಳಿರುವುದು ಶ್ಲಾಘನೀಯವಾಗಿದೆ,  ವೀರಶೈವ ಕೈಗಾರಿಕಾ ಮತ್ತು ವಾಣಿಜ್ಯ ಮಂಡಳಿ ಪರವಾಗಿ ಅಣವೀರ ಇಂಗಿಶೆಟ್ಟಿ ಅವರು, ಸಚಿವರ ಈ ಅವಧಿಯಲ್ಲಿ ಸಮಾಜದ ಉದ್ಯಮಿಗಳಿಗೆ ಮತ್ತು ಯುವ ಪೀಳಿಗೆಗೆ ಹೆಚ್ಚಿನ ಪ್ರೋತ್ಸಾಹ ಸಿಗಲಿ ಎಂದು ಆಶೀಸಿದ್ದಾರೆ. 
 


ಅಲ್ದಿಹಾಳ ಮರಿಯಮ್ಮ ದೇವಿ ಜಾತ್ರೆ

ಸಕಲ ಸಿದ್ಧತೆಯೊಂದಿಗೆ ದೇವಿ ಜಾತ್ರೆ
ಅಲ್ದಿಹಾಳ ಮರಿಯಮ್ಮ ದೇವಿ ಜಾತ್ರೆ – ಕುಂಭ ಮೆರವಣಿಗೆ - ಸಂಗೀತ ಕಾರ್ಯಕ್ರಮ – ಧರ್ಮಸಭೆ 


ತಾಲೂಕಿನ ಸುಕ್ಷೇತ್ರ ಅಲ್ದಿಹಾಳ ಗ್ರಾಮದಲ್ಲಿ ಶಕ್ತಿ ದೇವತೆ ಶ್ರೀಮರಿಯಮ್ಮದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮ ಮಂಗಳವಾರ ದಿ.೨೭ ರಿಂದ ಪ್ರಾರಂಭವಾಗುತ್ತಿದೆ. ೩ ದಿನಗಳ ಕಾಲ ನಡೆಯುವ ಜಾತ್ರಾಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ದೇವಸ್ಥಾನದ ಪೀಠಾಧಿಪತಿ ಪೂಜ್ಯ ರಾಜು ಪೂಜಾರಿ ಅವರು ತಿಳಿಸಿದರು. 
ದಿ.೨೭ ರಂದು ಬೆಳಗ್ಗೆ ೬ ಗಂಟೆಗೆ ಮರಿಯಮ್ಮ ದೇವಿಯ ಮೂರ್ತಿಗೆ ಮಹಾರುದ್ರಾಭಿಷೇಕ ವಿವಿಧ ಪೂಜೆಗಳನ್ನು ನೇರವೇರಿಸಿದ  ನಂತರ ಮಧ್ಯಾಹ್ನ ೧೧ ರಿಂದ ಮಹಾಪ್ರಸಾದ ನಡೆಯುತ್ತದೆ. 
ಸಂಜೆ ೬ ಗಂಟೆಗೆ ಕಟ್ಟಿಮನಿ ಹಿರೇಮಠ ಸಂಸ್ಥಾನ ಮಠದ ಪೂಜ್ಯ ಅಭಿನವ ಸಿದ್ಧಲಿಂಗ ಶಿವಾಚಾರ್ಯರರ ಸಾನಿಧ್ಯದಲ್ಲಿ ಧರ್ಮಸಭೆ ಜರುಗುತ್ತದೆ. ಶ್ರೀನಿವಾಸ ಸರಡಗಿಯ ಪೂಜ್ಯರಾದ ಅಪ್ಪಾರಾವ ದೇವಿ ಮುತ್ಯಾ ಅವರು ನೇತೃತ್ವ ವಹಿಸಲಿದ್ದಾರೆ. ಕಟ್ಟಿಸಂಗಾವಿಯ ವೇದಿ ಮೂರ್ತಿ ಬಸವಯ್ಯ ಸ್ವಾಮಿ ತಾತಾ ಮಹಾನಗರದ ಯಲ್ಲಾಲಿಂಗ ಪುಣ್ಯಾಶ್ರಮದ ಪೀಠಾಧಿಪತಿ ಜೇಮಸಿಂಗ ಮಹಾರಾಜರು ಅಧ್ಯಕ್ಷತೆ ವಹಿಸಲಿದ್ದು. ದೇವಸ್ಥಾನದ ಪೀಠಾಧಿಪತಿ ಪೂಜ್ಯ ರಾಜು ಪೂಜಾರಿ ಹಾಗೂ ರಾಜಕೀಯ ಮುಖಂಡರು ಸಮಾಜ ಸೇವಕರು ಧರ್ಮಸಭೆಯಲ್ಲಿ ಪಾಲ್ಗೊಳ್ಳವರು. ಧರ್ಮಸಭೆಯ ನಂತರ ವಾಸು ಚವ್ಹಾಣ್ ಅವರ ವಿಜಯ ಮೆಲೋಡಿಸ್ ಸಂಗೀತ ತಂಡದಿAದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 
ಬುಧವಾರ ದಿ.೨೮ ರಂದು ಮಾಣಿಕ ಗುತ್ತೇದಾರ ಅವರ ಮನೆಯಿಂದ ಘಟವನ್ನು ಗ್ರಾಮದ ಮುಖ್ಯ ರಸ್ತೆಯ ಮೂಲಕ ವಿವಿಧ ವಾದ್ಯಗಳೊಂದಿಗೆ ಭವ್ಯವಾಗಿ ಮೆರವಣಿಗೆ ದೇವಸ್ಥಾನಕ್ಕೆ ತಲುಪಲಿದ್ದು, ಮಧ್ಯಾಹ್ನ ರಫಿಕ್ ಮಾಲಿ ಪಟೇಲ್ ಅವರ ಮನೆಯಿಂದ ದೇವಿಗೆ ಛಾಜಾ ತಲುಪುವುದು ನಂತರ ಕಾಶಪ್ಪ ದೊಡ್ಡಮನಿ ಅವರು ಮನೆಯಿಂದ ಕುಂಭ, ಕಳಸ ದೇವಸ್ಥಾನಕ್ಕೆ ತರಲಾಗುತ್ತದೆ. ರಾತ್ರಿ ೯ ಗಂಟೆಗೆ ಶ್ರೀ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸುಂದರ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದ್ದು.
ಗುರುವಾರ ದಿ.೨೯ ರಂದು ಬೆಳಗ್ಗೆ ೮ ಕ್ಕೆ ಜಂಗಿ ಪೈಲವಾನರ ಕುಸ್ತಿ ಪಂದ್ಯ ನಡೆಯಲಿದ್ದು. ಶಕ್ತಿ ದೇವತೆ ಶ್ರೀ ಮರಿಯಮ್ಮ ದೇವಿಯ ಜಾತ್ರೆ ವಿವಿಧ ರಾಜ್ಯದಿಂದ ಭಕ್ತರು ಆಗಮಿಸಿ ದೇವಿಗೆ ಭಕ್ತಿಯನ್ನು ಸಮರ್ಪಿಸಲಾಗುತ್ತದೆ ಎಂದು ದೇವಸ್ಥಾನ ಸಮಿತಿಯವರು ತಿಳಿಸಿದರು. 
ಮುಂಬೈಯ ರಾಜು ಪವಾರ, ರಫೀಕ ಪಟೇಲ್ ಮಾಲಿಗೌಡ, ದೇವಸ್ಥಾನ ಸಮಿತಿಯವರು ಮಾಹಿತಿಯನ್ನು ನೀಡಿದ್ದಾರೆ. 


“ ಅಲ್ದಿಹಾಳ ಮರಿಯಮ್ಮ ದೇವಿಯ ದೇವಸ್ಥಾನದಲ್ಲಿ ಸರ್ವ ಸಮಾಜದವರು ಸೇವೆ ಮಾಡಿ ಆರಾಧನೆ ಮಾಡುವ ವಾಡಿಕೆ ಇದೆ, ಭಕ್ತರಿಗೆ ಜೀವನದಲ್ಲಿ ಒಳಿತು ಮಾಡುವ ದೇವಿಯ ಭಕ್ತರು ದೇಶದ ವಿವಿಧ ಕಡೆ ವಾಸವಾಗಿದ್ದು, ಜಾತ್ರೆಯಲ್ಲಿ ಬಂದು ದೇವಿಯ ಸೇವೆಯನ್ನು ಮಾಡಿ ತಮ್ಮ ಭಕ್ತಿಯನ್ನು ಸಮರ್ಪಿಸುತ್ತಾರೆ.  - ಪೂಜ್ಯ ರಾಜು ಪೂಜಾರಿ, ಪೀಠಾಧಿಪತಿ ಮರಿಯಮ್ಮ ದೇವಿ ದೇವಸ್ಥಾನ. 


Advertisement

Advertisement

Copyright © 2026 Vijay Times News. All Rights Reserved. Website by Samanth